AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ಯಾವುದೇ ಹುಡುಗಿ ಇಲ್ಲ’; ಗರ್ಲ್​ಫ್ರೆಂಡ್​ ವಿಚಾರದಲ್ಲಿ ಕಾರ್ತಿಕ್ ಮಹೇಶ್ ಸ್ಪಷ್ಟನೆ

ಕಾರ್ತಿಕ್ ಮಹೇಶ್ ಅವರಿಗೆ ಗರ್ಲ್​ಫ್ರೆಂಡ್ ಇದ್ದಾರೆ ಎಂದು ಹೇಳಲಾಗಿತ್ತು. ಹಾಗಿದ್ದರೂ ಅವರು ಸಂಗೀತಾ ಮತ್ತು ನಮ್ರತಾ ಜೊತೆ ಫ್ಲರ್ಟ್ ಮಾಡಿದ್ದು ಏಕೆ ಎನ್ನುವುದು ಅನೇಕರ ಪ್ರಶ್ನೆ ಆಗಿತ್ತು. ಇದಕ್ಕೆ ಕಾರ್ತಿಕ್ ಅವರು ಉತ್ತರ ನೀಡಿದ್ದಾರೆ.

‘ನನಗೆ ಯಾವುದೇ ಹುಡುಗಿ ಇಲ್ಲ’; ಗರ್ಲ್​ಫ್ರೆಂಡ್​ ವಿಚಾರದಲ್ಲಿ ಕಾರ್ತಿಕ್ ಮಹೇಶ್ ಸ್ಪಷ್ಟನೆ
ಕಾರ್ತಿಕ್
ರಾಜೇಶ್ ದುಗ್ಗುಮನೆ
|

Updated on: Jan 29, 2024 | 12:38 PM

Share

ಕಾರ್ತಿಕ್ ಮಹೇಶ್ (Karthik Mahesh) ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಚರ್ಚೆ ಹುಟ್ಟುಹಾಕಿದ್ದರು. ಅವರಿಗೆ ಗರ್ಲ್​​ಫ್ರೆಂಡ್​ ಇದ್ದಾರೆ ಎಂದು ಹೇಳಲಾಗಿತ್ತು. ನಮ್ರತಾ ಗೌಡ ಈ ವಿಚಾರವನ್ನು ರಿವೀಲ್ ಮಾಡಿದ್ದರು. ಆದರೆ,  ಆ ರೀತಿ ಯಾರೂ ಇಲ್ಲ ಎಂದಿದ್ದಾರೆ ಕಾರ್ತಿಕ್ ಮಹೇಶ್. ‘ಬಿಗ್ ಬಾಸ್’ ಮನೆಯಿಂದ ಕಪ್ ಗೆದ್ದು ಬಂದ ಬಳಿಕ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಹುಡುಗಿ ಬಗ್ಗೆ ಎದುರಾದ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.

ಕಾರ್ತಿಕ್ ಮಹೇಶ್ ಅವರಿಗೆ ಗರ್ಲ್​ಫ್ರೆಂಡ್ ಇದ್ದಾರೆ ಎಂದು ಹೇಳಲಾಗಿತ್ತು. ಹಾಗಿದ್ದರೂ ಅವರು ಸಂಗೀತಾ ಮತ್ತು ನಮ್ರತಾ ಜೊತೆ ಫ್ಲರ್ಟ್ ಮಾಡಿದ್ದು ಏಕೆ ಎನ್ನುವುದು ಅನೇಕರ ಪ್ರಶ್ನೆ ಆಗಿತ್ತು. ಇದಕ್ಕೆ ಕಾರ್ತಿಕ್ ಅವರು ಉತ್ತರ ನೀಡಿದ್ದಾರೆ. ತಮಗೆ ಗರ್ಲ್​ಫ್ರೆಂಡ್ ಇಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿದೆ.

‘ನಿಮ್ಮ ಹುಡುಗಿ ಎಷ್ಟು ಖುಷಿಯಾಗಿದ್ದಾಳೆ’ ಎಂದು ಕೇಳಲಾಯಿತು. ಇದಕ್ಕೆ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. ‘ಯಾರೂ ಕನೆಕ್ಟ್ ಆಗದೇ ಇರಲಿ ಎನ್ನುವ ಕಾರಣಕ್ಕೆ ಹಾಗೆ ಹೇಳುತ್ತಿದ್ದೆ. ಫ್ರೆಂಡ್ಸ್ ಸುಮಾರು ಜನರು ಇದ್ದಾರೆ. ಎಲ್ಲರೂ ಮಾತನಾಡುತ್ತಾರೆ. ಫ್ರೆಂಡ್ಸ್​ ಆಗಿ ಕೆಲವರು ಇದ್ದಾರೆ ಅಷ್ಟೇ. ನನಗೆ ಕರಿಯರ್​ಮೇಲೆ ಫೋಕಸ್ ಮಾಡಬೇಕಿದೆ. ಅಮ್ಮ ಒಪ್ಪಿಗೆ ಕೊಟ್ಟರೆ ಫ್ರೆಂಡ್ಸ್ ಸರ್ಕಲ್​ನಲ್ಲೇ ಒಬ್ಬರನ್ನು ತೋರಿಸಿ ಒಪ್ಪಿಗೆ ಪಡೆದು ಮದುವೆ ಆಗುತ್ತೇನೆ’ ಎಂದರು ಕಾರ್ತಿಕ್.

ಇದನ್ನೂ ಓದಿ: ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್​ಗೆ ಬಿದ್ದ ವೋಟ್​ಗಳೆಷ್ಟು? ಎಲ್ಲವೂ ಕೋಟಿಯಲ್ಲಿದೆ ಕಾರ್ತಿಕ್ ಮಹೇಶ್ ಅವರು ಸಂಗೀತಾ ಶೃಂಗೇರಿ ಜೊತೆ ಆಪ್ತವಾಗಿದ್ದರು. ನಂತರ ಇವರ ಸಂಬಂಧ ಕೊನೆ ಆಯಿತು. ಹೀಗಾಗಿ, ಕಾರ್ತಿಕ್ ಅವರಿಂದ ಸಂಗೀತಾ ಅಂತರ ಕಾಯ್ದುಕೊಂಡರು. ಕಾರ್ತಿಕ್ ಹಾಗೂ ತನಿಷಾ ಮಧ್ಯೆಯೂ ಕಿರಿಕ್ ಆಯಿತು. ನಂತರ ನಮ್ರತಾ ಗೌಡ ಕೂಡ ಕಾರ್ತಿಕ್​ನಿಂದ ದೂರ ಆದರು. ಆ ಬಳಿಕ ಒಂಟಿಯಾಗಿ ಕಾರ್ತಿಕ್ ಅವರು ಎಲ್ಲವನ್ನೂ ಎದುರಿಸಿದರು. ಕೊನೆಯಲ್ಲಿ ಅವರು ಕಪ್ ಗೆದ್ದಿದ್ದಾರೆ. ಒಂದು ಮನೆ ಕಟ್ಟಬೇಕು ಎನ್ನುವ ಕನಸನ್ನು ಅವರು ಕಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ