AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಅಂದುಕೊಂಡಂತೆ ಇಲ್ಲ ವರ್ತೂರು ಸಂತೋಷ್​; ಹೊರಬಂತು ನೋಡಿ ಅಸಲಿ ಟ್ಯಾಲೆಂಟ್​

ನೀವು ಅಂದುಕೊಂಡಂತೆ ಇಲ್ಲ ವರ್ತೂರು ಸಂತೋಷ್​; ಹೊರಬಂತು ನೋಡಿ ಅಸಲಿ ಟ್ಯಾಲೆಂಟ್​

ಮದನ್​ ಕುಮಾರ್​
|

Updated on: Jan 05, 2024 | 4:16 PM

Share

ವರ್ತೂರು ಸಂತೋಷ್​ ಅವರ ರಿಯಲ್​ ಟ್ಯಾಲೆಂಟ್​ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಬಿಗ್​ ಬಾಸ್​ ಮನೆಯಲ್ಲಿ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ವರ್ತೂರು ಸಂತೋಷ್​ ಅವರು ನಟಿಸಿ ತೋರಿಸಿದ್ದಾರೆ. ಈ ಸಂಚಿಕೆಯ ಪ್ರೋಮೋ ವೈರಲ್​ ಆಗಿದೆ.

ಬಿಗ್​ ಬಾಸ್​ (Bigg Boss Kannada) ರಿಯಾಲಿಟಿ ಶೋನಲ್ಲಿ  ಸ್ಪರ್ಧಿಸಲು ಹಲವು ಕ್ಷೇತ್ರದ ಜನರಿಗೆ ಅವಕಾಶ ಸಿಗುತ್ತದೆ. ಹಳ್ಳಿಕಾರ್​ ತಳಿಯನ್ನು ಸಂರಕ್ಷಣೆ ಮಾಡುವ ಮೂಲಕ ಫೇಮಸ್​ ಆದ ರೈತ ವರ್ತೂರು ಸಂತೋಷ್​ ಕೂಡ ಈ ಬಾರಿಯ ಬಿಗ್​ ಬಾಸ್​ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅನೇಕ ಕಾರಣಗಳಿಂದಾಗಿ ವರ್ತೂರು ಸಂತೋಷ್​ (Varthur Santhosh) ಸುದ್ದಿ ಆಗುತ್ತಿದ್ದಾರೆ. ತಾವು ಅಭಿನಯದ ಕ್ಷೇತ್ರದಿಂದ ಬಂದವರಲ್ಲ ಎಂದು ಅವರು ಆಗಾಗ ಹೇಳುತ್ತಿದ್ದರು. ಆದರೆ ಈಗ ಎಲ್ಲರೂ ಮೆಚ್ಚುವಂತೆ ಅಭಿನಯ ಮಾಡಿ ತೋರಿಸಿದ್ದಾರೆ. ಅವರ ರಿಯಲ್​ ಟ್ಯಾಲೆಂಟ್​ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಬಿಗ್​ ಬಾಸ್​ ಮನೆಯಲ್ಲಿ ಸಂಗೀತಾ ಶೃಂಗೇರಿ (Sangeetha Sringeri) ಮತ್ತು ಕಾರ್ತಿಕ್​ ಮಹೇಶ್ ಅವರು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ವರ್ತೂರು ಸಂತೋಷ್​ ನಟಿಸಿ ತೋರಿಸಿದ್ದಾರೆ. ಅದನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ಈ ಸಂಚಿಕೆ ಜನವರಿ 5ರಂದು ರಾತ್ರಿ 9.30ಕ್ಕೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ 24 ಗಂಟೆಯೂ ಲೈವ್​ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More