AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ನಲ್ಲಿ ಡ್ರೋನ್ ಪ್ರತಾಪ್ ಮದುವೆ ಮಾತು, ಜವಾಬ್ದಾರಿ ಹೊತ್ತ ಸಂತು-ಪಂತು

Drone Prathap Marriage: ಡ್ರೋನ್ ಪ್ರತಾಪ್ ಮೂರು ವರ್ಷಗಳ ಬಳಿಕ ತಮ್ಮ ಪೋಷಕರನ್ನು ಭೇಟಿ ಆದರು. ಈ ವೇಳೆ ಮನೆಯಲ್ಲಿ ಪ್ರತಾಪ್​ರ ಮದುವೆ ವಿಷಯ ಪ್ರಸ್ತಾಪವಾಯ್ತು.

ಬಿಗ್​ಬಾಸ್ ನಲ್ಲಿ ಡ್ರೋನ್ ಪ್ರತಾಪ್ ಮದುವೆ ಮಾತು, ಜವಾಬ್ದಾರಿ ಹೊತ್ತ ಸಂತು-ಪಂತು
ಡ್ರೋನ್ ಪ್ರತಾಪ್
ಮಂಜುನಾಥ ಸಿ.
|

Updated on:Dec 28, 2023 | 11:44 PM

Share

ಗುರುವಾರದ ಬಿಗ್​ಬಾಸ್ (BiggBoss) ಎಪಿಸೋಡ್ ಪ್ರೇಕ್ಷಕರನ್ನು ಭಾವುಕಗೊಳಿಸಿತು. ಡ್ರೋನ್ ಪ್ರತಾಪ್ ಮೂರು ವರ್ಷಗಳ ಬಳಿಕ ತಮ್ಮ ಪೋಷಕರನ್ನು ಭೇಟಿಯಾದರು. ತಾನು ಮಾಡಿದ ತಪ್ಪಿನಿಂದ ಅವಮಾನ ಅನುಭವಿಸಿದ ಅವರು ನನ್ನನ್ನು ನೋಡಲು ಮನೆಗೆ ಬರುವುದಿಲ್ಲವೇನೋ ಎಂಬ ಆತಂಕದಲ್ಲಿದ್ದರು. ಆದರೆ ಡ್ರೋನ್​ ಪ್ರತಾಪ್​ರಷ್ಟೆ ಕಾತರತೆಯಿಂದ ಅಪ್ಪನೂ ಮಗನನ್ನು ನೋಡಲು ಕಾಯುತ್ತಿದ್ದರೆಂಬುದು ಅವರ ಆಗಮನದಿಂದ, ಅವರು ನೀಡಿದ ಬಿಗಿಯಾದ ಅಪ್ಪುಗೆಯಿಂದ ತಿಳಿದು ಬಂತು.

ಡ್ರೋನ್ ಪ್ರತಾಪ್​, ತಮ್ಮ ಪೋಷಕರನ್ನು ಮತ್ತೆ ಸೇರಿದ್ದು ಮನೆಯ ಸದಸ್ಯರನ್ನು ಭಾವುಕಗೊಳಿಸಿತು. ಹಲವು ಭಾವುಕ ಸನ್ನಿವೇಶಗಳು, ಮಾತುಕತೆಗಳು ಡ್ರೋನ್ ಪ್ರತಾಪ್ ಹಾಗೂ ಅವರ ಪೋಷಕರ ನಡುವೆ ಸೃಷ್ಟಿಯಾದವು. ಇದೆಲ್ಲದರ ನಡುವೆ ಪ್ರತಾಪ್​ರ ಮದುವೆ ವಿಷಯವೂ ಸಹ ಮನೆಯಲ್ಲಿ ಚರ್ಚೆಯಾಯ್ತು.

ವರ್ತೂರು ಸಂತೋಷ್ ಮೊದಲಿಗೆ ಡ್ರೋನ್ ಪ್ರತಾಪ್​ರ ಮದುವೆ ಚರ್ಚೆ ಎತ್ತಿದರು. ‘‘ಯಜಮಾನ್ರೆ ನೀವು ಹೇಳಿದರೆ ನಿಮ್ಮ ಮಗ ಮದುವೆ ಆಗ್ತಾನಂತೆ, ನೀವು ಹೂ ಅನ್ನಿ ಎಂದರು. ಅದಕ್ಕೆ ಪ್ರತಾಪ್​ರ ತಂದೆ ನನ್ನ ಅಭ್ಯಂತರವೇನೂ ಇಲ್ಲ ಎಂದರು. ಬಳಿಕ ಹಾಗಿದ್ದರೆ ಆ ಜವಾಬ್ದಾರಿ ನನಗೆ ಬಿಡಿ ನಾನು ನೋಡುತ್ತೇನೆ ಎಂದರು. ಹೌದು, ನಿಮ್ಮ ಊರಲ್ಲೇ ಒಂದು ಒಳ್ಳೆ ಹೆಣ್ಣು ನೋಡಪ್ಪ ಎಂದರು ಪ್ರತಾಪ್​ರ ತಂದೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಕರಗಿತು ಮುನಿಸು, ಅಪ್ಪ-ಮಗನ ಭಾವುಕ ಸಮ್ಮಿಲನ

ಬಳಿಕ ತುಕಾಲಿ ಸಂತು, ನಮ್ಮ ಊರಲ್ಲಿ ಒಂದು ಒಳ್ಳೆಯ ಹೆಣ್ಣು ಇದೆ ನೀವು ಹೂ ಅನ್ನಿ ನಾನು ಮಾತಾಡ್ತೀನಿ ಎಂದರು. ಅಯ್ಯೋ ನಾವು ಹೂ ಅಂದರೆ ಹುಡುಗಿಯೂ ಒಪ್ಪಿಕೊಳ್ಳಬೇಕಲ್ಲ ಅಂದರು. ಅವರಿಗೆ ನನ್ನ ಮಾತೇ ಅಂತಿಮ, ನಾನು ಮಾತನಾಡಿದರೆ ಮುಗಿದಂತೆ ಎಂದರು. ಆ ಮಾತಿಗೆ ಎಲ್ಲರೂ ಸೇರಿ ತುಕಾಲಿಯ ಕಾಲೆಳೆದರು.

ಪ್ರತಾಪ್, ಪ್ರತ್ಯೇಕವಾಗಿ ಅಪ್ಪ-ಅಮ್ಮನೊಟ್ಟಿಗೆ ಮಾತನಾಡುವಾಗ ತಂಗಿಯ ಬಗ್ಗೆ ವಿಚಾರಿಸಿದರು. ಆಕೆಗೆ ಕೆಲಸವಿತ್ತು ಅದಕ್ಕೆ ಬರುವುದಕ್ಕೆ ಸಾಧ್ಯವಾಗಲಿಲ್ಲ. ಆಕೆ ಚೆನ್ನಾಗಿ ದುಡಿಯುತ್ತಿದ್ದಾಳೆ, ನನ್ನನ್ನು-ಅಮ್ಮನನ್ನು ನೋಡಿಕೊಳ್ಳುತ್ತಿದ್ದಾಳೆ ಎಂದರು. ಆಗ ಮತ್ತೆ ಭಾವುಕರಾದ ಪ್ರತಾಪ್, ನಾನು ಮನೆಗೆ ಬರ್ತೀನಿ, ತಂಗಿಯ ಮದುವೆ ಮಾಡ್ತೀನಿ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:44 pm, Thu, 28 December 23

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ