AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಾರು ಗೆಲ್ಲಬೇಕು ಅನ್ನೋದು ಫಿಕ್ಸ್​ ಆಗಿತ್ತು’: ಬಿಗ್ ಬಾಸ್​ ಮೇಲೆ ದೊಡ್ಡ ಆರೋಪ

ಬಿಗ್ ಬಾಸ್​ ಶೋನಲ್ಲಿ ವಿವಾದಗಳು ಸಹಜ. ಕೆಲವರಿಗೆ ಈ ಕಾರ್ಯಕ್ರಮದ ಬಗ್ಗೆ ಅನುಮಾನ ಇದೆ. ಇದನ್ನು ಸ್ಕ್ರಿಪ್ಡೆಟ್​ ಶೋ ಎಂದು ಕರೆದವರು ಅನೇಕರಿದ್ದಾರೆ. ಅಲ್ಲದೇ, ವಿನ್ನರ್​ ಆಯ್ಕೆಯಲ್ಲಿ ಪಕ್ಷಪಾತ ಆಗುತ್ತದೆ ಎಂಬ ಆರೋಪ ಕೂಡ ಹಲವರದ್ದು. ಈ ಬಾರಿ ‘ಹಿಂದಿ ಬಿಗ್​ ಬಾಸ್​’ ಗೆದ್ದ ಮುನಾವರ್​ ಫಾರೂಖಿ ಅವರನ್ನು ಫಿಕ್ಸ್ಡ್​ ವಿನ್ನರ್​ ಎಂದು ಕೆಲವರು ಆರೋಪಿಸಿದ್ದಾರೆ.

‘ಯಾರು ಗೆಲ್ಲಬೇಕು ಅನ್ನೋದು ಫಿಕ್ಸ್​ ಆಗಿತ್ತು’: ಬಿಗ್ ಬಾಸ್​ ಮೇಲೆ ದೊಡ್ಡ ಆರೋಪ
ಬಿಗ್ ಬಾಸ್
ಮದನ್​ ಕುಮಾರ್​
|

Updated on: Jan 29, 2024 | 3:59 PM

Share

ಪ್ರತಿ ಬಾರಿ ಬಿಗ್​ ಬಾಸ್​ ಫಿನಾಲೆ (Bigg Boss Finale) ನಡೆದಾಗ ಕೆಲವರು ಕೊಂಕು ನುಡಿಯುತ್ತಾರೆ. ತಮ್ಮಿಷ್ಟದ ಸ್ಪರ್ಧಿಯೇ ಟ್ರೋಫಿ ಗೆದ್ದರೆ ವೀಕ್ಷಕರು ಖುಷಿ ಪಡುತ್ತಾರೆ. ಒಂದು ವೇಳೆ ತಮಗೆ ಇಷ್ಟ ಇಲ್ಲದ ಸ್ಪರ್ಧಿಗೆ ಟ್ರೋಫಿ ಸಿಕ್ಕರೆ ಹಲವು ಆರೋಪಗಳನ್ನು ಮಾಡಲಾಗುತ್ತದೆ. ಈ ಬಾರಿಯೂ ಹಾಗೇ ಆಗಿದೆ. ‘ಬಿಗ್​ ಬಾಸ್​ ಹಿಂದಿ ಸೀಸನ್​ 17’ (Bigg Boss 17) ಮುಕ್ತಾಯ ಆಗಿದೆ. ಈ ರಿಯಾಲಿಟಿ ಶೋನಲ್ಲಿ ಮುನಾವರ್​ ಫಾರೂಖಿ (Munawar Faruqui) ಅವರು ವಿನ್​ ಆಗಿದ್ದಾರೆ. ಅವರ ಅಭಿಮಾನಿಗಳಿಗೆ ಈ ಗೆಲುವು ಖುಷಿ ನೀಡಿದೆ. ಆದರೆ ಇನ್ನೊಂದು ವರ್ಗದ ಜನರು ಕೊಂಕು ನುಡಿಯುತ್ತಿದ್ದಾರೆ. ಇದು ಫಿಕ್ಸಿಂಗ್​ನಿಂದ ಆದ ಗೆಲುವು ಎಂದು ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಆರೋಪ ಮಾಡುತ್ತಿದ್ದಾರೆ.

‘ಬಿಗ್​ ಬಾಸ್​ ಹಿಂದಿ ಸೀಸನ್​ 17’ ಶೋನ ಫಿನಾಲೆಗೆ ಅಂಕಿತಾ ಲೋಖಂಡೆ, ಮನ್ನಾರಾ ಚೋಪ್ರಾ, ಅಭಿಷೇಕ್​ ಕುಮಾರ್​, ಮುನಾವರ್​ ಫಾರೂಖಿ, ಅರುಣ್​ ಮಶೆಟ್ಟಿ ಅವರು ಬಂದಿದ್ದರು. ಈ ಟಾಪ್​ 5 ಸ್ಪರ್ಧಿಗಳಲ್ಲಿ ಅಂತಿಮವಾಗಿ ಮುನಾವರ್​ ಫಾರೂಖಿ ಅವರು ವಿನ್​ ಆದರು. ಜನವರಿ 28ರಂದು ಬಿಗ್​ ಬಾಸ್​ ಫಿನಾಲೆ ನಡೆದಿದೆ. ಈ ಶೋ ಗೆದ್ದ ಮುನಾವರ್​ ಫಾರೂಖಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಹ್ಯೂಂಡೈ ಕ್ರೆಟಾ ಕಾರು ನೀಡಲಾಗಿದೆ. ಈ ಖುಷಿಯಲ್ಲಿ ಇರುವ ಅವರು ‘ಫಿಕ್ಸಿಂಗ್​’ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:  ‘ಕುಟುಂಬದವರು ಅಮಾಯಕರು’; ಟ್ರೋಲ್ ಮಾಡಿದವರಿಗೆ ಕಾರ್ತಿಕ್ ಉತ್ತರ

‘ಇ-ಟೈಮ್ಸ್​’ ಮಾಡಿದ ಸಂದರ್ಶನದಲ್ಲಿ ಮುನಾವರ್​ ಫಾರೂಖಿ ಅವರು ಈ ಕುರಿತು ಮಾತನಾಡಿದ್ದಾರೆ. ‘ನಾನು ಫಿಕ್ಸಿಂಗ್​ ವಿನ್ನರ್​ ಆಗಿದ್ದಿದ್ದರೆ ಇಷ್ಟೆಲ್ಲ ಕಷ್ಟ ಅನುಭವಿಸಬೇಕಿರಲಿಲ್ಲ. ಎಲ್ಲವೂ ನನಗೆ ಸುಲಭವಾಗಿ ಸಿಗುತ್ತಿತ್ತು. ಇಡೀ ಸೀಸನ್​ನಲ್ಲಿ ನಾನು ಕಷ್ಟಪಟ್ಟಿದ್ದೇನೆ. ನನ್ನನ್ನು ಫಿಕ್ಸ್ಡ್​ ವಿನ್ನರ್​ ಎಂದು ಕರೆಯುವವರು ಕುಳಿತುಕೊಂಡು ಪೂರ್ತಿ ಸೀಸನ್​ನ ಸಂಚಿಕೆಗಳನ್ನು ನೋಡಲಿ. ಫಿಕ್ಸಿಂಗ್​ ಅಲ್ಲ ಎಂಬುದು ಆಗ ಗೊತ್ತಾಗುತ್ತದೆ’ ಎಂದು ಮುನಾವರ್​ ಫಾರೂಖಿ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ವಿನ್ ಆದ ಸ್ಪರ್ಧಿಗೆ ಸಂಪೂರ್ಣವಾಗಿ ಸಿಗಲ್ಲ 50 ಲಕ್ಷ ರೂಪಾಯಿ; ಎಷ್ಟು ಹಣ ಕಟ್ ಆಗುತ್ತೆ?

‘ನನಗೆ ಜನರಿಂದ ಪ್ರೀತಿ ಸಿಕ್ಕಿದೆ. ಯಾರೆಲ್ಲ ನನ್ನನ್ನು ಫಿಕ್ಸ್ಡ್​ ವಿನ್ನರ್​ ಎಂದು ಕರೆಯುತ್ತಿದ್ದಾರೋ ಅವರ ಅಭಿಪ್ರಾಯವನ್ನು ನಾನು ಬದಲಾಯಿಸಲು ಸಾಧ್ಯವಿಲ್ಲ. ಬಿಗ್​ ಬಾಸ್​ಗೆ ಹೋಗುವುದಕ್ಕೂ ಮುನ್ನ ನಾನು ಜನರ ಅಭಿಪ್ರಾಯ ಬದಲಾಯಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಈಗ ಎಲ್ಲರನ್ನೂ ಬದಲಾಯಿಸಲು ಆಗಲ್ಲ ಎಂಬುದು ನನಗೆ ಗೊತ್ತಾಗಿದೆ’ ಎಂದು ಮುನಾವರ್​ ಫಾರೂಖಿ ಹೇಳಿದ್ದಾರೆ. ಈ ಮೊದಲು ಸ್ಟ್ಯಾಂಡಪ್​ ಕಾಮಿಡಿ ಮಾಡುವಾಗ ಸಲ್ಮಾನ್​ ಖಾನ್​ ಅವರನ್ನು ಮುನಾವರ್​ ಟ್ರೋಲ್ ಮಾಡಿದ್ದರು. ಹಾಗಿದ್ದರೂ ಕೂಡ ಮುನಾವರ್​ ಅವರೇ ಗೆದ್ದಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ