ಬಿಗ್​ಬಾಸ್ ವೋಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತದೆ? ವಿವರಿಸಿದ ಕಿಚ್ಚ ಸುದೀಪ್

Bigg Boss Voting: ಬಿಗ್​ಬಾಸ್​ ಕನ್ನಡದಲ್ಲಿ ವೋಟಿಂಗ್ ಹೇಗಾಗುತ್ತದೆ? ವೋಟಿಂಗ್ ಲೆಕ್ಕಚಾರ ಯಾರು ಮಾಡುತ್ತಾರೆ? ಬಿಗ್​ಬಾಸ್ ಆಯೋಜಕರು ಬೇಕಾದವರಿಗೆ ಮತಗಳನ್ನು ಹೆಚ್ಚು ಮಾಡಬಹುದಾ? ಸುದೀಪ್ ನೀಡಿದರು ಮಾಹಿತಿ.

ಬಿಗ್​ಬಾಸ್ ವೋಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತದೆ? ವಿವರಿಸಿದ ಕಿಚ್ಚ ಸುದೀಪ್
Follow us
ಮಂಜುನಾಥ ಸಿ.
|

Updated on:Jan 28, 2024 | 12:20 AM

ಬಿಗ್​ಬಾಸ್ ನ (BiggBoss) ವೋಟಿಂಗ್ ಪ್ರಕ್ರಿಯೆ ಬಗ್ಗೆ ಆಗಾಗ್ಗೆ ಅನುಮಾನ, ಟೀಕೆ, ವಿಮರ್ಶೆಗಳು ನಡೆಯುತ್ತಲೇ ಇರುತ್ತವೆ. ಅದು ಹೇಗೆ ಅಷ್ಟು ಮತಗಳು ಬರಲು ಸಾಧ್ಯ? ವಾಹಿನಿಯವರು ತಮಗೆ ಯಾರಿಗೆ ಬೇಕೋ ಅವರಿಗೆ ಮತಗಳನ್ನು ಹೆಚ್ಚು ಮಾಡಿಸುತ್ತಾರೆ ಎಂಬಿತ್ಯಾದಿ ಟೀಕೆಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಬಿಗ್​ಬಾಸ್ ಕನ್ನಡ ಸೀಸನ್ 10ರ ಫಿನಾಲೆ ನಡೆಯುತ್ತಿದೆ. ಹಿಂದಿನ ಎಲ್ಲ ಸೀಸನ್​ಗಿಂತಲೂ ಹೆಚ್ಚಿನ ಮತಗಳು ಈ ಬಾರಿ ಬಂದಿವೆ. ಬಿಗ್​ಬಾಸ್​ನಲ್ಲಿ ವೋಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತದೆ? ವೋಟ್ ಅನ್ನು ಯಾರು ಲೆಕ್ಕ ಹಾಕುತ್ತಾರೆ ಎಂಬುದನ್ನು ಸುದೀಪ್ ವಿವರಿಸಿದ್ದಾರೆ.

ಬಿಗ್​ಬಾಸ್​ನ ವೋಟಿಂಗ್ ಪ್ರಕ್ರಿಯೆ ಬಗ್ಗೆ ಕೆಲವರಿಗೆ ಅನುಮಾನಗಳಿವೆ. ಯಾರಿಗೆ ಹೆಚ್ಚು ಮತ ಬಂದಿದೆ, ಅವರಿಗೇಕೆ ಅಷ್ಟು ಮತ, ನಮಗ್ಯಾಕೆ ಕಡಿಮೆ ಮತ ಎಂಬಿತ್ಯಾದಿ ಅನುಮಾನಗಳು ಸ್ಪರ್ಧಿಗಳಿಗೆ, ಪ್ರೇಕ್ಷಕರಿಗೂ ಬಂದಿರುತ್ತವೆ. ಅದಕ್ಕೆ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದ ಸುದೀಪ್, ಮತಗಳನ್ನು ನಾವು ಅಥವಾ ಚಾನೆಲ್​ವನರು ಲೆಕ್ಕ ಹಾಕುವುದಿಲ್ಲ. ಕಲರ್ಸ್​ನವರು ತಮಗೆ ಯಾರಿಗೆ ಬೇಕೋ ಅವರಿಗೆ ಮತ ಕೊಡುತ್ತಾರೆ ಎಂದು ಹೇಳುವಂತಿಲ್ಲ. ಸ್ಪರ್ಧಿಗಳ ಪರಿಚಯವೇ ಇಲ್ಲದ ಜನರು ಬಂದ ಮತಗಳನ್ನು ಕ್ರೂಡೀಕರಿಸಿ ನಮಗೆ ಮಾಹಿತಿ ನೀಡುತ್ತಾರೆ.

ಇದನ್ನೂ ಓದಿ:ಗೆಲುವಿನ ಹೊಸ್ತಿಲಲ್ಲಿ ಮನೆಯಿಂದ ಹೊರಬಿದ್ದ ತುಕಾಲಿ ಸಂತು

ಬಿಗ್​ಬಾಸ್​ ಸ್ಪರ್ಧಿಗಳಿಗೆ ಬಂದ ಮತಗಳ ಲೆಕ್ಕಾಚಾರ ಹಾಕಲಾಗುವುದು ಮುಂಬೈನಲ್ಲಿ. ಅಲ್ಲಿನ ಆಡಿಟರ್​ಗಳು ಪ್ರತಿ ಸ್ಪರ್ಧಿಗೆ ಬಂದ ಮತಗಳನ್ನು ಲೆಕ್ಕಾಚಾರ ಹಾಕಿ ಅದರ ಮಾಹಿತಿ ನೀಡುತ್ತಾರೆ. ಹಾಗಾಗಿ ಸ್ವಜನಪಕ್ಷಪಾತದ ಪ್ರಶ್ನೆಯೇ ಬರುವುದಿಲ್ಲ. ಒಬ್ಬ ಬಳಕೆದಾರ ತಮ್ಮ ಖಾತೆಯಿಂದ 99 ಮತಗಳನ್ನು ಹಾಕಬಹುದಾಗಿರುತ್ತದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಸ್ನೇಹಿತರಿದ್ದಾರೆ, ಸಂಬಂಧಿಗಳಿದ್ದಾರೆ ಅವರುಗಳು ಹೇಗೆ ಮತ ಹಾಕುತ್ತಾರೆ, ಹಾಕಿಸುತ್ತಾರೆ ಎಂಬುದರ ಮೇಲೆ ಮತಗಳ ಲೆಕ್ಕಾಚಾರ ನಿಂತಿದೆ ಎಂದು ಸುದೀಪ್ ಮಾಹಿತಿ ನೀಡಿದರು.

ಈ ಸೀಸನ್​ನಲ್ಲಿ ಎರಡು ವಾರಗಳ ಕಾಲ ಮತಗಳ ಆಧಾರದಲ್ಲಿ ಎಲಿಮಿನೇಟ್ ಮಾಡಲಾಗಿತ್ತು. ಯಾವ ಭಾರಿಯೂ ಸ್ಪರ್ಧಿಗಳಿಗೆ ಬಂದ ಮತಗಳ ಸಂಖ್ಯೆ ಹೇಳಲಾಗಿರಲಿಲ್ಲ. ಆದರೆ ಈ ಬಾರಿ ವರ್ತೂರು ಸಂತೋಷ್​ಗೆ ಬಂದ ಮತಗಳ ಸಂಖ್ಯೆಯನ್ನು ಸುದೀಪ್ ಬಹಿರಂಗಪಡಿಸಿದ್ದರು. ಆಗಲೇ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಈ ಸೀಸನ್​ನಲ್ಲಿ ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಅವರಿಗೆ ಭಾರಿ ಮೊತ್ತದ ಮತಗಳು ಬಂದಿದ್ದವು. ಇದೀಗ ಫಿನಾಲೆಯಲ್ಲಿ ಯಾರಿಗೆ ಹೆಚ್ಚು ದೊರೆತು ಗೆಲ್ಲಲಿದ್ದಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:17 am, Sun, 28 January 24

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್