AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡ​: ಗೆದ್ದ ಹಣ, ಉಡುಗೊರೆಯನ್ನು ಏನು ಮಾಡುತ್ತಾರೆ ಡ್ರೋನ್ ಪ್ರತಾಪ್?

Drone Prathap: ಬಿಗ್​ಬಾಸ್​ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್ ಗೆ ಬಂದಿರುವ ಲಕ್ಷಾಂತರ ಹಣ ಹಾಗೂ ಉಡುಗೊರೆಯನ್ನು ಏನು ಮಾಡುತ್ತಾರಂತೆ? ಅವರೇ ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡ​: ಗೆದ್ದ ಹಣ, ಉಡುಗೊರೆಯನ್ನು ಏನು ಮಾಡುತ್ತಾರೆ ಡ್ರೋನ್ ಪ್ರತಾಪ್?
ಮಂಜುನಾಥ ಸಿ.
| Edited By: |

Updated on:Jan 29, 2024 | 9:44 AM

Share

ಬಿಗ್​ಬಾಸ್ ಕನ್ನಡ ಸೀಸನ್ 10ರ (BiggBoss) ಫಿನಾಲೆ ಮುಗಿದಿದೆ. ಹಲವರು ಊಹಿಸದ ರೀತಿ ಡ್ರೋನ್ ಪ್ರತಾಪ್ ಫಿನಾಲೆ ವರೆಗೆ ಬಂದಿದ್ದು ಮಾತ್ರವೇ ಅಲ್ಲದೆ ಮೊದಲ ರನ್ನರ್ ಅಪ್ ಆಗಿದ್ದಾರೆ. ಕಾರ್ತಿಕ್ ಮಹೇಶ್ ವಿಜೇತರಾಗಿದ್ದಾರೆ. ವಿಜೇತರಿಗೆ 10 ಲಕ್ಷ ನಗದು, ಮಾರುತಿ ಬ್ರಿಜಾ ಕಾರು ಹಾಗೂ ಒಂದು ಎಲೆಕ್ಟ್ರಿಕ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಅಂತೆಯೇ ರನ್ನರ್ ಅಪ್ ಡ್ರೋನ್ ಪ್ರತಾಪ್​ಗೂ ಸಹ 10 ಲಕ್ಷ ನಗದು, ಒಂದು ಎಲೆಕ್ಟ್ರಿಕ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ಹಣ ಹಾಗೂ ಉಡುಗೊರೆಯನ್ನು ತಾವು ಏನು ಮಾಡುವುದಾಗಿ ವೇದಿಕೆ ಮೇಲೆ ಪ್ರತಾಪ್ ಘೋಷಿಸಿದ್ದಾರೆ.

ಟಾಪ್ 2 ಆಗುತ್ತಿದ್ದಂತೆ ಖುಷಿಯಿಂದ ತೇಲಾಡಿದ ಪ್ರತಾಪ್, ನಾನು ಇದನ್ನು ನಿರೀಕ್ಷೆ ಸಹ ಮಾಡಿರಲಿಲ್ಲ ಎಂದರು. ಬಳಿಕ ಸುದೀಪ್ ಬಳಿ ಮಾತನಾಡಿದ ಪ್ರತಾಪ್, ನಾನು ಮೊದಲೇ ಹೇಳಿದ್ದೆ, ನಾನು ಆಡುತ್ತಿರುವುದು ಗೆಲ್ಲಲು ಮಾತ್ರ, ಹಣಕ್ಕಾಗಿ ಅಲ್ಲ, ಮೊದಲೇ ಹೇಳಿದಂತೆ ನನಗೆ ಟ್ರೋಫಿ ಮಾತ್ರ ಸಾಕು, ಹಣವನ್ನು ನಾನು ಯಾವುದಾದರೂ ಸೇವಾಲಯಕ್ಕೆ ದಾನ ಮಾಡುತ್ತೇನೆ ಎಂದರು. ಅದಾದ ಬಳಿಕ ರನ್ನರ್ ಅಪ್ ಆದಾಗಲೂ ಸಹ ಈ ಎಲೆಕ್ಟ್ರಿಕ್ ಬೈಕ್ ಅನ್ನು ಯಾವುದಾದರೂ ಡೆಲಿವರಿ ಕೆಲಸ ಮಾಡುವವರಿಗೆ ನಾನು ನೀಡಿಬಿಡುತ್ತೇನೆ’ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ವೋಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತದೆ? ವಿವರಿಸಿದ ಕಿಚ್ಚ ಸುದೀಪ್

ಇದೇ ವಿಷಯವಾಗಿ ಮಾತನಾಡಿದ ಕಾರ್ತಿಕ್, ನಾನು ನನ್ನ ತಾಯಿಯನ್ನು ದೇವರೆಂದು ನಂಬಿದ್ದೇನೆ. ಅವರಿಗಾಗಿ ಒಂದು ಗುಡಿ ಅಂದರೆ ಒಂದು ಮನೆಯನ್ನು ಕಟ್ಟಿಸಬೇಕೆಂಬುದು ನನ್ನ ಕನಸು ಅದರಂತೆ ಒಂದು ಮನೆ ಕಟ್ಟಿಸುತ್ತೇನೆ ಎಂದರು. ಕಾರ್ತಿಕ್ ಮೊದಲಿನಿಂದಲೂ ಈ ಅವರ ಕನಸಿನ ಬಗ್ಗೆ ಹೇಳಿಕೊಂಡೇ ಬಂದಿದ್ದರು. ತಾವು ಗೆದ್ದರೆ ಮನೆ ಕಟ್ಟಿಸುವುದಾಗಿ ಮನೆಯಲ್ಲಿದ್ದಾಗ ಹಲವು ಬಾರಿ ಹೇಳಿಕೊಂಡಿದ್ದರು.

ಅಂದಹಾಗೆ ಡ್ರೋನ್ ಪ್ರತಾಪ್​ ಈಗಾಗಲೇ ಕೆಲವು ಸಾಲಗಳಲ್ಲಿ ಇದ್ದಾರೆ. ಪ್ರತಾಪ್​ಗೆ ಹಣ ನೀಡಿದ ಪುಣೆಯ ವ್ಯಕ್ತಿ ಎರಡು ದಿನದ ಹಿಂದಷ್ಟೆ ಬೆಂಗಳೂರಿಗೆ ಬಂದು ಪ್ರತಾಪ್​ಗೆ ಕೆಲವು ದಿನಗಳ ಕಾಲಾವಕಾಶ ನೀಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಇದಾವುದರ ಪರಿವೆ ಇಲ್ಲದೆ ಪ್ರತಾಪ್, ಗೆದ್ದಿರುವ ಹಣವನ್ನು ದಾನ ಮಾಡುವುದಾಗಿ ಹೇಳಿದ್ದಾರೆ. ವಾಸ್ತವ ಗೊತ್ತಾದ ಬಳಿಕ ಅವರು ತಮ್ಮ ನಿರ್ಧಾರ ಬದಲಿಸುತ್ತಾರೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:53 am, Mon, 29 January 24

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್