ಬಿಗ್ ಬಾಸ್ ಕನ್ನಡ: ಕಪ್ ಎತ್ತಬೇಕು ಎನ್ನುವ ಸಂಗೀತಾ ಶೃಂಗೇರಿ ಕನಸು ಭಗ್ನ; ಎರಡನೇ ರನ್ನರ್​ಅಪ್ ಆದ ನಟಿ

ಸಂಗೀತಾ ಅವರು ಇತ್ತೀಚಿನ ದಿನಗಳಲ್ಲಿಸಾಕಷ್ಟು ಟಾಸ್ಕ್​ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಬ್ಯಾಕ್ ಟು ಬ್ಯಾಕ್ 2 ಬಾರಿ ಕ್ಯಾಪ್ಟನ್ ಆದರು. ಅವರಿಗೆ ಫಿನಾಲೆ ಟಿಕೆಟ್ ಕೂಡ ಸಿಕ್ಕಿತ್ತು. ಆದಾಗ್ಯೂ ಅವರಿಗೆ ಕಪ್ ಗೆಲ್ಲೋಕೆ ಸಾಧ್ಯವಾಗೇ ಇಲ್ಲ.

ಬಿಗ್ ಬಾಸ್ ಕನ್ನಡ: ಕಪ್ ಎತ್ತಬೇಕು ಎನ್ನುವ ಸಂಗೀತಾ ಶೃಂಗೇರಿ ಕನಸು ಭಗ್ನ; ಎರಡನೇ ರನ್ನರ್​ಅಪ್ ಆದ ನಟಿ
ಸಂಗೀತಾ
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Jan 29, 2024 | 9:45 AM

ಸಂಗೀತಾ ಶೃಂಗೇರಿ (Sangeetha Sringeri) ಈ ಬಾರಿ ಸ್ಟ್ರಾಂಗ್ ಮಹಿಳಾ ಸ್ಪರ್ಧಿ ಆಗಿ ಕಾಣಿಸಿಕೊಂಡಿದ್ದರು. ಈ ಬಿಗ್ ಬಾಸ್ ಕನ್ನಡ ಸೀಸನ್​ನ ಗೆಲ್ಲಲೇಬೇಕು ಎಂದು ಅವರು ಕನಸು ಕಂಡಿದ್ದರು. ಆದರೆ, ಕನಸು ಭಗ್ನವಾಗಿದೆ. ಎರಡನೇ ರನ್ನರ್​ಅಪ್ ಸ್ಥಾನಕ್ಕೆ ಸಂಗೀತಾ ಶೃಂಗೇರಿ ಖುಷಿಪಟ್ಟಿದ್ದಾರೆ. ಈ ಮೂಲಕ ಸಾಲಿನಲ್ಲಿ ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್ ಮಾತ್ರ ಉಳಿದುಕೊಂಡಿದ್ದಾರೆ. ಇವರ ಪೈಕಿ ಒಬ್ಬರ ಬಿಗ್ ಬಾಸ್ ಕನ್ನಡ ಮನೆಯ ಬಾಗಿಲನ್ನು ಅದೃಷ್ಟಲಕ್ಷ್ಮಿ ತಟ್ಟಲಿದ್ದಾಳೆ. ಸಂಗೀತಾ ಶೃಂಗೇರಿ ಕಪ್ ಗೆಲ್ಲದೆ ಇರುವುದು ಅವರ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

ಸಂಗೀತಾ ಶೃಂಗೇರಿ ಅವರು ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿ ಫೇಮಸ್ ಆದರು. ‘ಎಷ್ಟೇ ಕೋಟಿ ರೂಪಾಯಿ ಕೊಟ್ಟರೂ ನಾನು ದೊಡ್ಮನೆಗೆ ಬರಲ್ಲ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದರು. ಆದಾಗ್ಯೂ ಅವರು ಬಿಗ್ ಬಾಸ್​ಗೆ ಬಂದರು. ಅವರು ಆರಂಭದಲ್ಲಿ ಅಸಮರ್ಥರಾಗಿ ಬಿಗ್ ಬಾಸ್ ಮನೆ ಸೇರಿದ್ದರು. ತಮ್ಮ ತನವನ್ನು ಪ್ರೂವ್ ಮಾಡಿಕೊಂಡು ಭೇಷ್ ಎನಿಸಿಕೊಂಡರು ಅವರು.

ಸಂಗೀತಾ ಶೃಂಗೇರಿ ಅವರು ತಮ್ಮ ಜರ್ನಿಯಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ. ಆರಂಭದಲ್ಲಿ ಕಾರ್ತಿಕ್ ಮಹೇಶ್ ಜೊತೆ ಅವರಿಗೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಆದರೆ, ವೈಮನಸ್ಸು ಮೂಡಿದ್ದರಿಂದ ಕಾರ್ತಿಕ್​ನಿಂದ ಸಂಗೀತಾ ದೂರ ಆದರು. ಆ ಬಳಿಕ ವಿನಯ್ ಜೊತೆ ಫ್ರೆಂಡ್​ಶಿಪ್ ಬೆಳೆಯಿತು. ಈ ಫ್ರೆಂಡ್​ಶಿಪ್ ಕೂಡ ಹೆಚ್ಚು ದಿನ ಬರಲೇ ಇಲ್ಲ. ನಂತರ ಸಂಗೀತಾ ಶೃಂಗೇರಿ ಒಂಟಿಯಾಗಿ ಗೇಮ್ ಆಡೋಕೆ ಶುರು ಮಾಡಿದರು.

ಇದನ್ನೂ ಓದಿ: ವಿನಯ್ ಎಲಿಮಿನೇಷನ್ ಫೇರ್​ ಅಲ್ಲ ಎಂದವರಿಗೆ ಕಿಚ್ಚ ಕೊಟ್ಟ ಉತ್ತರ ಏನು?

ಇತ್ತೀಚಿನ ದಿನಗಳಲ್ಲಿ ಸಂಗೀತಾ ಅವರು ಸಾಕಷ್ಟು ಟಾಸ್ಕ್​ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಬ್ಯಾಕ್ ಟು ಬ್ಯಾಕ್ ಎರಡು ಬಾರಿ ಕ್ಯಾಪ್ಟನ್ ಆದರು. ಅವರಿಗೆ ಫಿನಾಲೆ ಟಿಕೆಟ್ ಕೂಡ ಸಿಕ್ಕಿತ್ತು. ಆದಾಗ್ಯೂ ಅವರಿಗೆ ಕಪ್ ಗೆಲ್ಲೋಕೆ ಸಾಧ್ಯವಾಗೇ ಇಲ್ಲ. ಅವರು ಹೊರ ಬಂದಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:37 pm, Sun, 28 January 24

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ