ಮೊದಲು ಸಂಗೀತಾ, ನಂತರ ನಮ್ರತಾ ಜತೆ ಕ್ಲೋಸ್ ಆದ ಕಾರ್ತಿಕ್ಗೆ ಸುದೀಪ್ ಹೇಳಿದ್ದೇನು?
‘ನಮ್ರತಾ ಅವರಿಗೆ ಹೊಸ ಸ್ನೇಹಿತ ಸಿಕ್ಕಿದ್ದಾನೆ. ಹೌದೋ ಅಲ್ಲವೋ’ ಎಂದು ಸುದೀಪ್ ಕೇಳಿದ್ದಕ್ಕೆ ಬಹುತೇಕರು ‘ಹೌದು’ ಎಂದು ಉತ್ತರಿಸಿದ್ದಾರೆ. ‘ಫಸ್ಟ್ ಹಾಫ್ ನನ್ನ ಜೊತೆ ಸ್ನೇಹ ಇತ್ತು. ಆಮೇಲೆ ನಮ್ರತಾ ಅವರ ಜೊತೆ ಸ್ನೇಹ ಶುರುವಾಯಿತು’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ. ವೀಕೆಂಡ್ನಲ್ಲಿ ಈ ವಿಚಾರ ಚರ್ಚೆ ಆಗಿದೆ.
ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ಈಗ ಕೊನೇ ಹಂತವನ್ನು ತಲುಪುತ್ತಿದೆ. ಈ ಶೋನ ಆರಂಭದಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಅವರು ಸಂಗೀತಾ ಶೃಂಗೇರಿ ಜೊತೆ ಕ್ಲೋಸ್ ಆಗಿದ್ದರು. ನಂತರ ಅವರ ಜೊತೆ ಮನಸ್ತಾಪ ಮಾಡಿಕೊಂಡರು. ಬಳಿಕ ಅವರು ನಮ್ರತಾ ಗೌಡ ಜೊತೆ ಫ್ಲರ್ಟ್ ಮಾಡಲು ಆರಂಭಿಸಿದರು. ಈ ವಿಚಾರ ವೀಕೆಂಡ್ ಎಪಿಸೋಡ್ನಲ್ಲಿ ಚರ್ಚೆ ಆಗಿದೆ. ಅದರ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ಸಂಚಿಕೆ ಜನವರಿ 7ರಂದು ಟಿವಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಲೈವ್ ನೋಡಬಹುದು. ‘ನಮ್ರತಾ ಅವರಿಗೆ ಹೊಸ ಸ್ನೇಹಿತ ಸಿಕ್ಕಿದ್ದಾನೆ. ಹೌದೋ ಅಲ್ಲವೋ’ ಎಂದು ಸುದೀಪ್ ಕೇಳಿದ್ದಕ್ಕೆ ಬಹುತೇಕರು ‘ಹೌದು’ ಎಂದು ಉತ್ತರಿಸಿದ್ದಾರೆ. ‘ಫಸ್ಟ್ ಹಾಫ್ ನನ್ನ ಜೊತೆ ಸ್ನೇಹ ಇತ್ತು. ಆಮೇಲೆ ನಮ್ರತಾ ಅವರ ಜೊತೆ ಸ್ನೇಹ ಶುರುವಾಯಿತು’ ಎಂದು ಸಂಗೀತಾ ಶೃಂಗೇರಿ (Sangeetha Sringeri) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 07, 2024 09:42 AM
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!

