‘ಪ್ರತಾಪ್​ನ ಸಹವಾಸವೇ ಸಾಕು’; ಬೇಸರ ಹೊರಹಾಕಿದ ವರ್ತೂರು ಸಂತೋಷ್

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಗೆ ಬಂದಾಗ ಸೈಲೆಂಟ್ ಆಗಿದ್ದರು. ಆ ಬಳಿಕ ಅವರಿಗೆ ಧೈರ್ಯ ತುಂಬುವ ಕೆಲಸ ಸುದೀಪ್ ಅವರಿಂದ ಆಯಿತು. ಆ ಬಳಿಕ ಆ್ಯಕ್ಟೀವ್ ಆದರು. ಪ್ರತಾಪ್ ತಪ್ಪು ಮಾಡಿದಾಗ ಸುದೀಪ್ ಬುದ್ಧಿವಾದ ಹೇಳಿದರು. ಆ ಬಳಿಕ ಮತ್ತೆ ಸೈಲೆಂಟ್ ಆದರು ಪ್ರತಾಪ್.

‘ಪ್ರತಾಪ್​ನ ಸಹವಾಸವೇ ಸಾಕು’; ಬೇಸರ ಹೊರಹಾಕಿದ ವರ್ತೂರು ಸಂತೋಷ್
ವರ್ತೂರು ಸಂತೋಷ್-ಪ್ರತಾಪ್
Follow us
|

Updated on: Dec 29, 2023 | 8:28 AM

ಡ್ರೋನ್ ಪ್ರತಾಪ್ (Drone Prathap) ಅವರು ಇತ್ತೀಚೆಗೆ ಆಟದಲ್ಲಿ ಸೈಲೆಂಟ್ ಆಗಿದ್ದಾರೆ. ಅವರು ಒಂಟಿಯಾಗಿ ಇರುತ್ತಾರೆ ಅನ್ನೋದು ಅನೇಕರ ಆರೋಪ. ಆದರೆ, ಅವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಬಗ್ಗೆ ಅನೇಕರು ಟೀಕೆ ಮಾಡಿದ್ದಿದೆ. ಈಗ ಪ್ರತಾಪ್ ಅವರು ನಡೆದುಕೊಂಡ ರೀತಿಗೆ ವರ್ತೂರು ಸಂತೋಷ್ ಸಿಟ್ಟಾಗಿದ್ದಾರೆ. ‘ಪ್ರತಾಪ್​ನ ಸಹವಾಸವೇ ಬೇಡ’ ಎಂದಿದ್ದಾರೆ. ಅವರು ಈ ರೀತಿ ಹೇಳಲು ಕಾರಣವೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಗೆ ಬಂದಾಗ ಸೈಲೆಂಟ್ ಆಗಿದ್ದರು. ಆ ಬಳಿಕ ಅವರಿಗೆ ಧೈರ್ಯ ತುಂಬುವ ಕೆಲಸ ಸುದೀಪ್ ಅವರಿಂದ ಆಯಿತು. ಆ ಬಳಿಕ ಆ್ಯಕ್ಟೀವ್ ಆದರು. ಪ್ರತಾಪ್ ತಪ್ಪು ಮಾಡಿದಾಗ ಸುದೀಪ್ ಬುದ್ಧಿವಾದ ಹೇಳಿದರು. ಆ ಬಳಿಕ ಮತ್ತೆ ಸೈಲೆಂಟ್ ಆದರು ಪ್ರತಾಪ್. ಇತ್ತೀಚಿನ ದಿನಗಳಲ್ಲಿ ಅವರು ಸಾಕಷ್ಟು ಸೈಲೆಂಟ್ ಆಗಿದ್ದಾರೆ. ಫ್ಯಾಮಿಲಿ ವೀಕ್ ಆಗಿದ್ದರಿಂದ ಎಲ್ಲರ ಮನೆಯವರು ಬಂದು ಹೋದರು. ಆದರೆ, ಪ್ರತಾಪ್ ಕುಟುಂಬದವರು ಬಂದಿರಲಿಲ್ಲ. ಈ ಬಗ್ಗೆ ಪ್ರತಾಪ್ ಅಸಮಾಧಾನಗೊಂಡಿದ್ದರು. ಈ ವೇಳೆ ವರ್ತೂರು ಸಂತೋಷ್ ಅವರು ಮಾತನಾಡಿದ್ದಾರೆ.

ಪ್ರತಾಪ್ ಒಂಟಿಯಾಗಿ ಕುಳಿತಿದ್ದರು. ‘ಇಲ್ಲಿ ಯಾಕೆ ಒಬ್ಬನೆ ಕುಳಿತಿದ್ದೀಯಾ. ಅಲ್ಲಿ ಹೋಗು’ ಎಂದರು. ಇದಕ್ಕೆ ಪ್ರತಾಪ್​ಗೆ ಸಿಟ್ಟು ಬಂದಿದೆ. ಅವರು ತಮ್ಮಲ್ಲೇ ಗೊಣಗುತ್ತಾ ಎದ್ದು ಹೊಗಿದ್ದಾರೆ. ಈ ವಿಚಾರವನ್ನು ವರ್ತೂರು ಸಂತೋಷ್ ಅವರು ತುಕಾಲಿ ಸಂತೋಷ್ ಬಳಿ ಹೇಳಿದ್ದಾರೆ. ‘ನಾನು ಪ್ರತಾಪ್​ಗೆ ಯಾವಾಗಲೂ ಕೆಟ್ಟದಾಗಲಿ ಎಂದು ಬಯಸಿಲ್ಲ. ಅವನ ಒಳ್ಳೆಯದಕ್ಕೆ ಹೇಳಿದರೆ ಸಿಡುಕುತ್ತಾನೆ. ಆತನ ಸಹವಾಸವೇ ಸಾಕು’ ಎಂದರು ವರ್ತೂರು ಸಂತೋಷ್.

ಇದನ್ನೂ ಓದಿ: ಬಿಗ್​ಬಾಸ್ ನಲ್ಲಿ ಡ್ರೋನ್ ಪ್ರತಾಪ್ ಮದುವೆ ಮಾತು, ಜವಾಬ್ದಾರಿ ಹೊತ್ತ ಸಂತು-ಪಂತು

ಮುಂಜಾನೆಯಿಂದ ಊಟವನ್ನೇ ಮಾಡದೆ ಕುಳಿತ ಪ್ರತಾಪ್ ಬಗ್ಗೆ ಸಂಗೀತಾ ಕೂಡ ಅಸಮಾಧಾನಗೊಂಡರು. ‘ಈ ರೀತಿ ಇರಿಟೇಷನ್ ಮಾಡಬೇಡ’ ಎಂದು ನೇರ ಮಾತುಗಳಲ್ಲೇ ಹೇಳಿದರು. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಕಲರ್ಸ್ ಕನ್ನಡದಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ