ಬಿಗ್ ಬಾಸ್ ಕನ್ನಡ: ‘ಸುಳ್ಳುಗಾರ’ನಾಗಿ ಒಳ ಹೋಗಿ, ‘ಮುಗ್ಧ’ನಾಗಿ ಹೊರಬಂದ ಡ್ರೋನ್ ಪ್ರತಾಪ್

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಆಗಿದ್ದಾರೆ ಡ್ರೋನ್ ಪ್ರತಾಪ್. ಹೊರಗೆ ಕಳೆದುಕೊಂಡಿದ್ದ ಹಲವನ್ನು ಮನೆಯ ಒಳಗೆ ಗಳಿಸಿದ್ದಾರೆ ಪ್ರತಾಪ್.

ಬಿಗ್ ಬಾಸ್ ಕನ್ನಡ: ‘ಸುಳ್ಳುಗಾರ’ನಾಗಿ ಒಳ ಹೋಗಿ, ‘ಮುಗ್ಧ’ನಾಗಿ ಹೊರಬಂದ ಡ್ರೋನ್ ಪ್ರತಾಪ್
Follow us
ಮಂಜುನಾಥ ಸಿ.
| Updated By: Digi Tech Desk

Updated on:Jan 29, 2024 | 9:44 AM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಮುಗಿದಿದೆ. ಕಾರ್ತಿಕ್ ಮಹೇಶ್ (Karthik Mahesh) ಬಿಗ್​ಬಾಸ್ ವಿನ್ನರ್ ಆಗಿದ್ದು, ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ. ಅಸಮರ್ತನಾಗಿ ಒಳಗೆ ಹೋದ ಡ್ರೋನ್ ಪ್ರತಾಪ್ ಹೆಚ್ಚು ವಾರ ಉಳಿಯುವುದಿಲ್ಲ ಎನ್ನಲಾಗಿತ್ತು. ಆದರೆ ವಾರಗಳು ಕಳೆದಂತೆ ತಮ್ಮ ಆಟದಿಂದ ಹಾಗೂ ವ್ಯಕ್ತಿತ್ವದಿಂದ ಜನರ ಮನಸ್ಸು ಗೆದ್ದ ಡ್ರೋನ್ ಪ್ರತಾಪ್ ಇದೀಗ ಬಿಗ್​ಬಾಸ್​ನ ರನ್ನರ್ ಅಪ್ ಆಗಿದ್ದಾರೆ. ಒಳಗೆ ಹೋಗುವಾಗ ‘ಸುಳ್ಳುಗಾರ’ ಎನಿಸಿಕೊಂಡಿದ್ದ ಪ್ರತಾಪ್, ಹೊರಗೆ ಬಂದಾಗ ‘ಮುಗ್ಧ’ ವ್ಯಕ್ತಿತ್ವದ ಯುವಕ ಎನಿಸಿಕೊಂಡು ಬಂದಿದ್ದಾರೆ.

ಇತರೆ ಸ್ಪರ್ಧಿಗಳಿಗಿಂತಲೂ ಭಿನ್ನವಾದ ಮನಸ್ಥಿತಿಯಲ್ಲಿ ಡ್ರೋನ್ ಪ್ರತಾಪ್, ಬಿಗ್​ಬಾಸ್ ಮನೆಗೆ ಹೋಗಿದ್ದರು. ಪ್ರತಾಪ್​, ಬಿಗ್​ಬಾಸ್ ಮನೆಗೆ ಹೋಗುವ ಮುಂಚೆ ಹೊರಗೆ ವಿವಾದಿತ ವ್ಯಕ್ತಿಯಾಗಿದ್ದರು. ಮನೆಯಲ್ಲಿ ಇನ್ಯಾರ ಬೆನ್ನಿಗೂ ವಿವಾದಗಳಿರಲಿಲ್ಲ. ಆದರೆ ಹೊರಗೆ ಹೋಗಿದ್ದ ‘ಮಾನ’ವನ್ನು ತಮ್ಮ ವರ್ತನೆಯ ಮೂಲಕ, ಪಾಸಿಟಿವ್ ಆಟಿಟ್ಯೂಡ್ ಮೂಲಕ ಮನೆಯ ಒಳಗೆ ಸಂಪಾದನೆ ಮಾಡಿದರು.

ಮನೆಯ ಒಳಗೆ ಇದ್ದಾಗಲೂ ಸಹ ಆರಂಭದಲ್ಲಿ ಮನೆಯ ಸದಸ್ಯರಿಂದ ಸತತ ಟೀಕೆ, ವ್ಯಂಗ್ಯಗಳಿಗೆ ಪ್ರತಾಪ್ ಗುರಿಯಾದರು. ತಮ್ಮ ಮುಗ್ಧತೆ, ಸೌಮ್ಯ ಸ್ವಭಾವದಿಂದಾಗಿ ಹಲವರಿಗೆ ‘ಈಸಿ ಟರ್ಗೆಟ್’ ಆಗಿದ್ದರು ಪ್ರತಾಪ್. ಆದರೆ ಸುದೀಪ್ ಹೇಳಿದ ಸ್ಪೂರ್ತಿದಾಯಕ ಮಾತುಗಳನ್ನು ಬಳಸಿಕೊಂಡು ಮತ್ತೆ ಬೌನ್ಸ್ ಬ್ಯಾಕ್ ಮಾಡಿದರು. ತಂಡದ ಲೀಡರ್ ಆದರು. ಸುದೀಪ್ ಅವರಿಂದ ಕಿಚ್ಚನ ಚಪ್ಪಾಳೆ ಪಡೆದುಕೊಂಡರು. ತಮ್ಮನ್ನು ಗೇಲಿ ಮಾಡಿದವರಿಂದಲೇ ಉತ್ತಮ ಪಡೆದುಕೊಂಡರು. ಗೇಲಿ ಮಾಡಿದವರು ಭೇಷ್ ಎನ್ನುವಂತೆ ಆಟ ಆಡಿದರು. ಯೋಜನೆಗಳನ್ನು ಹಾಕಿದರು. ಒಟ್ಟಾರೆಯಾಗಿ ಅದ್ಭುತವಾಗಿ ಆಡಿ ದೊಡ್ಡ ಸ್ಪರ್ಧಿಗಳನ್ನೇ ಎದುರು ಹಾಕಿಕೊಂಡು ಫಿನಾಲೆಗೆ ಬಂದು ತಲುಪಿದರು.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ ಸೀಸನ್ 10 ಗೆದ್ದ ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್​ ರನ್ನರ್ ಅಪ್

ಹೊರಗೆ ತಾವು ಮಾಡಿದ ತಪ್ಪಿಗೆ ಹಲವು ಬಾರಿ ಕ್ಷಮೆ ಸಹ ಕೇಳಿದರು. ಕುಟುಂಬದಿಂದ ದೂರವಿದ್ದ ನೋವು ಹಂಚಿಕೊಂಡರು. ಮಾತ್ರವಲ್ಲದೆ ಬಿಗ್​ಬಾಸ್ ಮನೆಯಲ್ಲಿಯೇ ಹಲವು ವರ್ಷಗಳ ಬಳಿಕ ತಮ್ಮ ತಂದೆ ಹಾಗೂ ತಾಯಿಯನ್ನು ಭೇಟಿ ಮಾಡಿದರು. ಅದಾದ ಬಳಿಕ ಮತ್ತೆ ಜ್ಯೋತಿಷಿ ಹೇಳಿದ ಮಾತಿನಿಂದ ಮತ್ತೆ ಲೋ ಆದರಾದರೂ ಆ ಬಳಿಕ ಮತ್ತೆ ಉತ್ಸಾಹ ತುಂಬಿಕೊಂಡು, ವಿನಯ್ ಅಂಥಹವರನ್ನೇ ಎದುರು ಹಾಕಿಕೊಂಡರು, ಅವರ ತೀಕ್ಷ್ಣ ಮಾತುಗಳಿಗೆ ಅಷ್ಟೇ ತೀಕ್ಷ್ಣವಾದ ಉತ್ತರಗಳನ್ನು ಸಹ ನೀಡಿದರು.

ಪ್ರತಾಪ್ ಒಳಗೆ ಇದ್ದರೂ ಹೊರಗೆ ಆಗಾಗ್ಗೆ ಅವರ ಹೆಸರು ಕೇಳಿ ಬರುತ್ತಲೇ ಇತ್ತು. ಮನೆಯ ಒಳಗೆ ಪ್ರತಾಪ್ ಗೆಲ್ಲುವ ಸೂಚನೆ ಸಿಗುತ್ತಿದ್ದಂತೆ ಕೆಲವು ಹಳೆಯ ವಿವಾದಗಳು ಮತ್ತೆ ತಲೆ ಎತ್ತಿದವು. ಇದ್ಯಾವುದರ ಪರಿವೆಯೇ ಇಲ್ಲದೆ ತಮ್ಮ ಆಟ ಆಡುತ್ತಲೇ ಬಂದ ಡ್ರೋನ್ ಪ್ರತಾಪ್, ದೊಡ್ಡ ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ಗೆಲುವಿನ ಸಮೀಪಕ್ಕೆ ಬಂದರು. ಸಂಗೀತಾ, ಕಾರ್ತಿಕ್ ಜೊತೆಗೆ ಟಾಪ್ 3 ಆಗಿದ್ದ ಪ್ರತಾಪ್. ಕೊನೆಗೆ ಸಂಗೀತ ಹೊರ ಹೋದ ಬಳಿಕ ಕಾರ್ತಿಕ್ ಜೊತೆಗೆ ಟಾಪ್ 2 ಗೆ ಬಂದರು. ಅಂತಿಮವಾಗಿ ಅದೃಷ್ಟ ಕಾರ್ತಿಕ್ ಅವರದ್ದಾಯ್ತು. ಪ್ರತಾಪ್, ಬಿಗ್​ಬಾಸ್ ವಿನ್ನರ್ ಆಗಲಿಲ್ಲವಾದರೂ, ಹೊರಗೆ ಕಳೆದುಕೊಂಡಿದ್ದ ಹಲವನ್ನು ಪ್ರತಾಪ್ ಬಿಗ್​ಬಾಸ್ ಮನೆ ಒಳಗೆ ಗಳಿಸಿಕೊಂಡರು. ಅದರಲ್ಲಿ ಕಳೆದುಹೋಗಿದ್ದ ಜನರ ಪ್ರೀತಿ ಅವರಿಗೆ ಮತ್ತೆ ಧಕ್ಕಿತು. ಜೊತೆಗೆ 10 ಲಕ್ಷ ನಗದು ಹಣ ಹಾಗೂ ಒಂದು ಎಲೆಕ್ಟ್ರಿಕ್ ಬೈಕ್ ಸಹ ಅವರಿಗೆ ಉಡುಗೊರೆಯಾಗಿ ಸಿಕ್ಕಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:17 am, Mon, 29 January 24

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ