ಬಿಗ್​ಬಾಸ್ ಕನ್ನಡ ಸೀಸನ್ 10 ಗೆದ್ದ ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್​ ರನ್ನರ್ ಅಪ್

Bigg Boss Finale: ಬಿಗ್​ಬಾಸ್ ಕನ್ನಡ ಸೀಸನ್ 10 ಮುಗಿದಿದ್ದು, ಕಠಿಣ ಸ್ಪರ್ಧೆಯ ನಡುವೆ ಕಾರ್ತಿಕ್ ಮಹೇಶ್ ಗೆಲುವು ಸಾಧಿಸಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 10 ಗೆದ್ದ ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್​ ರನ್ನರ್ ಅಪ್
Follow us
ಮಂಜುನಾಥ ಸಿ.
|

Updated on: Jan 29, 2024 | 12:09 AM

112 ದಿನಗಳ ಸುದೀರ್ಘ ಪಯಣ ಇಂದು ಅಂತ್ಯವಾಗಿದೆ. ಬಿಗ್​ಬಾಸ್ (BiggBoss) ಗೆಲ್ಲಲು 16 ಮಂದಿಯಿಂದ ಪ್ರಾರಂಭವಾದ ಓಟದಲ್ಲಿ ಕೊನೆಯದಾಗಿ ಗೆಲುವು ಕಂಡಿರುವುದು ಕಾರ್ತಿಕ್ ಮಹೇಶ್. ಕೊನೆಯ ಕ್ಷಣದಲ್ಲಿ ಬಿಗ್​ಬಾಸ್​ ಮನೆಗೆ ಬರಲು ತೆಗೆದುಕೊಂಡ ನಿರ್ಣಯ ಅವರ ಕೈಹಿಡಿದಿದೆ. ಹಲವು ಏಳು-ಬೀಳುಗಳಿದ್ದ ಪಯಣದಲ್ಲಿ ಕಾರ್ತಿಕ್ ಮಹೇಶ್ ಗಮ್ಯ ತಲುಪಿದ್ದಾರೆ. ಅವರಿಗೆ ಬರೋಬ್ಬರಿ 2,97,39,904 ಮತ ಗಳಿಸಿದ್ದಾರೆ. ಹಲವು ಏಳು-ಬೀಳು, ನೋವು, ಬೇಸರ, ಖುಷಿಗಳನ್ನು ಸಹ ಕಂಡಿದ್ದ ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ.

ಸ್ವತಃ ಕಾರ್ತಿಕ್ ಮಹೇಶ್ ಹೇಳಿಕೊಂಡಿರುವಂತೆ ಬಿಗ್​ಬಾಸ್​ಗೆ ಬರುವ ನಿರ್ಧಾರವನ್ನು ಒಂದೇ ದಿನದಲ್ಲಿ ತೆಗೆದುಕೊಂಡು ಅವರು ಬಿಗ್​ಬಾಸ್​ಗೆ ಬಂದರಂತೆ. ಆ ಆತುರದ ನಿರ್ಧಾರ ಅವರಿಗೆ ಗೆಲುವು ತಂದುಕೊಟ್ಟಿದೆ. ಆರನೇ ಕಂಟೆಸ್ಟೆಂಟ್ ಆಗಿ ಕಷ್ಟದಲ್ಲೇ ಕಾರ್ತಿಕ್ ಮಹೇಶ್ ಫಿನಾಲೆ ವಾರಕ್ಕೆ ಬಂದಿದ್ದರು. ಫಿನಾಲೆ ವಾರದಲ್ಲಿ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಎಂದಾಗ ಬಹುತೇಕರು ಹೇಳಿದ್ದಿದ್ದು ಕಾರ್ತಿಕ್ ಹೆಸರನ್ನು ಆದರೆ ಅದೆಲ್ಲವೂ ಸುಳ್ಳಾಗಿದೆ.

ಕಾರ್ತಿಕ್​ರ ಬಿಗ್​ಬಾಸ್ ಜರ್ನಿ ಹಲವು ಏರು-ಪೇರುಗಳನ್ನು ಒಳಗೊಂಡಿತ್ತು. ಆರಂಭದಲ್ಲಿ ಅವರು ಅಸಮರ್ಥರಾಗಿ ಮನೆಗೆ ಎಂಟ್ರಿ ಕೊಟ್ಟರು. ಆರಂಭದಲ್ಲಿ ಸಂಗೀತಾ ಜೊತೆ ಗೆಳೆತನ ಮಾಡಿ ಬೆನ್ನೆಲುಬಾಗಿದ್ದರು. ಸಂಗೀತಾ ಹಾಗೂ ಕಾರ್ತಿಕ್ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಜೊತೆಗೆ ತನಿಷಾ ಸಹ ಕಾರ್ತಿಕ್​ಗೆ ಒಳ್ಳೆಯ ಗೆಳೆಯರಾಗಿದ್ದರು. ಆರಂಭದ ಹಲವು ದಿನ ಮನೆಯ ಗಟ್ಟಿ ಸ್ಪರ್ಧಿಯಾಗಿದ್ದ ವಿನಯ್​ಗೆ ಪ್ರಬಲ ಎದುರಾಳಿಯಾಗಿ ಆಡಿದ್ದರು ಕಾರ್ತಿಕ್. ವಿನಯ್ ‘ಗ್ಯಾಂಗ್’ ಅನ್ನು ಸಂಗೀತಾ ಪ್ರಬಲವಾಗಿ ಎದುರಿಸಲು ಕಾರ್ತಿಕ್ ಸಹ ಕಾರಣವಾಗಿದ್ದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ರಾಜನಾದ ತುಕಾಲಿ, ಪ್ರತಾಪ್ ಖುಷಿಗೆ ಪಾರವೇ ಇಲ್ಲ

ಆದರೆ ಬರಬರುತ್ತಾ ಸಂಗೀತಾ ಕಾರ್ತಿಕ್​ರಿಂದ ದೂರಾದರು. ಕಾರ್ತಿಕ್ ವಿರುದ್ಧ ನಂಬಿಕೆ ದ್ರೋಹದ ಆರೋಪವೂ ಬಂತು. ಜೊತೆಗಿದ್ದ ತನಿಷಾ ಸಹ ದೂರಾದರು. ನಮ್ರತಾ ಜೊತೆ ಹತ್ತಿರವಾದರಾದರೂ ಅವರ ಸ್ನೇಹ ಸಂಬಂಧವೂ ಮುರಿದುಬಿತ್ತು. ಮನೆಯಲ್ಲಿ ಒಂಟಿಯಾಗಿದ್ದ ಕಾರ್ತಿಕ್ ಕೆಲ ವಾರ ತುಸು ಲೋ ಆಗಿದ್ದರು.

ಸುದೀಪ್ ಅವರು ಸಹ ಕಾರ್ತಿಕ್​ಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಅದಾದ ಬಳಿಕ ಆಟ ಸುಧಾರಿಸಿಕೊಂಡ ಕಾರ್ತಿಕ್ ಫಿನಾಲೆ ವಾರಕ್ಕೆ ಮುನ್ನ ಮತ್ತೆ ಚಿಗುರಿ ನಿಂತು ವಿನ್ನರ್ ಎನಿಸಿಕೊಂಡಿದ್ದಾರೆ. ತನ್ನ ತಾಯಿಗಾಗಿ ಒಂದು ಮನೆ ಕಟ್ಟಿಕೊಡಬೇಕು ಎಂಬ ಆಸೆಯನ್ನು ಕಾರ್ತಿಕ್ ಹೇಳಿಕೊಂಡಿದ್ದರು. ಅಂತೆಯೇ ಈಗ 50 ಲಕ್ಷ ಗೆದ್ದಿದ್ದಾರೆ. ಜೊತೆಗೆ ಒಂದು ಬ್ರಿಜಾ ಕಾರು ಸಹ ಗೆದ್ದಿದ್ದಾರೆ. ಆರಂಭದಿಂದಲೂ ಚೆನ್ನಾಗಿಯೇ ಆಡಿಕೊಂಡು ಬಂದಿದ್ದ ಡ್ರೋನ್ ಪ್ರತಾಪ್ ಎರಡನೇ ಸ್ಥಾನ ಪಡೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?