ಬಿಗ್ ಬಾಸ್ ಎಲಿಮಿನೇಷನ್​​ನಿಂದ ಅಪ್ಸೆಟ್ ಆದ ಅಂಕಿತಾ ಲೋಖಂಡೆ ಮಾಡಿದ್ದೇನು ನೋಡಿ..

ಅಂಕಿತಾ ಜೊತೆ ಅವರ ಪತಿ ವಿಕ್ಕಿ ಜೈನ್ ಕೂಡ ಇದ್ದರು. ಯಾರೂ ಸ್ಮೈಲ್ ಮಾಡಲೇ ಇಲ್ಲ. ವಿಕ್ಕಿ ಜೊತೆ ಪೋಸ್ ನೀಡುವಂತೆ ಪಾಪರಾಜಿಗಳು ಕೋರಿಕೊಂಡರು. ಆದರೆ, ಇದನ್ನು ಅವರು ನಿರಾಕರಿಸಿದರು.

ಬಿಗ್ ಬಾಸ್ ಎಲಿಮಿನೇಷನ್​​ನಿಂದ ಅಪ್ಸೆಟ್ ಆದ ಅಂಕಿತಾ ಲೋಖಂಡೆ ಮಾಡಿದ್ದೇನು ನೋಡಿ..
ಅಂಕಿತಾ-ವಿಕ್ಕಿ
Follow us
ರಾಜೇಶ್ ದುಗ್ಗುಮನೆ
|

Updated on: Jan 30, 2024 | 8:52 AM

ಬಿಗ್ ಬಾಸ್ (Bigg Boss) ಎಲಿಮಿನೇಷನ್ ನಡೆಯೋದು ವೋಟ್​ಗಳ ಆಧಾರದ ಮೇಲೆ. ಆದರೆ, ಕೆಲವರಿಗೆ ಇದರ ಬಗ್ಗೆ ನಂಬಿಕೆ ಇಲ್ಲ. ಸ್ವತಃ ಸ್ಪರ್ಧಿಗಳೇ ಈ ಬಗ್ಗೆ ಅನುಮಾನ ಹೊರ ಹಾಕಿದ್ದು ಇದೆ. ಆದರೆ, ಇದನ್ನು ವಾಹಿನಿಯವರು ಅಲ್ಲ ಗಳೆಯುತ್ತಲೇ ಬರುತ್ತಿದ್ದಾರೆ. ಈ ಕಾರಣಕ್ಕೆ ಯಾವ ಸ್ಪರ್ಧಿಗೆ ಎಷ್ಟು ವೋಟ್ ಬಿದ್ದಿದೆ ಎಂಬುದನ್ನು ಹೇಳುವ ಕೆಲಸವನ್ನು ಮಾಡಲಾಗಿದೆ. ಹಿಂದಿ ಬಿಗ್ ಬಾಸ್ ಇತ್ತೀಚೆಗೆ ಪೂರ್ಣಗೊಂಡಿದೆ. ಶೋನಿಂದ ಔಟ್ ಆದ ಬಳಿಕ ಅಂಕಿತಾ ಲೋಖಂಡೆ ನಡೆದುಕೊಂಡ ರೀತಿ ಚರ್ಚೆ ಹುಟ್ಟುಹಾಕಿದೆ.

ನಾಲ್ಕನೇ ಪೊಸಿಷನ್​ನಲ್ಲಿ ಅಂಕಿತಾ ಅವರು ಎಲಿಮಿನೇಟ್ ಆದರು. ಅವರ ಎಲಿಮಿನೇಷನ್ ಬಗ್ಗೆ ಕೇಳುತ್ತಿದ್ದಂತೆ ಮುನಾವರ್ ಫಾರೂಖಿ, ಅಭಿಷೇಕ್ ಕುಮಾರ್ ಹಾಗೂ ಮನ್ನಾರಾ ಚೋಪ್ರಾ ತಮಗೆ ಟಾಪ್ 3 ಸ್ಥಾನ ಸಿಕ್ಕಿದೆ ಎಂದು ಖುಷಿಪಟ್ಟರು. ಅಂಕಿತಾ ಟಾಪ್ 3ನಲ್ಲಿ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಹಾಗಾಗಿಲ್ಲ. ಇದು ಅವರಿಗೆ ಶಾಕ್ ತಂದಿದೆ.

‘ನನಗೆ ಈ ಎಲಿಮಿನೇಷನ್ ಶಾಕ್ ತಂದಿದೆ. ನೀವು ವಿನ್ನರ್ ಆಗಬಹುದು ಎಂದುಕೊಂಡಿದ್ದೆ. ಆದರೆ, ಹಾಗಾಗಿಲ್ಲ. ಇಡೀ ತಂಡಕ್ಕೆ ಶಾಕ್ ಇದೆ’ ಎಂದು ಸ್ವತಃ ಸಲ್ಮಾನ್ ಖಾನ್ ಅವರು ಹೇಳಿದ್ದರು. ಆದರೆ, ಎಲಿಮಿನೇಷನ್ ಘೋಷಣೆ ಮಾಡಿದ ಮೇಲೆ ಹೊರ ಹೋಗಲೇಬೇಕು. ಅಂಕಿತಾ ಅವರು ಸೆಟ್​ನಲ್ಲಿ ಇರದೇ ಅಲ್ಲಿಂದ ನೇರವಾಗಿ ಮನೆಯತ್ತ ಹೊರಟರು.

ಅಂಕಿತಾ ಜೊತೆ ಅವರ ಪತಿ ವಿಕ್ಕಿ ಜೈನ್ ಕೂಡ ಇದ್ದರು. ಪಾಪರಾಜಿಗಳು ಪೋಸ್​ ನೀಡುವಂತೆ ಕೋರಿದರು. ಆದರೆ, ಯಾರೂ ಸ್ಮೈಲ್ ಮಾಡಲಿಲ್ಲ. ವಿಕ್ಕಿ ಜೊತೆ ಪೋಸ್ ನೀಡುವಂತೆ ಪಾಪರಾಜಿಗಳು ಕೋರಿದರು. ಆದರೆ, ಇದನ್ನು ಅವರು ನಿರಾಕರಿಸಿದರು. ಸೋಲಿನಿಂದ ಅಂಕಿತಾ ಅವರು ಸಾಕಷ್ಟು ಬೇಸರಗೊಂಡಂತೆ ಕಂಡುಬಂತು.

ಇದನ್ನೂ ಓದಿ: ಫಿನಾಲೆಗೂ ಮೊದಲೇ ಎಲಿಮಿನೇಟ್ ಆದ ವಿಕ್ಕಿ ಜೈನ್; ಗಳಗಳನೆ ಅತ್ತ ಪತ್ನಿ ಅಂಕಿತಾ

ಅಂಕಿತಾ ಅವರು ಈ ಮೊದಲು ಸುಶಾಂತ್ ಸಿಂಗ್ ರಜಪೂತ್​ನ ಲವರ್ ಆಗಿದ್ದರು. ಹೀಗಾಗಿ, ಅನೇಕ ಬಾರಿ ಅವರು ಸುಶಾಂತ್ ಬಗ್ಗೆ ಮಾತನಾಡಿದ್ದಿದೆ. ವೋಟ್​ಗಾಗಿಯೇ ಅಂಕಿತಾ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಬಂದಿದ್ದಿದೆ. ಆದರೆ, ಇದನ್ನು ಅವರು ಒಪ್ಪಿಲ್ಲ. ಈ ಮಧ್ಯೆ ಅಂಕಿತಾ ಪ್ರೆಗ್ನೆಂಟ್ ಎನ್ನುವ ವಿಚಾರವೂ ಹರಿದಾಡಿತ್ತು. ಪರೀಕ್ಷೆ ಮಾಡಿಸಿದಾಗ ಅದು ಸುಳ್ಳು ಎಂಬುದು ಸಾಬೀತಾಯಿತು. ವಿಕ್ಕಿ ಜೊತೆ ಅವರು ವಿಚ್ಛೇದನ ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ