ಈ ಬಾರಿ 100 ದಿನಕ್ಕೆ ಮುಗಿಯಲ್ಲ ಬಿಗ್ ಬಾಸ್; ವೀಕ್ಷಕರಿಗೆ ಇದೆ ಸರ್​ಪ್ರೈಸ್

ಬಿಗ್ ಬಾಸ್ ಎಂದಾಗ ತಕ್ಷಣಕ್ಕೆ ನೆನಪಿಗೆ ಬರೋದು ನೂರು ದಿನಗಳ ಆಟ ಎಂಬುದು. ಕೆಲವು ಸೀಸನ್​ಗಳು ಕೇವಲ 98ನೇ ದಿನಕ್ಕೆ ಪೂರ್ಣಗೊಂಡ ಉದಾಹರಣೆ ಇದೆ. ಈ ಬಾರಿ ಸರ್​ಪ್ರೈಸ್ ಇದೆ.

ಈ ಬಾರಿ 100 ದಿನಕ್ಕೆ ಮುಗಿಯಲ್ಲ ಬಿಗ್ ಬಾಸ್; ವೀಕ್ಷಕರಿಗೆ ಇದೆ ಸರ್​ಪ್ರೈಸ್
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Dec 28, 2023 | 3:06 PM

‘ಬಿಗ್ ಬಾಸ್ ಕನ್ನಡ ಸೀಸನ್ 10’ ಈಗಾಗಲೇ 80 ದಿನಗಳನ್ನು ಪೂರೈಸಿದೆ. ದೊಡ್ಮನೆ ಆಟ ಇನ್ನು ಕೇವಲ 20 ದಿನ ಉಳಿದಿರೋದು ಅನ್ನೋದು ಅನೇಕರ ಭಾವನೆ. ಮನೆಯಲ್ಲಿ ಇರುವ ಸ್ಪರ್ಧಿಗಳು ಕೂಡ ಇದನ್ನೇ ಅಂದುಕೊಂಡಿದ್ದಾರೆ. ಆದರೆ, ಬಿಗ್ ಬಾಸ್ (Bigg Boss) ಈ ಬಾರಿ 100 ದಿನಕ್ಕೆ ಪೂರ್ಣಗೊಳ್ಳುತ್ತಿಲ್ಲ ಎನ್ನುತ್ತಿವೆ ಮೂಲಗಳು. ಈ ವಿಚಾರ ಕೇಳಿ ವೀಕ್ಷಕರು ಖುಷಿಪಟ್ಟಿದ್ದಾರೆ.

ಬಿಗ್ ಬಾಸ್ ಎಂದಾಗ ತಕ್ಷಣಕ್ಕೆ ನೆನಪಿಗೆ ಬರೋದು ನೂರು ದಿನಗಳ ಆಟ ಎಂಬುದು. ಕೆಲವು ಸೀಸನ್​ಗಳು ಕೇವಲ 98ನೇ ದಿನಕ್ಕೆ ಪೂರ್ಣಗೊಂಡ ಉದಾಹರಣೆ ಇದೆ. ಎಂಟನೇ ಸೀಸನ್ 117 ದಿನಗಳ ಕಾಲ ಇತ್ತು. ಏಳನೇ ಸೀಸನ್ 112 ದಿನ ನಡೆದಿತ್ತು. ಟಿಆರ್​ಪಿ ಉತ್ತಮವಾಗಿದ್ದಾಗ ಹೆಚ್ಚುವರಿಯಾಗಿ ಎರಡು ವಾರ ಬಿಗ್ ಬಾಸ್ ಶೋನ ನಡೆಸಲಾಗುತ್ತದೆ. ಈ ಸೀಸನ್​ನಲ್ಲೂ ಎರಡು ವಾರ ಹೆಚ್ಚುವರಿಯಾಗಿ ನಡೆಸಲು ವಾಹಿನಿ ನಿರ್ಧರಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಬಿಗ್ ಬಾಸ್ ಬಾಗಿಲು ತೆಗೆಯಿರಿ’; ತಂದೆ-ತಾಯಿ ನೋಡಿ ಗಳಗಳನೆ ಅತ್ತ ಪ್ರತಾಪ್

ಈ ಬಾರಿ ಬಿಗ್ ಬಾಸ್ ಟಿಆರ್​ಪಿ ಉತ್ತಮವಾಗಿ ಬರುತ್ತಿದೆ. ಕಳೆದ ವಾರ ಬಂದ ಟಿಆರ್​ಪಿ ಪ್ರಕಾರ ವೀಕೆಂಡ್ ಎಪಿಸೋಡ್​ನಲ್ಲಿ ಬಿಗ್ ಬಾಸ್ 9 ಟಿವಿಆರ್ ಪಡೆದಿದೆ. ಇದು ವಾಹಿನಿಯವರ ಖುಷಿ ಹೆಚ್ಚಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬಿಗ್ ಬಾಸ್​ಗೆ ಈ ಮಟ್ಟದ ಟಿಆರ್​ಪಿ ಸಿಕ್ಕಿರಲಿಲ್ಲ. ಈ ಕಾರಣದಿಂದ 14 ದಿನ ಹೆಚ್ಚುವರಿಯಾಗಿ ಶೋ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Bigg Boss Kannada: ‘ಬಿಗ್ ಬಾಸ್’ ಕೊಡ್ತಿರೋ ಕಾಟಕ್ಕೆ ಸ್ಪರ್ಧಿಗಳು ಸುಸ್ತೋ ಸುಸ್ತು

ಈ ಬಾರಿಯ ಬಿಗ್ ಬಾಸ್​ನಲ್ಲಿ ವಿವಾದಗಳು ಸಾಕಷ್ಟಿದ್ದವು. ವಿನಯ್ ಗೌಡ ಅವರು ಸಾಕಷ್ಟು ಕೂಗಾಟ ನಡೆಸಿದ್ದರು. ಕೆಲವರ ಕಣ್ಣಿಗೆ ಹಾನಿ ಆಯಿತು. ಬಳೆಯ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಈ ಎಲ್ಲಾ ಕಾರಣದಿಂದ ಬಿಗ್ ಬಾಸ್ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಈ ಬಾರಿಯ ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ನೊಡುವ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ