ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್​ಗೆ ಬಿದ್ದ ವೋಟ್​ಗಳೆಷ್ಟು? ಎಲ್ಲವೂ ಕೋಟಿಯಲ್ಲಿದೆ

ಪ್ರತಾಪ್ ಹಾಗೂ ಕಾರ್ತಿಕ್ ಸತತ 112 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಳೆದು ಬಂದಿದ್ದಾರೆ. ಕಾರ್ತಿಕ್ ಅವರ ಆಟ ಅನೇಕರಿಗೆ ಇಷ್ಟ ಆಗಿದೆ. ಅವರು ಕಪ್ ಗೆಲ್ಲಲಿ ಎಂಬುದು ಅಭಿಮಾನಿಗಳ ಕೋರಿಕೆ ಆಗಿತ್ತು. ಈ ಕೋರಿಕೆ ಈಡೇರಿದೆ.

ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್​ಗೆ ಬಿದ್ದ ವೋಟ್​ಗಳೆಷ್ಟು? ಎಲ್ಲವೂ ಕೋಟಿಯಲ್ಲಿದೆ
ಪ್ರತಾಪ್-ಕಾರ್ತಿಕ್
Follow us
|

Updated on:Jan 29, 2024 | 9:29 AM

ಕಾರ್ತಿಕ್ ಮಹೇಶ್ (Karthik Mahesh) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಬಿಗ್ ಬಾಸ್​ ನೀಡೋ ಆಕರ್ಷಕ ಟ್ರೋಫಿ ಜೊತೆಯಲ್ಲಿ 50 ಲಕ್ಷ ರೂಪಾಯಿ, ಮಾರುತಿ ಸುಜುಕಿ ಬ್ರೇಜಾ ಕಾರು ಹಾಗೂ ಇಲೆಕ್ಟ್ರಿಕ್ ಬೌನ್ಸ್ ಸ್ಕೂಟರ್ ಕಾರ್ತಿಕ್​ಗೆ ಸಿಕ್ಕಿದೆ. ರನ್ನರ್​ಅಪ್ ಆದ ಪ್ರತಾಪ್ ಅವರಿಗೆ ಬಿಗ್ ಬಾಸ್ ಕಡೆಯಿಂದ 10 ಲಕ್ಷ ರೂಪಾಯಿ ಹಾಗೂ ಒಂದು ಬೌನ್ಸ್ ಬೈಕ್ ಸಿಕ್ಕಿದೆ. ಇಬ್ಬರಿಗೂ ಬಿದ್ದ ವೋಟ್​ಗಳ ಸಂಖ್ಯೆ ಕೋಟಿಗಳಲ್ಲಿದೆ.

ಕಾರ್ತಿಕ್ ಮಹೇಶ್ ಅವರು ಈ ಹಣವನ್ನು ಮನೆ ಕಟ್ಟಲು ಬಳಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ತಾಯಿಗಾಗಿ ಪುಟ್ಟ ಮನೆ ಕಟ್ಟುವ ಕನಸು ಕಂಡಿದ್ದಾರೆ. ಪ್ರತಾಪ್ ಅವರು ಈ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಕೆ ಮಾಡಿಕೊಳ್ಳುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ಉತ್ತಮ ಆಟ ಪ್ರದರ್ಶಿಸುತ್ತಿದ್ದ ಕಾರ್ತಿಕ್ ಅವರು ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ ಅನ್ನೋದು ವಿಶೇಷ.

ಈ ಬಾರಿ ಬಿಗ್ ಬಾಸ್ ನೋಡುವವರ ಸಂಖ್ಯೆ ದೊಡ್ಡದಿತ್ತು. ಹೀಗಾಗಿ, ಅಭಿಮಾನಿ ಬಳಗ ಕೂಡ ಹಿರಿದಾಗಿತ್ತು. ಅದೇ ರೀತಿ ಬಿದ್ದ ವೋಟ್​ಗಳ ಸಂಖ್ಯೆಯೂ ಕೋಟಿಗಳಲ್ಲಿವೆ. ಕಿಚ್ಚ ಸುದೀಪ್ ಅವರು ಆರಂಭದಲ್ಲೇ ಈ ವಿಚಾರ ಹೇಳಿದ್ದರು. ವಿನರ್ ಯಾರು ಎಂದು ಘೋಷಿಸುವುದಕ್ಕೂ ಮೊದಲು ವೋಟ್​ಗಳನ್ನು ರಿವೀಲ್ ಮಾಡಿದರು.

‘ಟಾಪ್ ಆರರಲ್ಲಿ ಇರುವವರ ವೋಟ್ ಸೇರಿದರೆ 10 ಕೋಟಿಗೂ ಮೇಲಿರಲಿದೆ. ರನ್ನರ್​ ಅಪ್​ಗೆ ಸಿಕ್ಕ ವೋಟ್ 2,20,04,202, ವಿನ್ನರ್​ಗೆ ಸಿಕ್ಕ ವೋಟ್ 2, 97,39,904’ ಎಂದರು ಸುದೀಪ್. ‘ಅವರು ಇಷ್ಟ, ಇವರು ಇಷ್ಟ ಎಂದು ನಾವು ವಿನ್ ಮಾಡ್ಸಲ್ಲ. ಯಾರಿಗೆ ಹೆಚ್ಚು ವೋಟ್ ಬಿದ್ದಿದೆಯೋ ಅವರನ್ನೇ ಗೆಲ್ಲಿಸುತ್ತೇವೆ. ಅದನ್ನು ಯಾರೂ ಡಿಬೇಟ್ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ ಸುದೀಪ್. ಕೊನೆಯಲ್ಲಿ ಕಾರ್ತಿಕ್​ ಕೈನ ಎತ್ತಿದ್ದಾರೆ ಅವರು.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ ಸೀಸನ್ 10 ಗೆದ್ದ ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್​ ರನ್ನರ್ ಅಪ್ 

ಕಾರ್ತಿಕ್ ಹಾಗೂ ಪ್ರತಾಪ್​ ಸತತ 112 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಳೆದು ಬಂದಿದ್ದಾರೆ. ಕಾರ್ತಿಕ್ ಆಟ ಅನೇಕರಿಗೆ ಇಷ್ಟ ಆಗಿದೆ. ಅವರು ಕಪ್ ಗೆಲ್ಲಲಿ ಎಂಬುದು ಅಭಿಮಾನಿಗಳ ಕೋರಿಕೆ ಆಗಿತ್ತು. ಈ ಕೋರಿಕೆ ಈಡೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:25 am, Mon, 29 January 24

ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ