Tukali Santhosh: ಈ 5 ಕಾರಣದಿಂದಲೇ ತುಕಾಲಿ ಸಂತೋಷ್​ಗೆ ಮಿಸ್​ ಆಯ್ತು ಬಿಗ್ ಬಾಸ್​ ಟ್ರೋಫಿ

ಆರು ಫೈನಲಿಸ್ಟ್​ಗಳಲ್ಲಿ ಮೊದಲು ಎಲಿಮಿನೇಟ್​ ಆಗುವುದು ತುಕಾಲಿ ಸಂತೋಷ್​ ಅವರೇ ಎಂದು ಬಹುತೇಕರು ಊಹಿಸಿದ್ದರು. ಫಿನಾಲೆಯಲ್ಲಿ ವೀಕ್ಷಕರಾಗಿ ಬಂದಿದ್ದ ಮಾಜಿ ಸ್ಪರ್ಧಿಗಳ ಅಭಿಪ್ರಾಯ ಕೂಡ ಅದೇ ಆಗಿತ್ತು. ಕಡೆಗೂ ಅದು ನಿಜವಾಯಿತು. 6 ಫೈನಲಿಸ್ಟ್​ಗಳ ಪೈಕಿ ಕಡಿಮೆ ವೋಟ್​ ಪಡೆದ ತುಕಾಲಿ ಸಂತೋಷ್​ ಎಲಿಮಿನೇಟ್​ ಆದರು. ಅವರು ಔಟ್​ ಆಗಲು ಕಾರಣ ಏನು?

Tukali Santhosh: ಈ 5 ಕಾರಣದಿಂದಲೇ ತುಕಾಲಿ ಸಂತೋಷ್​ಗೆ ಮಿಸ್​ ಆಯ್ತು ಬಿಗ್ ಬಾಸ್​ ಟ್ರೋಫಿ
ತುಕಾಲಿ ಸಂತೋಷ್​
Follow us
ಮದನ್​ ಕುಮಾರ್​
|

Updated on: Jan 28, 2024 | 7:17 AM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನ ಫಿನಾಲೆಯ (BBK 10 Finale) ಮೊದಲ ಸಂಚಿಕೆ ಜನವರಿ 27ರಂದು ಪ್ರಸಾರ ಆಗಿದೆ. ಕೊನೆಯಲ್ಲಿ ಉಳಿದುಕೊಂಡ 6 ಫೈನಲಿಸ್ಟ್​ಗಳ ಪೈಕಿ ತುಕಾಲಿ ಸಂತೋಷ್​ (Tukali Santhosh) ಅವರು ಔಟ್​ ಆಗಿದ್ದಾರೆ. ಅವರು ಎಮಿಲಿನೇಟ್​ ಆಗಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ‘ನಿಮ್ಮ ಬಿಗ್​ ಬಾಸ್​ ಪಯಣ ಇಲ್ಲಿಗೆ ಅಂತ್ಯ’ ಎಂದು ಹೇಳಿದಾಗ ತುಕಾಲಿ ಸಂತೋಷ್​ ಅವರು ಹೆಚ್ಚೇನೋ ಬೇಸರ ಮಾಡಿಕೊಳ್ಳಲಿಲ್ಲ. ನಗುನಗುತ್ತಲೇ ಅವರು ದೊಡ್ಮನೆ ತೊರೆದಿದ್ದಾರೆ. ಅಷ್ಟಕ್ಕೂ ಈ ಜರ್ನಿಯಲ್ಲಿ ಅವರು ಮಾಡಿದ ತಪ್ಪು ಏನು? ಫಿನಾಲೆ (Bigg Boss Kannada Finale) ತನಕ ಬಂದವರು ಟ್ರೋಫಿ ಗೆಲ್ಲಲು ಯಾಕೆ ಸಾಧ್ಯವಾಗಲಿಲ್ಲ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ಆರು ಫೈನಲಿಸ್ಟ್​ಗಳಲ್ಲಿ ಮೊದಲು ಎಲಿಮಿನೇಟ್​ ಆಗುವುದು ತುಕಾಲಿ ಸಂತೋಷ್​ ಅವರೇ ಎಂದು ಬಹುತೇಕರು ಊಹಿಸಿದ್ದರು. ಫಿನಾಲೆಯಲ್ಲಿ ವೀಕ್ಷಕರಾಗಿ ಬಂದಿದ್ದ ಮಾಜಿ ಸ್ಪರ್ಧಿಗಳ ಅಭಿಪ್ರಾಯವನ್ನು ಸುದೀಪ್​ ಕೇಳಿದಾಗ ಬಹುತೇಕರಿಂದ ತುಕಾಲಿ ಸಂತೋಷ್​ ಅವರ ಹೆಸರೇ ಕೇಳಿಬಂದಿತ್ತು. ಕಡೆಗೂ ಆ ಊಹೆ ನಿಜವಾಯಿತು. 6 ಫೈನಲಿಸ್ಟ್​ಗಳ ಪೈಕಿ ಕಡಿಮೆ ವೋಟ್​ ಪಡೆದ ತುಕಾಲಿ ಸಂತೋಷ್​ ಎಲಿಮಿನೇಟ್​ ಆದರು.

ಕಾರಣ 1: ಮಂಕಾದ ಕಾಮಿಡಿ

ತುಕಾಲಿ ಸಂತೋಷ್​ ಅವರಿಗೂ ಬಿಗ್​ ಬಾಸ್​ ಟ್ರೋಫಿ ಗೆಲ್ಲುವ ಸಾಮರ್ಥ್ಯ ಇತ್ತು. ಆದರೆ ಅವರು ಸರಿಯಾಗಿ ಬಳಕೆ ಮಾಡಿಕೊಳ್ಳಲಿಲ್ಲ ಎನ್ನಬಹುದು. ಬಿಗ್​ ಬಾಸ್​ಗೆ ಶೋಗೆ ಬರುವುದಕ್ಕೂ ಮೊದಲು ಕಿರುತೆರೆಯ ಕಾಮಿಡಿ ಶೋಗಳ ಮೂಲಕ ಜನರಿಗೆ ಅವರ ಪರಿಚಯ ಆಗಿತ್ತು. ತಮ್ಮ ಶಕ್ತಿಯೇ ಕಾಮಿಡಿ ಎಂಬುದನ್ನು ಸಂತೋಷ್​ ಅವರು ಹೆಚ್ಚು ಅರ್ಥ ಮಾಡಿಕೊಳ್ಳಲಿಲ್ಲ. ಆಗೊಮ್ಮೆ ಈಗೊಮ್ಮೆ ಮಾತ್ರ ನಗಿಸುತ್ತಿದ್ದರು. ಉಳಿದ ಸಮಯದಲ್ಲಿ ಸುಮ್ಮನಿರುತ್ತಿದ್ದರು. ಅವರಿಗೆ ಕಡಿಮೆ ವೋಟ್​ ಬರಲು ಇದು ಪ್ರಮುಖ ಕಾರಣ.

ಕಾರಣ 2: ಮಾತು-ಮಾತು

ಬಿಗ್ ಬಾಸ್​ ಮನೆಯಲ್ಲಿ ಪ್ರತಿ ಮಾತಿಗೂ ಮಹತ್ವ ಇರುತ್ತದೆ. ಹಾಗಂತ ಬರೀ ಮಾತನಾಡಿಕೊಂಡೇ ಕಾಲ ಕಳೆದರೆ ಅದಕ್ಕೆ ಅರ್ಥ ಸಿಗುವುದಿಲ್ಲ. ಬಿಗ್​ ಬಾಸ್​ ಆಟದಲ್ಲಿ ತುಕಾಲಿ ಸಂತೋಷ್​ ಅವರು ಮಾತಿನ ಕಾರಣದಿಂದಲೇ ಸ್ವಲ್ಪ ಅಪಖ್ಯಾತಿ ಪಡೆದರು. ವರ್ತೂರು ಸಂತೋಷ್​ ಜೊತೆ ಸೇರಿ, ಬೀನ್​ ಬ್ಯಾಗ್​ ಮೇಲೆ ಕುಳಿತು ಗಂಟೆಗಟ್ಟಲೆ ಮಾತನಾಡಿದರು.

ಇದನ್ನೂ ಓದಿ: ‘ಯಾವನದ್ದೋ ಜತೆ ಓಡಿ ಹೋಗಿದ್ದಾಳೆ’: ಹೆಂಡತಿಯ ಅವಾಂತರ ವಿವರಿಸಿದ ತುಕಾಲಿ ಸಂತೋಷ್​

ಕಾರಣ 3: ಬರೀ ಗಾಸಿಪ್​

ತುಕಾಲಿ ಸಂತೋಷ್​ ಅವರು ಬಿಗ್ ಬಾಸ್​ ಮನೆಯಲ್ಲಿ ಗಾಸಿಪ್​ ಮಾಡುತ್ತಾರೆ ಎಂಬುದು ಬಹುತೇಕರ ಅಭಿಪ್ರಾಯ. ಬೀನ್​ ಬ್ಯಾಗ್​ ಮೇಲೆ ಕುಳಿತು ಬೇರೆಯವರ ವಿಷಯವನ್ನೇ ಅವರು ಹೆಚ್ಚಾಗಿ ಮಾತನಾಡುತ್ತಿದ್ದರು. ಅವರಿಗೆ ವರ್ತೂರು ಸಂತೋಷ್​ ಸಾಥ್​ ನೀಡುತ್ತಿದ್ದರು. ಅವರಿವರ ಬಗ್ಗೆ ಮಾತನಾಡುತ್ತಾ, ತಮ್ಮ ಆಟದ ಕಡೆಗೆ ಅವರು ಹೆಚ್ಚು ಗಮನ ನೀಡಲಿಲ್ಲ.

ಕಾರಣ 4: ಸ್ನೇಹ-ಜಗಳ

ಬಿಗ್​ ಬಾಸ್​ ಶೋನಲ್ಲಿ ತುಕಾಲಿ ಸಂತೋಷ್​ ಅವರು ಎಲ್ಲರ ಜೊತೆ ಬೆರೆತಿದ್ದು ಕಡಿಮೆ. ಅದೇ ಕಾರಣಕ್ಕೋ ಏನೋ ಮನೆಯ ಹಲವು ಸದಸ್ಯರು ಅವರನ್ನು ಫೇಕ್​ ಎಂದು ಕರೆದರು. ಅವರು ಸ್ನೇಹ ಮಾಡಿದ್ದು ವರ್ತೂರು ಸಂತೋಷ್​ ಜೊತೆ ಮಾತ್ರ. ಇನ್ನುಳಿದ ಸದಸ್ಯರ ಜೊತೆ ಅವರು ಅಂತರ ಕಾಯ್ದುಕೊಂಡಿದ್ದರು. ಸಂಗೀತಾ ಶೃಂಗೇರಿ ಜೊತೆ ಅವರ ಸ್ನೇಹ ಬೆಳೆಯಲೇ ಇಲ್ಲ.

ಕಾರಣ 5: ಪ್ರಚಾರ ಕಡಿಮೆ

ಜನರಿಂದ ವೋಟ್​ ಪಡೆಯಲು ದೊಡ್ಮನೆ ಒಳಗಿನ ಆಟ ಎಷ್ಟು ಮುಖ್ಯವೋ, ಮನೆ ಹೊರಗಿನ ಪ್ರಚಾರ ಕೂಡ ಅಷ್ಟೇ ಮುಖ್ಯ. ಈ ವಿಚಾರದಲ್ಲಿ ತುಕಾಲಿ ಸಂತೋಷ್​ ಹಿಂದುಳಿದರು. ಇತರೆ ಸ್ಪರ್ಧಿಗಳು ಸೋಶಿಯಲ್​ ಮೀಡಿಯಾವನ್ನು ಚೆನ್ನಾಗಿ ಬಳಸಿಕೊಂಡರು. ತಮ್ಮ ಆಪ್ತರ ಮೂಲಕ ಸೋಶಿಯಲ್​ ಮೀಡಿಯಾ ಖಾತೆಯನ್ನು ಹ್ಯಾಂಡಲ್​ ಮಾಡಿಸಿ ಪ್ರತಿ ದಿನ ಪ್ರಚಾರ ಪಡೆಯುತ್ತಿದ್ದರು. ಆದರೆ ತುಕಾಲಿ ಸಂತೋಷ್​ ಅವರ ಸೋಶಿಯಲ್​ ಮೀಡಿಯಾ ಖಾತೆ ಹೆಚ್ಚು ಆ್ಯಕ್ಟೀವ್​ ಆಗಿ ಇರಲಿಲ್ಲ. ಇದು ಕೂಡ ಅವರ ಜನಪ್ರಿಯತೆ ಕುಗ್ಗಲು ಕಾರಣ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ