AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಹಿಸದ ರೀತಿಯಲ್ಲಿ ಮುನ್ನುಗ್ಗುತ್ತಿರುವ ವರ್ತೂರು ಸಂತೋಷ್, ಫಿನಾಲೆಗೆ ಬರ್ತಾರಾ?

Varthur Santhosh: ವರ್ತೂರು ಸಂತು ಅವರ ಈವರೆಗಿನ ಬಿಗ್​ಬಾಸ್ ಜರ್ನಿ ಬಹಳ ರೋಚಕವಾದುದು. ಏನೇನೋ ಆಗಿ ಕೊನೆಗೆ ಈಗ ಫಿನಾಲೆಗೆ ತಲುಪುವ ಹಂತಕ್ಕೆ ಬಂದು ನಿಂತಿದ್ದಾರೆ.

ಊಹಿಸದ ರೀತಿಯಲ್ಲಿ ಮುನ್ನುಗ್ಗುತ್ತಿರುವ ವರ್ತೂರು ಸಂತೋಷ್, ಫಿನಾಲೆಗೆ ಬರ್ತಾರಾ?
ವರ್ತೂರು ಸಂತೋಷ್
ಮಂಜುನಾಥ ಸಿ.
|

Updated on: Jan 10, 2024 | 11:15 PM

Share

ವರ್ತೂರು ಸಂತೋಷ್ (Varthur Santhosh) ಬಿಗ್​ಬಾಸ್​ ಮನೆಯ ಭಿನ್ನ ಸ್ಪರ್ಧಿ. ಮನೊರಂಜನಾ ಕ್ಷೇತ್ರಕ್ಕೆ ಸಂಬಂಧ ಪಡದ, ಅಪ್ಪಟ ಹಳ್ಳಿ ಹೈದ, ಅವರ ಮಾತು, ನಡೆ, ಟಾಸ್ಕ್ ಆಡುವ ರೀತಿ ಎಲ್ಲವೂ ಭಿನ್ನ. ಹಲವು ವಾರಗಳ ಹಿಂದೆಯೇ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂದೆನಿಸಿಕೊಂಡಿದ್ದ ವರ್ತೂರು ಜನರ ಬೆಂಬಲದಿಂದ ಫಿನಾಲೆಯ ಹೊಸ್ತಿಲ ವರೆಗೆ ಬಂದು ನಿಂತಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ವರ್ತೂರು ಸಂತೋಷ್, ಫಿನಾಲೆಗೆ ಸಮೀಪ ಬಂದಾಗ ಭಾರಿ ವೇಗ ಪಡೆದುಕೊಂಡಿದ್ದಾರೆ. ಊಹಿಸದ ರೀತಿ ಮುಂದೆ ಸಾಗುತ್ತಿದ್ದಾರೆ.

ಈ ವಾರ ಟಿಕೆಟ್ ಟು ಫಿನಾಲೆ ಹೆಸರಿನಲ್ಲಿ ಮನೆಯ ಸ್ಪರ್ಧಿಗಳಿಗೆ ಬಿಗ್​ಬಾಸ್ ಟಾಸ್ಕ್​ಗಳನ್ನು ನೀಡುತ್ತಿದ್ದಾರೆ. ಸ್ಪರ್ಧಿಗಳು ಆಡುವ ಟಾಸ್ಕ್ ಆಧರಿಸಿ ಅವರಿಗೆ ಪಾಯಿಂಟ್ಸ್​ಗಳನ್ನು ನೀಡಲಾಗುತ್ತಿದ್ದು, ಯಾರು ಹೆಚ್ಚು ಪಾಯಿಂಟ್ ಪಡೆಯುತ್ತಾರೆಯೋ ಅವರು ಫಿನಾಲೆಗೆ ನೇರ ಪ್ರವೇಶ ಪಡೆಯಲಿದ್ದಾರೆ. ಟಾಸ್ಕ್ ಆರಂಭವಾದಾಗ ಎಲ್ಲರೂ ಊಹಿಸಿದ್ದು, ವಿನಯ್, ಸಂಗೀತಾ, ಕಾರ್ತಿಕ್, ನಮ್ರತಾ, ಪ್ರತಾಪ್ ಅವರುಗಳು ಟಾಸ್ಕ್​ನಲ್ಲಿ ಮುಂದೆ ಇರುತ್ತಾರೆ ಎಂದು ಆದರೆ ವರ್ತೂರು ತಮ್ಮ ಪ್ರದರ್ಶನದಿಂದ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಟಾಸ್ಕ್​ಗಳಲ್ಲಿ ಬಹಳ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ವರ್ತೂರು ಸಂತೋಷ್​, ಮನೆಯಲ್ಲಿ ತಾವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಗೆ ಸಮಜಾಯಿಷಿಯನ್ನು ಸಹ ಪ್ರಬಲವಾಗಿಯೇ ನೀಡುತ್ತಿದ್ದಾರೆ. ಟಿಕೆಟ್​ ಟು ಫಿನಾಲೆ ಟಾಸ್ಕ್​ನಲ್ಲಿ ಬುಧವಾರದ ಎಪಿಸೋಡ್​ನಲ್ಲಿ ಒಂದು ಹಂತದಲ್ಲಿ ಇಡೀ ಮನೆಯಲ್ಲಿ ಹೆಚ್ಚು ಅಂಕ ಪಡೆದ ಸ್ಪರ್ಧಿಯಾಗಿದ್ದರು. ಎರಡೆರಡು ಟಾಸ್ಕ್​ಗಳನ್ನು ಗೆದ್ದರು. ಪ್ರತಾಪ್​ ರ ಟಾಸ್ಕ್​ಗೂ ಆಯ್ಕೆ ಆಗಿದ್ದರು ಆದರೆ ಗೆಲ್ಲುವಲ್ಲಿ ವಿಫಲವಾದರು. ತನಿಷಾ ನಾಯಕತ್ವದ ಟಾಸ್ಕ್​ನಲ್ಲಿಯೂ ಆಡಿದರು. ಆದರೆ ಅಲ್ಲಿಯೂ ಸಫಲರಾಗಲಿಲ್ಲ.

ಇದನ್ನೂ ಓದಿ:ನೀವು ಅಂದುಕೊಂಡಂತೆ ಇಲ್ಲ ವರ್ತೂರು ಸಂತೋಷ್​; ಹೊರಬಂತು ನೋಡಿ ಅಸಲಿ ಟ್ಯಾಲೆಂಟ್​

ಕೆಲ ವಾರಗಳ ಹಿಂದಿನ ವರೆಗೂ ತುಕಾಲಿ ಸಂತು ಹೊರತಾಗಿ ಇನ್ಯಾರೊಟ್ಟಿಗೆ ಹೆಚ್ಚಾಗಿ ಬೆರೆಯದಿದ್ದ, ಟಾಸ್ಕ್​ಗಳ ವಿಚಾರದಲ್ಲಿ ಹೆಚ್ಚು ಆಸಕ್ತಿಯೂ ತೋರದಿದ್ದ ವರ್ತೂರು ಸಂತೋಷ್ ಈ ವಾರ ಬಹಳ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಅಂಕಗಳೂ ಹೆಚ್ಚಿಗೆ ಗಳಿಸುತ್ತಿದ್ದಾರೆ. ಅವರು ಇದೇ ವೇಗದಲ್ಲಿ ಮುಂದೆ ಸಾಗಿದರೆ ಫಿನಾಲೆಗೆ ಪಕ್ಕಾ ತಲುಪುತ್ತಾರೆ ಎನ್ನಬಹುದು. ಮನೆಯ ಸದಸ್ಯರಾದ ತುಕಾಲಿ ಸಂತು ಹಾಗೂ ಕಾರ್ತಿಕ್ ಮಾತನಾಡುತ್ತಾ, ವರ್ತೂರು ಸಂತೋಷ್​ಗೆ ಇರುವ ಜನಬೆಂಬಲ, ಈಗ ಇವರು ಆಡುತ್ತಿರುವ ರೀತಿ ನೋಡಿದರೆ ಫಿನಾಲೆ ತಲುಪಿಬಿಡುತ್ತಾರೇನೋ ಎಂದು ಹೇಳಿದರು. ಅವರು ಹೇಳಿದ್ದು ನಿಜವಾಗುವ ಸಾಧ್ಯತೆಯೂ ಇದೆ.

ವರ್ತೂರು ಸಂತು ಅವರ ಈವರೆಗಿನ ಬಿಗ್​ಬಾಸ್ ಜರ್ನಿ ಬಹಳ ರೋಚಕವಾದುದು. ಬಿಗ್​ಬಾಸ್​ಗೆ ಹೋದ ಕೆಲವೇ ದಿನಗಳಲ್ಲಿ ಹುಲಿ ಉಗುರು ಪ್ರಕರಣದಲ್ಲಿ ಜೈಲು ಪಾಲಾದರು. ಅದಾದ ಬಳಿಕ ಜೈಲಿನಿಂದ ನೇರವಾಗಿ ಬಿಗ್​ಬಾಸ್ ಮನೆಗೆ ಬಂದರು. ಅಲ್ಲಿಂದಲೂ ವಾಪಸ್ ಹೋಗುವ ಮಾತನಾಡಿದರು. ಹೊರಗೆ ಕಳಿಸುವಂತೆ ಕಣ್ಣೀರು ಹಾಕಿ ಕೇಳಿಕೊಂಡರು. ಬಳಿಕ ಅವರ ತಾಯಿಯವರು ಬಂದು ಅವರ ಮನವೊಲಿಸಿದರು. ಟಾಸ್ಕ್ ಆಡಲು ಅವಕಾಶಗಳು ಸಿಗದೆ ಕೊರಗಿದರು. ಸಿಕ್ಕ ಕಡಿಮೆ ಸ್ಕ್ರೀನ್ ಸ್ಪೇಸ್​ನಲ್ಲಿಯೇ ಗಮನ ಸೆಳೆದು ಈಗ ಫಿನಾಲೆಗೆ ತಲುಪುವ ಹಂತಕ್ಕೆ ಬಂದು ನಿಂತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?