Vinay Gowda: ಬಿಗ್ ಬಾಸ್ ಮನೆಯಿಂದ ವಿನಯ್ ಗೌಡ ಔಟ್​; ಎಲ್ಲರಿಗೂ ಶಾಕ್​..

ಬಿಗ್ ಬಾಸ್ ಕನ್ನಡ: ಟಾಪ್​ ಆರರ ಪೈಕಿ ತುಕಾಲಿ ಸಂತೋಷ್ ಅವರು ಬಿಗ್ ಬಾಸ್​ನಿಂದ ಮೊದಲು ಔಟ್ ಆದರು. ಆ ಬಳಿಕ ಔಟ್ ಆಗಿದ್ದು ವರ್ತೂರು ಸಂತೋಷ್. ಈಗ ವಿನಯ್ ಗೌಡ ಹೊರ ಬಂದರು. ವಿನಯ್ ಅವರಿಗೆ ಈ ವಿಚಾರ ಕೇಳಿ ನಿಜಕ್ಕೂ ಶಾಕ್ ಆಗಿದೆ.

Vinay Gowda: ಬಿಗ್ ಬಾಸ್ ಮನೆಯಿಂದ ವಿನಯ್ ಗೌಡ ಔಟ್​; ಎಲ್ಲರಿಗೂ ಶಾಕ್​..
Follow us
 ಶ್ರೀಲಕ್ಷ್ಮೀ ಎಚ್
| Updated By: Digi Tech Desk

Updated on:Jan 29, 2024 | 9:45 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಕಪ್ ಗೆಲ್ಲಬೇಕು ಎನ್ನುವ ಕನಸು ಕಂಡು ದೊಡ್ಮನೆಗೆ ಹೋದವರು ವಿನಯ್ ಗೌಡ. ಆದರೆ, ಅವರ ಕನಸು ನನಸಾಗಲೇ ಇಲ್ಲ. ಟಾಪ್​ ಆರರ ಪೈಕಿ ಮೂರನೇ ವ್ಯಕ್ತಿ ಆಗಿ ಅವರು ಎಲಿಮಿನೇಟ್ ಆಗಿದ್ದಾರೆ. ಇದು ವಿನಯ್ ಗೌಡ ಅವರಿಗೆ ಶಾಕಿಂಗ್ ಆಗಿತ್ತು. ಅವರು ಹೊರ ಹೋಗಿದ್ದರಿಂದ ಅವರ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಟಾಪ್ ಎರಡರಲ್ಲಿ ಅವರು ಇರಬಹುದು ಎನ್ನುವ ಊಹೆ ತಪ್ಪಾಗಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್  ಫಿನಾಲೆ (Bigg Boss Finale) ಎಪಿಸೋಡ್ ಪ್ರಸಾರ ಕಾಣುತ್ತಿದೆ.

ಟಾಪ್​ ಆರರ ಪೈಕಿ ತುಕಾಲಿ ಸಂತೋಷ್ ಅವರು ಬಿಗ್ ಬಾಸ್​ನಿಂದ ಮೊದಲು ಔಟ್ ಆದರು. ಆ ಬಳಿಕ ಔಟ್ ಆಗಿದ್ದು ವರ್ತೂರು ಸಂತೋಷ್. ಮೂರನೇ ರನ್ನರ್​ಅಪ್ ಆಗಿ ವಿನಯ್ ಗೌಡ ಹೊರ ಬಂದರು. ವಿನಯ್ ಅವರಿಗೆ ಈ ವಿಚಾರ ಕೇಳಿ ನಿಜಕ್ಕೂ ಶಾಕ್ ಆಗಿದೆ. ‘ನಾವೇ ಟಾಪ್​ನಲ್ಲಿ ಬರೋದು’ ಎಂದು ವಿನಯ್ ಗೌಡ ಆ್ಯಂಡ್ ಟೀಂ ಹೇಳಿತ್ತು. ಈಗ ಅವರ ಟೀಂನ ಎಲ್ಲರೂ ಔಟ್ ಆದಂತೆ ಆಗಿದೆ.

ವಿನಯ್ ಗೌಡ ಆರಂಭದಲ್ಲಿ ಸ್ಟ್ರಾಂಗ್ ಆಗಿ ಕಾಣಿಸಿಕೊಂಡಿದ್ದರು. ಅವರೇ ಕಪ್ ಗೆಲ್ಲಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಲೇ ಇಲ್ಲ. ಅವರು ಮೊದಲಿನಷ್ಟು ಅಗ್ರೆಸ್​ ಆಗಿ ಕಾಣಿಸಿಕೊಂಡಿರಲಿಲ್ಲ. ಪ್ರತಾಪ್ ಸೇರಿ ಅನೇಕರ ಜೊತೆ ಅವರು ಜಗಳ ಆಡಿ ಮೈಲೇಜ್ ಕಳೆದುಕೊಂಡಿದ್ದಾರೆ. ಇದೆಲ್ಲ ಅವರ ಗೇಮ್​ ಮೇಲೆ ಪ್ರಭಾವ ಬೀರಿದೆ. ಅವರು ಅಂದುಕೊಂಡಷ್ಟು ವೋಟ್ ಪಡೆಯಲು ಸಾಧ್ಯವಾಗಲೇ ಇಲ್ಲ.

ವಿನಯ್ ಗೌಡ ಅವರಿಗೆ ಅನೇಕ ಸೆಲೆಬ್ರಿಟಿಗಳು ಈ ಬಾರಿ ಬೆಂಬಲ ಸೂಚಿಸಿದ್ದರು. ವೋಟ್ ಮಾಡುವಂತೆ ಅವರು ಕೋರಿಕೊಂಡಿದ್ದರು. ಆದರೆ, ಅವರಿಗೆ ಅಂದುಕೊಂಡಷ್ಟು ವೋಟ್ ಬೀಳಲೇ ಇಲ್ಲ. ಹೀಗಾಗಿ ಅವರು ಹೊರ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ.

ವಿನಯ್ ಗೌಡ ಅವರ ನಡುವಳಿಕೆ ಅನೇಕರಿಗೆ ಇಷ್ಟ ಆಗಿಲ್ಲ. ಕೊನೆಯ ವಾರದಲ್ಲೂ ಅವರು ಜಗಳ ಮಾಡಿದ್ದಾರೆ. ಆರಂಭದಲ್ಲಿ ಗ್ರೂಪಿಸಂ ಮಾಡುತ್ತಿದ್ದರು. ಅವರ ಗುಂಪಿನ ಒಬ್ಬೊಬ್ಬರಾಗಿಯೇ ಔಟ್ ಆಗುತ್ತಾ ಬಂದರು. ಕೊನೆಯಲ್ಲಿ ಅವರೇ ಮನೆಯಿಂದ ಹೊರ ಹೋಗಿದ್ದಾರೆ. ವಿನಯ್ ಅವರು ದೊಡ್ಮನೆಯಲ್ಲಿ ವಿಲನ್ ರೀತಿ ಕಾಣಿಸಿಕೊಂಡಿದ್ದೇ ಹೆಚ್ಚು. ಹೀಗಾಗಿ, ಮುಂದಿನ ದಿನಗಳಲ್ಲಿ ಸಿನಿಮಾದಿಂದ ಅವರಿಗೆ ವಿಲನ್ ಪಾತ್ರ ಸಿಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಪತ್ನಿ ಬಿಗ್ ಬಾಸ್​ ಮನೆಯಲ್ಲಿದ್ದಾರೆಂದು ಬೇರೆ ನಟಿಯರ ಜೊತೆ ಪಾರ್ಟಿ ಮಾಡಿದ ವಿಕ್ಕಿ

ಬಿಗ್ ಬಾಸ್ ಫಿನಾಲೆಯಲ್ಲಿ ವಿನಯ್ ಗೌಡ, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಟಾಪ್ ಆರರಲ್ಲಿ ಇದ್ದರು. ಈ ಪೈಕಿ ಈಗ ಮೂವರು  ಔಟ್ ಆಗಿದ್ದಾರೆ. ಉಳಿದ ಮೂವರಲ್ಲಿ ಒಬ್ಬರು ಕಪ್ ಗೆಲ್ಲಲಿದ್ದಾರೆ. ಇಂದು (ಜನವರಿ 28) ರಾತ್ರಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ವಿಚಾರ ರಿವೀಲ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:47 pm, Sun, 28 January 24

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್