AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡ: ವಿನಯ್ ಎಲಿಮಿನೇಷನ್ ಫೇರ್​ ಅಲ್ಲ ಎಂದವರಿಗೆ ಕಿಚ್ಚ ಕೊಟ್ಟ ಉತ್ತರ ಏನು?

ನಮ್ರತಾ ಗೌಡ ಅವರು ಈ ಎಲಿಮಿನೇಷನ್ ಬಗ್ಗೆ ಮಾತನಾಡಿದರು. ‘ಅವರು ವಿನ್ನರ್ ಆಗಬೇಕಿತ್ತು. ಶಾಕಿಂಗ್ ಆಗಿತ್ತು. ಇದು ಫೇರ್ ಅಲ್ಲ’ ಎಂದಿದ್ದಾರೆ ಅವರು.

ಬಿಗ್ ಬಾಸ್ ಕನ್ನಡ: ವಿನಯ್ ಎಲಿಮಿನೇಷನ್ ಫೇರ್​ ಅಲ್ಲ ಎಂದವರಿಗೆ ಕಿಚ್ಚ ಕೊಟ್ಟ ಉತ್ತರ ಏನು?
ವಿನಯ್
ರಾಜೇಶ್ ದುಗ್ಗುಮನೆ
| Edited By: |

Updated on:Jan 29, 2024 | 9:45 AM

Share

ವಿನಯ್ ಗೌಡ ಅವರು ಬಿಗ್ ಬಾಸ್ (Bigg Boss) ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಅವರು ಮೂರನೇ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ. ಅವರ ಎಲಿಮಿನೇಷನ್ ಅನೇಕರಿಗೆ ಶಾಕ್ ತಂದಿದೆ. ನಮ್ರತಾ ಗೌಡ ಹಾಗೂ ತುಕಾಲಿ ಸಂತೋಷ್ ಮೊದಲಾದವರು ಶಾಕ್ ಆದರು. ‘ಇದು ಫೇರ್ ಅಲ್ಲ’ ಎಂದರು ನಮ್ರತಾ. ತುಕಾಲಿ ಸಂತೋಷ್ ಕೂಡ ಶಾಕ್ ಆದರು. ವಿನಯ್ ಗೌಡ ಅವರು ಖುಷಿಯಿಂದಲೇ ಇದನ್ನು ಸ್ವೀಕರಿಸಿದ್ದಾರೆ. ಅವರ ಪತ್ನಿ ಕಣ್ಣೀರು ಹಾಕಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಂಡಿದೆ.

ನಮ್ರತಾ ಗೌಡ ಅವರು ಈ ಎಲಿಮಿನೇಷನ್ ಬಗ್ಗೆ ಮಾತನಾಡಿದರು. ‘ಅವರು ವಿನ್ನರ್ ಆಗಬೇಕಿತ್ತು. ಶಾಕಿಂಗ್ ಆಗಿತ್ತು. ಇದು ಫೇರ್ ಅಲ್ಲ’ ಎಂದಿದ್ದಾರೆ ಅವರು. ‘ಕಪ್ಪು ಮುಖ್ಯ ಅಂತಿದ್ದ. ಇಷ್ಟು ಓವರ್ ಕಾನ್ಫಿಡೆನ್ಸ್ ಯಾಕೆ ಎಂದಿದ್ದೆ. ಆದರೆ, ಓವರ್ ಕಾನ್ಫಿಡೆನ್ಸ್ ಅಲ್ಲ ಎನ್ನುತ್ತಿದ್ದ. ಇದನ್ನು ಎಕ್ಸ್​ಪೆಕ್ಟ್ ಮಾಡೇ ಇರಲಿಲ್ಲ’ ಎಂದರು ತುಕಾಲಿ ಸಂತೋಷ್.

ಆ ಬಳಿಕ ಸುದೀಪ್ ಅವರು ವಿನಯ್ ಬಗ್ಗೆ ಮಾತನಾಡಿದರು. ‘ಅವರು ಕಾಂಟ್ರಿಬ್ಯೂಷನ್ ಇಲ್ಲದೆ ಸುಮಾರಷ್ಟು ನಡೆಯುತ್ತಾ ಇರಲಿಲ್ಲ. ವೋಟಿಂಗ್ ಫೇರ್ ಆಗೇ ನಡೆಯುತ್ತದೆ. ಅದು ನಮ್ಮ ಕೈಲಿ ಇರುವುದಿಲ್ಲ. ನಾನು ಇಲ್ಲಿಗೆ ಬಂದ ಬಳಿಕವೇ ಎಲಿಮಿನೇಷನ್ ಬಗ್ಗೆ ಕೇಳುತ್ತೇನೆ. ನನಗೆ ಶಾಕಿಂಗ್ ಆದ ಅನೇಕ ಎಲಿಮಿನೇಷನ್ ಇದೆ’ ಎಂದರು ಕಿಚ್ಚ ಸುದೀಪ್.

ಇದನ್ನೂ ಓದಿ: Vinay Gowda: ಬಿಗ್ ಬಾಸ್ ಮನೆಯಿಂದ ವಿನಯ್ ಗೌಡ ಔಟ್​; ಎಲ್ಲರಿಗೂ ಶಾಕ್​..

ಎಲಿಮಿನೇಟ್ ಆಗಿ ಹೊರ ಬಂದ ಬಳಿಕ ವಿನಯ್ ಮಾತನಾಡಿದ್ದಾರೆ. ‘ಶಾಕ್ ಆಯ್ತು. ಎಲ್ಲದೂ ವೋಟಿಂಗ್ ಮೇಲೆ ಅನ್ನೋದು ಗೊತ್ತಿದೆ. ನಾನು ಪೀಪಲ್ಸ್ ಚಾಂಪಿಯನ್. ತುಂಬಾ ಪ್ರೀತಿ ಕೊಟ್ಟಿದ್ದಾರೆ. ಇವರು ಇರ್ತಾ ಇರಲಿಲ್ಲ ಎಂದರೆ ನಾನು ಇಲ್ಲಿಯವರೆಗೆ ಬರ್ತಾ ಇರಲಿಲ್ಲ. ಎಲ್ಲರೂ ಮಹದೇವ ಎಂದು ಕರೆಯುತ್ತಿದ್ದರು. ಈ ಶೋ ಮುಗಿದ ಮೇಲೆ ವಿನಯ್ ಎಂದು ಕರೆಯುತ್ತಾರೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ ವಿನಯ್ ಗೌಡ. ‘ನಂದೇನೂ ಕ್ಯಾರೆಕ್ಟರ್ ಎಲ್ಲರಿಗೂ ಇಷ್ಟ ಆಗಲ್ಲ. ಹೆದರಿಕೆ ಆಗುತ್ತದೆ. ನನ್ನನ್ನು ನಂಬಿದವರಿಗೆ ಕೊನೆಯವರೆಗೂ ಜೀವ ಕೊಡ್ತೀನಿ’ ಎಂದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:20 pm, Sun, 28 January 24

ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!