AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾಕೆ ಹೀಗೆ ಮಾಡ್ತಿದ್ದೀರಿ? ಮಾಜಿ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10ರ ಫಿನಾಲೆ ನಡೆಸಿಕೊಡುತ್ತಿರುವ ಸುದೀಪ್, ಮಾಜಿ ಸ್ಪರ್ಧಿಗಳಿಗೆ ಸಣ್ಣ ಕ್ಲಾಸ್ ಸಹ ತೆಗೆದುಕೊಂಡರು.

ಯಾಕೆ ಹೀಗೆ ಮಾಡ್ತಿದ್ದೀರಿ? ಮಾಜಿ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್
ಮಂಜುನಾಥ ಸಿ.
|

Updated on:Jan 28, 2024 | 3:13 PM

Share

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರ ಫಿನಾಲೆ ನಡೆಸಿಕೊಡುತ್ತಿರುವ ಸುದೀಪ್, ಅತಿ ಹೆಚ್ಚು ಜನಮನ್ನಣೆ ಗಳಿಸಿರುವ ಸೀಸನ್ ಇದು ಎಂದಿದ್ದಾರೆ. ಮಾತ್ರವಲ್ಲದೆ ಅತಿ ಹೆಚ್ಚು ವಿವಾದಕ್ಕೆ ಕಾರಣವಾದ, ಟೀಕೆ, ವಿಮರ್ಶೆಗೆ ಗುರಿಯಾದ ಸೀಸನ್ ಸಹ ಇದೇ ಆಗಿದೆ ಎಂದಿದ್ದಾರೆ. ಮನೆಯ ಸದಸ್ಯರಿಗೆ ಮಾತ್ರವೇ ಅಲ್ಲದೆ ಸುದೀಪ್ ಅವರಿಗೂ ಇದು ಕ್ಲಿಷ್ಟಕರವಾದ ಸೀಸನ್ ಆಗಿತ್ತು. ಈ ಸೀಸನ್​ ಬಗ್ಗೆ ಹಲವು ಕಾರಣಗಳಿಗೆ ಹೆಚ್ಚು ಚರ್ಚೆಯಾಯಿತು. ಈ ಸೀಸನ್​ನಿಂದ ಹೊರಗೆ ಹೋದವರು ಕೆಲವರು ಸಹ ಬಿಗ್​ಬಾಸ್​ ಬಗ್ಗೆ ಋಣಾತ್ಮಕವಾಗಿ ಮಾತನಾಡಿದರು. ಈ ಬಗ್ಗೆ ಫಿನಾಲೆ ವೇದಿಕೆಯಲ್ಲಿ ಸುದೀಪ್ ಮಾತನಾಡಿದರು.

ಡ್ರೋನ್ ಪ್ರತಾಪ್ ಅವರು ಅನಾರೋಗ್ಯದಿಂದ ಹೊರಗೆ ಹೋಗಿ ಬಂದ ಬಗ್ಗೆ ಸುದೀಪ್ ಮಾತನಾಡುತ್ತಿದ್ದರು, ಪ್ರತಾಪ್ ಹೊರಗೆ ಹೋಗಿ ಅಲ್ಲಿ ಯಾರನ್ನೋ ಭೇಟಿ ಆಗಿ ಮನೆಯಲ್ಲಿ ಏನು ನಡೆದಿದೆಯೋ ತಿಳಿದುಕೊಂಡು ಒಳಗೆ ಬಂದ ಆಟ ಬದಲಾಯಿಸಿಕೊಂಡಿದ್ದಾನೆ ಎಂಬ ಮಾತುಗಳನ್ನು ತುಕಾಲಿ ಆಡಿದ್ದರು ಎಂದು ತಮಾಷೆಯಾಗಿಯೇ ಮಾತನಾಡುತ್ತಿದ್ದರು. ಅದಕ್ಕ ಪ್ರತಾಪ್, ಹೊರಗೆ ಹೋಗಿ ಆಸ್ಪತ್ರೆಯನ್ನಷ್ಟೆ ನೋಡಿದೆ ಎಂದು ಹೇಳಿದರು.

ಆ ಮಾತು ಹಾಗೆ ಮನೆಯಿಂದ ಹೊರಗೆ ಹೋಗಿ ಬಿಗ್​ಬಾಸ್ ಬಗ್ಗೆ ಸಂದರ್ಶನ ಕೊಡುತ್ತಿರುವವರ ಬಗ್ಗೆ ತಿರುಗಿತು, ಥಟ್ಟನೆ ಗಂಭೀರವಾದ ಸುದೀಪ್, ‘ನಿಮಗೆಲ್ಲ ಏನಾಗಿದೆ?, ಹೊರಗೆ ಹೋಗಿ ಸಂದರ್ಶನ ಕೊಡುತ್ತೀರಿ, ನಿಮ್ಮ ಸಹ ಸ್ಪರ್ಧಿಗಳ ಬಗ್ಗೆ ನೀವೇ ತುಚ್ಛವಾಗಿ ಮಾತನಾಡುತ್ತೀರಿ. ಶೋ ಬಗ್ಗೆ ಒಳ್ಳೆಯದೇ ಮಾತಬಾಡಬೇಕು ಎಂಬುದು ನಮ್ಮ ನಿಯಮವಲ್ಲ. ವಿಮರ್ಶೆ ಮಾಡುವ ಅಧಿಕಾರ ನಿಮಗೆ ಇದೆ. ಆದರೆ ಇನ್ನೊಬ್ಬರಿಗೆ ನೋವು ಕೊಡುವ ಅಧಿಕಾರ ನಿಮಗೆ ಇಲ್ಲ’ ಎಂದರು.

ಇದನ್ನೂ ಓದಿ:ಗುಟ್ಟು-ರಟ್ಟು ಮಾಡಿದ ಸುದೀಪ್, ವರ್ತೂರು ಭಾವುಕ, ಮನೆಯರಿಗೆ ಶಾಕ್

ಒಂದೊಮ್ಮೆ ಈ ಶೋ ನಿಯಮ ಮೀರುವಂತಿದ್ದರೆ ನಾನು ಹತ್ತು ವರ್ಷ ಇಲ್ಲಿ ಇರುತ್ತಿಲ್ಲ. ಎಥಿಕ್ಸ್-ಪ್ರಿನ್ಸಿಪಲ್ ಇರದ ಕಡೆ ಖಂಡಿತ ನಾನು ಇರುವುದಿಲ್ಲ. ಇಲ್ಲಿ ಇರಬೇಕಾದರೆ ಒಂದು ಮಾತು ಆಡುತ್ತೀರಿ ಹೊರಗೆ ಹೋದಮೇಲೆ ಒಂದು ಮಾತು ಆಡುತ್ತೀರಿ ಇದೆಲ್ಲ ನಿಮಗೆ ಬೇಕ ಎಂದು ಪ್ರಶ್ನೆ ಮಾಡಿದರು. ಬಳಿಕ ರಕ್ಷಕ್ ಕಡೆ ತಿರುಗಿ, ಆವೇಶದಲ್ಲೇ ಮಾತನಾಡುತ್ತೀರಿ, ಮಾತನಾಡಿ, ಆ ಐದು ನಿಮಿಷ ಸಂದರ್ಶನದಲ್ಲಿ ಹೀರೋ ಅಂದುಕೊಳ್ಳುತ್ತೀರಿ. ಯಾವುದೇ ಸ್ಪರ್ಧಿಗಳ ವಿಷಯ ಬಂದಾಗ ನಾನು ಬಹಳ ಆಳವಾಗಿ ಘಟನೆಯನ್ನು ಪರಾಮರ್ಶಿಸಿದ ಬಳಿಕವೇ ಬಂದು ನಿಮ್ಮ ಬಳಿ ಮಾತನಾಡುವುದು. ಯಾವುದೇ ಕಂಟೆಸ್ಟಂಟ್ ಬಗ್ಗೆ ಅವರು ಮಾಡದ ತಪ್ಪಿಗೆ ಅವರ ಚಾರಿತ್ರ್ಯ ಹರಣ ಆಗಬಾರದು. ನೀವು ಕಂಟೆಸ್ಟೆಂಟ್ಸ್ ಆಗಿದ್ದಾಗಲೂ ನನ್ನ ನಿಲುವು ಇದೇ ಆಗಿತ್ತು’ ಎಂದರು.

ಅದಕ್ಕೆ ರಕ್ಷಕ್ ಕ್ಷಮಿಸಿ ಅಣ್ಣ ಎಂದರು. ಅದಕ್ಕೆ ಸುದೀಪ್, ನಾವು ನಿಮ್ಮನ್ನೂ ಪ್ರೀತಿಸುತ್ತೇವೆ ಅದು ನಿಮಗೆ ಗೊತ್ತು ತಾನೆ? ಎಂದು ಪ್ರಶ್ನೆ ಮಾಡಿದರು. ಹೌದು ಅಣ್ಣ ಎಂದರು. ನಿಮ್ಮ ತಂದೆ ಬುಲೆಟ್ ಪ್ರಕಾಶ್ ಅವರು ನಮ್ಮ ಆತ್ಮೀಯರು, ಅವರ ಬಗ್ಗೆ ಇಂದಿಗೂ ಗೌರವ ಇಟ್ಟುಕೊಂಡಿದ್ದೀವಿ. ಇನ್ನು ನಿಮ್ಮನ್ನು ಪ್ರೀತಿಸದೇ ಇರುತ್ತೀವಾ? ಎಂದು ಪ್ರಶ್ನೆ ಮಾಡಿದರು. ‘ಇಲ್ಲ ಗೊತ್ತಿದೆ ಅಣ್ಣ, ಕ್ಷಮಿಸಿ, ನನ್ನ ಉದ್ದೇಶ ಬೇರೆ ಆಗಿತ್ತು’ ಎಂದರು.

ಸುದೀಪ್, ರಕ್ಷಕ್ ಬಗ್ಗೆ ಮಾತ್ರವೇ ಹೇಳಿದ್ದಲ್ಲ, ಬದಲಿಗೆ ಮನೆಯಿಂದ ಹೊರಗೆ ಹೋದ ಮೇಲೆ ಬಿಗ್​ಬಾಸ್ ಬಗ್ಗೆ ಕೆಲವು ಸದಸ್ಯರು ನೆಗೆಟಿವ್ ಆಗಿ ಸಹ ಮಾತನಾಡಿದ್ದಾರೆ. ಸಂಗೀತಾಗೆ ಬಿಗ್​ಬಾಸ್​ನಿಂದಲೇ ಬೂಸ್ಟ್ ದೊರಕಿದೆ ಎಂಬ ಅರ್ಥ ಬರುವಂತೆ ತನಿಷಾ ಮಾತನಾಡಿದ್ದರು. ಇನ್ನೂ ಕೆಲವರು ಬಿಗ್​ಬಾಸ್ ಬಗ್ಗೆ ಅಲ್ಲಲ್ಲಿ ತುಸು ನೆಗೆಟಿವ್ ಆಗಿ ಮಾತನಾಡಿದ್ದರು. ಅವರ ಬಗ್ಗೆಯೂ ಸುದೀಪ್ ಮಾತನಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:36 pm, Sat, 27 January 24

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ