ಬಿಗ್ ಬಾಸ್ ಕನ್ನಡ: ಹೆಂಡತಿಯನ್ನು ‘ಅಣ್ಣ’ ಅಂದ್ರಂತೆ ತುಕಾಲಿ ಸಂತು: ಯಾಕೆ?

Bigg Boss Kannada: ಎಲಿಮಿನೇಟ್ ಆಗಿ ಹೊರಬಂದ ಬಳಿಕ ತನ್ನ ಹೆಂಡತಿಯನ್ನು ‘ಅಣ್ಣ’ ಎಂದೇ ಕರೆಯುತ್ತಿದ್ದಾರಂತೆ ಕಾರಣವೇನು?

ಬಿಗ್ ಬಾಸ್ ಕನ್ನಡ: ಹೆಂಡತಿಯನ್ನು ‘ಅಣ್ಣ’ ಅಂದ್ರಂತೆ ತುಕಾಲಿ ಸಂತು: ಯಾಕೆ?
Follow us
ಮಂಜುನಾಥ ಸಿ.
| Updated By: Digi Tech Desk

Updated on:Jan 29, 2024 | 9:45 AM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರಿಂದ ತುಕಾಲಿ ಸಂತೋಷ್ ಫಿನಾಲೆ ಶನಿವಾರವೇ ಎಲಿಮಿನೇಟ್ ಆಗಿದ್ದಾರೆ. ಹೋಗುವಾಗ ತಮ್ಮ ಆತ್ಮೀಯ ಗೆಳೆಯ ವರ್ತೂರು ಸಂತೋಷ್ ಅವರನ್ನು ಗೆದ್ದು ಬಾ ಎಂದಿದ್ದಾರೆ. ಆದರೆ ಅವರ ಹಾರೈಕೆ ಪಲಿಸಲಿಲ್ಲ. ತುಕಾಲಿ ಸಂತು ಹೋದ ಬೆನ್ನಲ್ಲೆ ಭಾನುವಾರದ ಎಪಿಸೋಡ್​ನಲ್ಲಿ ತುಕಾಲಿ ಸಂತು ಅವರು ಮೊದಲಿಗೆ ಎಲಿಮಿನೇಟ್ ಆಗಿದ್ದಾರೆ. ಖುಷಿಯಿಂದಲೇ ಹೊರಗೆ ಬಂದ ವರ್ತೂರು, ಸುದೀಪ್ ಜೊತೆ ವೇದಿಕೆಗೆ ಬರುತ್ತಲೇ ಗೆಳೆಯ ತುಕಾಲಿ ಸಂತು ಅವರನ್ನು ಎದುರುಗೊಂಡರು. ಇಬ್ಬರೂ ಗೆಳೆಯರಿಗೆ ಸುದೀಪ್ ಅವರು ಕೆಲ ಕಾಲ ವೇದಿಕೆಯನ್ನೇ ಬಿಟ್ಟುಕೊಟ್ಟರು.

ವರ್ತೂರು ಹೊರಗೆ ಬಂದ ಕೂಡಲೇ ತುಕಾಲಿಯನ್ನುದ್ದೇಶಿಸಿ, ‘ನೀನು ಬಾ ಅಂದೆ ನೋಡು ಬಂದೇ ಬಿಟ್ಟೆ’ ಎಂದರು. ತುಕಾಲಿ ಸಂತು ತುಸು ಭಾವುಕರಾದರೂ ಕೂಡಲೇ ಸಾವರಿಸಿಕೊಂಡು, ‘ಇಬ್ರೂ ಗೆದ್ದಿದ್ದೀವಿ ಬಿಡಣ್ಣ’ ಎಂದರು. ಮುಂದುವರೆದು, ‘ಹೊರಗೆ ಬಂದಾಗಿನಿಂದಲೂ ನನ್ನ ಹೆಂಡತಿಯನ್ನು ಸುಮಾರು ಬಾರಿ, ‘ಅಲ್ವಾ ಅಣ್ಣ’, ‘ಅಲ್ವಾ ಅಣ್ಣ’ ಅಂದಿದ್ದೀನಿ ಎಂದರು ತುಕಾಲಿ. ಅದಕ್ಕೆ ವರ್ತೂರು, ‘ನೋಡು ನೀನಿಲ್ಲದೆ ಒಂದು ರಾತ್ರಿ ಸಹ ನನಗೆ ಇರಲಾಗಲಿಲ್ಲ’ ಎಂದರು. ಅದಾದ ಬಳಿಕ ಸುದೀಪ್ ಅವರು ತುಕಾಲಿ ಸಂತುವನ್ನೂ ವೇದಿಕೆಗೆ ಕರೆಸಿ ಇಬ್ಬರಿಗೂ ಒಂದೊಂದು ಬೀನ್ ಬ್ಯಾಗ್ ಕೊಟ್ಟು ತಾವು ವೇದಿಕೆ ಇಳಿದು ಹೊರಟರು.

ಇಬ್ಬರೂ ಬೀನ್ ಬ್ಯಾಗ್​ ಮೇಲೆ ಕುಳಿತುಕೊಂಡು ಮತ್ತೆ ಮಾತನಾಡಲು ಆರಂಭಿಸಿದರು. ‘ಅಲ್ಲಣ್ಣ, ನಾನು ಹೇಳಿದ್ದಕ್ಕೆಲ್ಲ, ಹೌದು, ಹೂ ಅಂದುಕೊಂಡು ನನ್ನೊಬ್ಬನನ್ನೇ ವಿಲನ್ ಮಾಡಿಬೆಟ್ಟೆಯಲ್ಲ’ ಎಂದು ತುಕಾಲಿ ಕೇಳಿದರೆ, ‘ನಾನೇನೂ ಮಾತನಾಡೇ ಇಲ್ಲಪ್ಪ, ಎಲ್ಲ ನೀನೇ ಮಾತನಾಡಿದ್ದು’ ಎಂದರು. ಬಳಿಕ, ತುಕಾಲಿ, ‘ಏನಣ್ಣ, ಇಬ್ಬರೂ ಗೆಲ್ಲಲಿಲ್ಲ, ನನಗೆ ಎರಡು ಲಕ್ಷ, ನಿನಗೆ ಎರಡು ಲಕ್ಷ ಅಷ್ಟೇ ಸಿಕ್ಕಿದ್ದು. ನಾನು ಏನೇನೋ ಲೆಕ್ಕ ಹಾಕಿದ್ದೆ’ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ರಾಜನಾದ ತುಕಾಲಿ, ಪ್ರತಾಪ್ ಖುಷಿಗೆ ಪಾರವೇ ಇಲ್ಲ

ಇಬ್ಬರೂ ಮಾತು ಮುಂದುವರೆಸಿ, ‘ಅಣ್ಣ, ನಾವು ಎಲ್ಲರ ಬಗ್ಗೆ ಮಾತನಾಡಿದ್ದೀವಿ, ಆದರೆ ಒಬ್ಬರ ಬಗ್ಗೆ ಮಾತನಾಡಿಲ್ಲ’ ಎಂದರು ತುಕಾಲಿ. ಯಾರೆಂದು ವರ್ತೂರು ಕೇಳಿದ್ದಕ್ಕೆ, ತುಕಾಲಿ, ‘ಸುದೀಪ್ ಅವರ ಬಗ್ಗೆ ಮಾತನಾಡಿಲ್ಲ. ಈಗ ಮಾತನಾಡೋಣ’ ಎಂದರು. ಆದರೆ ಹೊರಗೆ ಬಂದಿದ್ದ ಸ್ಪರ್ಧಿಗಳೆಲ್ಲ ಒಕ್ಕೂರಲಿನಿಂದ ‘ಬೇಡ’ ಎಂದು ಕಿರುಚಿದರು. ಆದರೆ ಸುದೀಪ್ ಮಾತ್ರ, ಪರವಾಗಿಲ್ಲ ಮಾತನಾಡಿ, ಏನೂ ಆಗಲ್ಲ’ ಎಂದು ಭರವಸೆ ಕೊಟ್ಟರು.

ಬಳಿಕ ತುಕಾಲಿ, ‘ಅಣ್ಣ, ಸುದೀಪಣ್ಣ ನಮ್ಮನ್ನು ಇಷ್ಟ ಪಡುತ್ತಾರೆ ಅಲ್ವ? ಎಂದರು’ ಅದಕ್ಕೆ ಹೌದೆಂದ ವರ್ತೂರು, ‘ನಿನ್ನನ್ನು ವಾಕ್​ಗೆ ಬೇರೆ ಕರೆದುಕೊಂಡು ಹೋಗ್ತೀನಿ ಅಂದಿದ್ದರಲ್ಲ’ ಎಂದು ತಮಾಷೆ ಮಾಡಿದರು. ‘ಅಣ್ಣನ ಮುಂದಿನ ಸಿನಿಮಾದಲ್ಲಿ ನನಗೆ ಒಂದು ಚಾನ್ಸ್ ಕೊಟ್ಟರೆ ಚೆನ್ನಾಗಿರುತ್ತೆ ಅಲ್ವಾ’ ಎಂದು ತುಕಾಲಿ ಹೇಳಿದರೆ, ಅದಕ್ಕೆ ವರ್ತೂರು ‘ಅಯ್ಯೋ ಬೇಡಣ್ಣ ಚೆನ್ನಾಗಿರಲ್ಲ’ ಎಂದುಬಿಟ್ಟರು. ಅದಕ್ಕೆ ತುಕಾಲಿ, ‘ಅಲ್ಲಣ್ಣ, ಏನೋ ನನ್ನ ಬೇಳೆ ಬೇಯಿಸಿಕೊಳ್ಳೋಣ ಅಂದುಕೊಂಡಿದ್ದೆ ಆದರೆ ಅದಕ್ಕೆ ಕಲ್ಲು ಹಾಕಿದೆ ನೀನು’ ಎಂದರು.

ಬಳಿಕ ವೇದಿಕೆ ಬಂದ ಸುದೀಪ್, ವರ್ತೂರು ಅವರಿಗೆ ಅವರ ವಿಟಿ ತೋರಿಸಿದರು. ಬಳಿಕ ಮಾತನಾಡಿದ ವರ್ತೂರು, ‘ಮಾರ್ಚ್ ತಿಂಗಳಲ್ಲಿ ಹಳ್ಳಿಕಾರ್ ಹೋರಿಯ ರೇಸ್ ಮಾಡಿಸುತ್ತೀನಿ, ಜಾತ್ರೆ ಇರುತ್ತದೆ. ನೀವು ಅತಿಥಿಯಾಗಿ ಬರಬೇಕು ಎಂಬುದು ನನ್ನ ಆಸೆ’ ಎಂದರು. ಅದಕ್ಕೆ ಸುದೀಪ್ ಸರಿ ಆ ಸಮಯದಲ್ಲಿ ಮಾತನಾಡೋಣ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:27 pm, Sun, 28 January 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ