AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕುಟುಂಬದವರು ಅಮಾಯಕರು’; ಟ್ರೋಲ್ ಮಾಡಿದವರಿಗೆ ಕಾರ್ತಿಕ್ ಉತ್ತರ

‘ಕುಟುಂಬದವರು ಅಮಾಯಕರು’; ಟ್ರೋಲ್ ಮಾಡಿದವರಿಗೆ ಕಾರ್ತಿಕ್ ಉತ್ತರ

ರಾಜೇಶ್ ದುಗ್ಗುಮನೆ
|

Updated on:Jan 29, 2024 | 2:34 PM

Share

ಬಿಗ್ ಬಾಸ್ ವಿನ್ ಆದ ಖುಷಿಯಲ್ಲಿ ಕಾರ್ತಿಕ್ ಮಹೇಶ್ ಇದ್ದಾರೆ. ಕೆಲವರು ಅವರಿಗೆ ಪ್ಲೇಬಾಯ್ ಪಟ್ಟ ನೀಡಿದ್ದಾರೆ. ‘ಹೇಳುವವರು ಹೇಳುತ್ತಾರೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ’ ಎಂದಿದ್ದಾರೆ ಕಾರ್ತಿಕ್.

ಬಿಗ್ ಬಾಸ್ ಸ್ಪರ್ಧಿಗಳು ಮನೆಯ ಒಳಗೆ ಇದ್ದಾಗ ಕೆಲವರು ಅವರನ್ನು ಟ್ರೋಲ್ ಮಾಡುತ್ತಾರೆ. ಕೆಲವೊಮ್ಮೆ ಕುಟುಂಬದವರನ್ನೂ ಟಾರ್ಗೆಟ್ ಮಾಡಿದ್ದಿದೆ. ಈ ರೀತಿ ಫ್ಯಾಮಿಲಿನ ಟಚ್ ಮಾಡಬಾರದು ಎಂಬುದು ಕಾರ್ತಿಕ್ ಮಹೇಶ್ ಅಭಿಪ್ರಾಯ. ‘ಒಳಗೆ ಹೋದವರು ನಾವಾಗಿರುತ್ತೇವೆ. ಕುಟುಂಬದವರು ಅಮಾಯಕರು. ಅವರನ್ನು ಟಾರ್ಗೆಟ್ ಮಾಡೋದು ಸರಿ ಅಲ್ಲ’ ಎಂದಿದ್ದಾರೆ ಕಾರ್ತಿಕ್ (Karthik). ಕೆಲವರು ಅವರಿಗೆ ಪ್ಲೇಬಾಯ್ ಪಟ್ಟ ಕೊಟ್ಟಿದ್ದಾರೆ. ‘ಹೇಳುವವರು ಹೇಳುತ್ತಾರೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ’ ಎಂದಿದ್ದಾರೆ ಕಾರ್ತಿಕ್. ಬಿಗ್ ಬಾಸ್ ವಿನ್ ಆದ ಖುಷಿಯಲ್ಲಿ ಅವರಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಜೊತೆ ಒಂದು ಕಾರು ಹಾಗೂ ಬೈಕ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jan 29, 2024 01:12 PM
Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More