‘ನನ್ನನ್ನು ಕ್ಷಮಿಸಿ’; ಮಾಡಿದ ತಪ್ಪಿಗೆ ಕಾರ್ತಿಕ್ ತಾಯಿ ಬಳಿ ಸಾರಿ ಕೇಳಿದ ಸಂಗೀತಾ

ಕಾರ್ತಿಕ್ ತಾಯಿ ಎಲ್ಲರ ಜೊತೆ ಬೆರೆತರು. ಸಮಯ ನೋಡಿ ಸಂಗೀತಾ ಅವರು ಕ್ಷಮೆ ಕೇಳಿದ್ದಾರೆ. ಇದಕ್ಕೆ ಒಂದು ಮಹತ್ವದ ಕಾರಣ ಇದೆ.

‘ನನ್ನನ್ನು ಕ್ಷಮಿಸಿ’; ಮಾಡಿದ ತಪ್ಪಿಗೆ ಕಾರ್ತಿಕ್ ತಾಯಿ ಬಳಿ ಸಾರಿ ಕೇಳಿದ ಸಂಗೀತಾ
ಕಾರ್ತಿಕ್-ಸಂಗೀತಾ
Follow us
ರಾಜೇಶ್ ದುಗ್ಗುಮನೆ
|

Updated on:Dec 28, 2023 | 8:08 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ಯಾರು ಯಾವ ರೀತಿಯಲ್ಲಿ ಆಡುತ್ತಿದ್ದಾರೆ ಅನ್ನೋದು ಹೊರಗಿನಿಂದ ನೋಡಿದವರಿಗೆ ಸ್ಪಷ್ಟವಾಗಿ ತಿಳಿಯುತ್ತಿದೆ. ಯಾರ ಆಟದಲ್ಲಿ ಯಾವ ರೀತಿಯ ಬದಲಾವಣೆ ಆಗಬೇಕು ಅನ್ನೋದು ಕೂಡ ಅನೇಕರಿಗೆ ಗೊತ್ತಾಗಿರುತ್ತದೆ. ಈ ವಾರ ಫ್ಯಾಮಿಲಿ ವೀಕ್. ಕುಟುಂಬದವರು ದೊಡ್ಮನೆಗೆ ತೆರಳಿ ತಮ್ಮವರನ್ನು ಮಾತನಾಡಿಸುತ್ತಿದ್ದಾರೆ. ಆಟದಲ್ಲಿ ಯಾವ ರೀತಿಯ ಬದಲಾವಣೆ ಆಗಬೇಕು ಎಂಬುದನ್ನು ಹೇಳುತ್ತಿದ್ದಾರೆ. ಕಾರ್ತಿಕ್ (Karthik) ಅವರ ತಾಯಿ ಬಿಗ್ ಬಾಸ್​ಗೆ ಬಂದಿದ್ದರು. ಈ ವೇಳೆ ಅವರ ಬಳಿ ಸಂಗೀತಾ ಕ್ಷಮೆ ಕೇಳಿದ್ದಾರೆ.

ಕಾರ್ತಿಕ್ ಅವರ ತಾಯಿ ದೊಡ್ಮನೆಗೆ ಬಂದರು. ಮೊದಲು ಹೀಗೆ ಬಂದು ಹಾಗೆ ಹೋದರು. ಆ ಬಳಿಕ ಅವರನ್ನು ಮತ್ತೆ ದೊಡ್ಮನೆಗೆ ಕಳುಹಿಸಲಾಯಿತು. ಈ ವೇಳೆ ಕಾರ್ತಿಕ್ ಖುಷಿಯಿಂದ ತಾಯಿಯನ್ನು ಮಾತನಾಡಿಸಿದರು. ಕಾರ್ತಿಕ್ ತಾಯಿ ಕೂಡ ಎಲ್ಲರ ಜೊತೆ ಬೆರೆತರು. ಸಮಯ ನೋಡಿ ಸಂಗೀತಾ ಅವರು ಕ್ಷಮೆ ಕೇಳಿದ್ದಾರೆ. ಇದಕ್ಕೆ ಒಂದು ಮಹತ್ವದ ಕಾರಣ ಇದೆ.

ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈ ಟಾಸ್ಕ್​ನಲ್ಲಿ ಸಂಗೀತಾ ಹಾಗೂ ಕಾರ್ತಿಕ್ ಬೇರೆ ಬೇರೆ ಟೀಂನಲ್ಲಿ ಇದ್ದರು. ಸಂಗೀತಾ ಅವರು ಕಾರ್ತಿಕ್​ಗೆ ತಲೆ ಬೋಳಿಸೋ ಟಾಸ್ಕ್ ನೀಡಿದರು. ಇದನ್ನು ಸ್ವೀಕರಿಸಿದರು ಕಾರ್ತಿಕ್. ಈ ಮೂಲಕ ಅವರು ತಲೆ ಬೋಳಿಸಿಕೊಂಡರು. ಈ ಘಟನೆ ಬಗ್ಗೆ ಸಂಗೀತಾಗೆ ಇನ್ನೂ ಬೇಸರ ಇದ್ದಂತೆ ಇದೆ. ಈ ವಿಚಾರದಲ್ಲಿ ಅವರು ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗ ಉಳಿದಿದ್ದು 10 ಮಂದಿ; ಸ್ಪರ್ಧಿಗಳ ಬಲಾಬಲದ ಬಗ್ಗೆ ಇಲ್ಲಿದೆ ವಿವರ..

‘ಅಮ್ಮ ನನ್ನನ್ನು ಕ್ಷಮಿಸಿ’ ಎಂದರು ಸಂಗೀತಾ. ಇದಕ್ಕೆ ಕಾರ್ತಿಕ್ ತಾಯಿ ‘ಏಕೆ’ ಎಂದು ಪ್ರಶ್ನಿಸಿದರು. ‘ನಿಮ್ಮ ಮಗನ ತಲೆ ಕೂದಲು ಹೋಗುವಂತೆ ಮಾಡಿದೆ. ಅದೆಲ್ಲ ಗೇಮ್​ಗೋಸ್ಕರ ಮಾತ್ರ ಆಗಿತ್ತು. ನಮ್ಮಿಬ್ಬರ ಮಧ್ಯೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ’ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಕಾರ್ತಿಕ್ ತಾಯಿ, ‘ಕ್ಷಮೆ ಕೇಳುವ ಅಗತ್ಯ ಇಲ್ಲ’ ಎಂದರು. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ನೋಡೋ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:04 am, Thu, 28 December 23

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು