ಔಟ್ ಆದವರ ಬ್ಲಾಂಕೆಟ್ನ ವಿನಯ್ ಇಟ್ಟುಕೊಂಡಿದ್ದು ಯಾಕೆ? ಇಲ್ಲಿದೆ ಕಾರಣ
ತಮ್ಮದೇ ಗುಂಪಿನ ಸದಸ್ಯರು ಎಲಿಮಿನೇಟ್ ಆದಾಗ ಅವರ ಬ್ಲಾಂಕೆಟ್ಗಳನ್ನು ವಿನಯ್ ಇಟ್ಟುಕೊಳ್ಳುತ್ತಿದ್ದರು. ಅದನ್ನೇ ಗುರಿಯಾಗಿಸಿಕೊಂಡು ಡ್ರೋನ್ ಪ್ರತಾಪ್ ಟೀಕೆ ಮಾಡಿದ್ದರು. ಅಷ್ಟಕ್ಕೂ ವಿನಯ್ ಅವರು ಬೇರೆಯವರ ಬ್ಲಾಂಕೆಟ್ ಇಟ್ಟುಕೊಂಡಿದ್ದು ಯಾಕೆ ಎಂಬುದನ್ನು ಸ್ವತಃ ವಿವರಿಸಿದ್ದಾರೆ. ಅನೇಕ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಟ ವಿನಯ್ ಗೌಡ ಅವರು ಬಿಗ್ ಬಾಸ್ (Bigg Boss Kannada) ಮನೆಯಲ್ಲಿ 3ನೇ ರನ್ನರ್ಅಪ್ ಆಗಿದ್ದಾರೆ. ದೊಡ್ಮನೆಯಲ್ಲಿ ಇದ್ದಷ್ಟು ದಿನವೂ ಅವರು ಸಖತ್ ಸದ್ದು ಮಾಡಿದ್ದರು. ಅವರೇ ವಿನ್ ಆಗಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಮತ್ತು ಡ್ರೋನ್ ಪ್ರತಾಪ್ (Drone Prathap) ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದಿತ್ತು. ಅದರಲ್ಲೂ ವೀಕೆಂಡ್ ಎಪಿಸೋಡ್ನಲ್ಲಿ ಡ್ರೋನ್ ಪ್ರತಾಪ್ ಅವರು ಹೇಳಿದ ಒಂದು ಮಾತಿನಿಂದ ವಿನಯ್ಗೆ ತುಂಬ ಬೇಸರ ಆಗಿತ್ತು. ‘ಎಲಿಮಿನೇಟ್ ಆದ ಸ್ನೇಹಿತರ ಬೆಡ್ಶೀಟ್ ಎಲ್ಲವೂ ವಿನಯ್ (Vinay Gowda) ಅವರ ಬೆಡ್ ಸೇರುತ್ತಿವೆ’ ಎಂದು ಪ್ರತಾಪ್ ಹೇಳಿದ್ದು ಬಹಳ ಚರ್ಚೆ ಆಗಿತ್ತು. ಆ ಬಗ್ಗೆ ಈಗ ವಿನಯ್ ಮಾತನಾಡಿದ್ದಾರೆ.
ಬಿಗ್ ಬಾಸ್ ಶೋ ಮುಗಿದ ಬಳಿಕ ವಿನಯ್ ಗೌಡ ಅವರು ‘ಟಿವಿ 9 ಕನ್ನಡ’ಕ್ಕೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಅವರು ಅನೇಕ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮದೇ ಗುಂಪಿನ ಸದಸ್ಯರು ಎಲಿಮಿನೇಟ್ ಆದಾಗ ಅವರ ಬ್ಲಾಂಕೆಟ್ಗಳನ್ನು ವಿನಯ್ ಇಟ್ಟುಕೊಳ್ಳುತ್ತಿದ್ದರು. ಅದನ್ನೇ ಗುರಿಯಾಗಿಸಿಕೊಂಡು ಡ್ರೋನ್ ಪ್ರತಾಪ್ ಟೀಕೆ ಮಾಡಿದ್ದರು. ಅಷ್ಟಕ್ಕೂ ವಿನಯ್ ಅವರು ಬೇರೆಯವರ ಬ್ಲಾಂಕೆಟ್ ಇಟ್ಟುಕೊಂಡಿದ್ದು ಯಾಕೆ ಎಂಬುದನ್ನು ಸ್ವತಃ ವಿವರಿಸಿದ್ದಾರೆ.
ಇದನ್ನೂ ಓದಿ: ‘ಯಾರು ಗೆಲ್ಲಬೇಕು ಅನ್ನೋದು ಫಿಕ್ಸ್ ಆಗಿತ್ತು’: ಬಿಗ್ ಬಾಸ್ ಮೇಲೆ ದೊಡ್ಡ ಆರೋಪ
‘ಬಿಗ್ ಬಾಸ್ ಮನೆಯಲ್ಲಿ 100 ದಿನ ಇರುತ್ತೇವೆ. ಸ್ನೇಹಿತರ ಪೈಕಿ ಒಬ್ಬೊಬ್ಬರನ್ನೇ ಕಳೆದುಕೊಂಡಾಗ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಎಲಿಮಿನೇಟ್ ಆದ ಸ್ನೇಹಿತರು ಅವರವರ ವಸ್ತುಗಳನ್ನು ತೆಗೆದುಕೊಂಡು ಹೋದ ಬಳಿಕ ಅಲ್ಲಿ ಉಳಿಯುತ್ತಿದ್ದದ್ದು ಅವರ ಬ್ಲಾಂಕೆಟ್ಸ್ ಮಾತ್ರ. ಅವರ ಜೊತೆಗಿನ ಫೀಲ್ಗಾಗಿ ಆ ಬ್ಲಾಂಕೆಟ್ಗಳನ್ನು ನನ್ನ ಜೊತೆ ಇಟ್ಟುಕೊಳ್ಳುತ್ತಿದ್ದೆ. ಅದರ ಮೇಲೆ ನಾನು ಮಲಗುತ್ತಿದೆ’ ಎಂದು ವಿನಯ್ ಗೌಡ ಹೇಳಿದ್ದಾರೆ.
‘ಯಾಕೆ ಬ್ಲಾಂಕೆಟ್ ಇಟ್ಟುಕೊಂಡಿದ್ದೀರಿ ಅಂತ ಡ್ರೋನ್ ಪ್ರತಾಪ್ ನನ್ನ ಬಳಿ ಬಂದು ತುಂಬ ಪ್ರೀತಿಯಿಂದ ಕೇಳಿದ. ಸ್ನೇಹಿತರನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಇದನ್ನು ಇಟ್ಟುಕೊಂಡಿದ್ದು ಅಂತ ಅವನಿಗೆ ಹೇಳಿದೆ. ಮರುದಿನ ಇವರು ಫ್ರೆಂಡ್ಸ್ನ ತುಳಿದು ಮೇಲೆ ಬರ್ತಾರೆ, ಬ್ಲಾಂಕೆಟ್ ಸೇರಿಸಿಕೊಳ್ತಾರೆ ಅಂತ ಅವನು ಪಂಚಾಯ್ತಿನಲ್ಲಿ ಹೇಳಿದಾಗ ನನಗೆ ತುಂಬ ಹರ್ಟ್ ಆಯಿತು. ನಂತರ ಅವನು ಕ್ಷಮೆ ಕೇಳಿದ. ಎಲ್ಲವೂ ಅರ್ಥವಾಯಿತು’ ಎಂದಿದ್ದಾರೆ ವಿನಯ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ