‘ಯಾವನದ್ದೋ ಜತೆ ಓಡಿ ಹೋಗಿದ್ದಾಳೆ’: ಹೆಂಡತಿಯ ಅವಾಂತರ ವಿವರಿಸಿದ ತುಕಾಲಿ ಸಂತೋಷ್
ಹಾಡಿನ ಮೂಲಕ ತುಕಾಲಿ ಸಂತೋಷ್ ಅವರು ಹಾಸ್ಯದ ಹೊಳೆ ಹರಿಸಿದ್ದಾರೆ. ಈ ಸಂಚಿಕೆ ಜನವರಿ 19ರ ರಾತ್ರಿ ಪ್ರಸಾರ ಕಂಡಿದೆ. ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಟಾಸ್ಕ್ ಮಾಡುವಾಗ ತುಕಾಲಿ ಸಂತೋಷ್ ಅವರು ಎಲ್ಲರಿಗೂ ಮಸ್ತ್ ಮನರಂಜನೆ ನೀಡಿದ್ದಾರೆ.
ಹಾಸ್ಯ ನಟ ತುಕಾಲಿ ಸಂತೋಷ್ ಅವರಿಂದ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಲವಲವಿಕೆ ತುಂಬಿದೆ. ಸಾಕಷ್ಟು ಸಂದರ್ಭದಲ್ಲಿ ಅವರು ಕಾಮಿಡಿ ಮೂಲಕ ಮನೆಮಂದಿಯನ್ನು ನಗಿಸಿದ್ದಾರೆ. ಈಗ ತುಕಾಲಿ ಸಂತೋಷ್ (Tukali Santhosh) ಅವರು ಹೆಂಡತಿಯ ಅವಾಂತರಗಳನ್ನು ವಿವರಿಸಿದ್ದಾರೆ. ಹೆಂಡತಿ ಎಂದರೆ ಅವರ ನಿಜವಾದ ಪತ್ನಿ ಅಲ್ಲ. ಹಾಡಿನ ಮೂಲಕ ಅವರು ಹಾಸ್ಯದ ಹೊಳೆ ಹರಿಸಿದ್ದಾರೆ. ಅದರ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ಸಂಚಿಕೆ ಜನವರಿ 19ರ ರಾತ್ರಿ ಪ್ರಸಾರ ಕಂಡಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ದಿನದ 24 ಗಂಟೆಯೂ ಲೈವ್ ಮತ್ತು ಎಪಿಸೋಡ್ ನೋಡಬಹುದು. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಈಗ ಕೊನೇ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಫಿನಾಲೆ ಎದುರಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್ ಅಶೋಕ್
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

