AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗೀತಾ ಜತೆ ಸ್ನೇಹ ಮುಂದುವರಿಯುತ್ತಾ? ನಿರ್ಧಾರ ತಿಳಿಸಿದ ಬಿಗ್​ ಬಾಸ್​ ವಿನ್ನರ್​ ಕಾರ್ತಿಕ್​

‘ಸ್ನೇಹವನ್ನು ಉಪಯೋಗಿಸಿಕೊಳ್ಳುವ ಉದ್ದೇಶ ನನಗೆ ಇಲ್ಲ. ಮುಖದಲ್ಲಿ ಒಂದು ನಗು ಮತ್ತು ನಾಲ್ಕು ಒಳ್ಳೆಯ ಮಾತು ಸಾಕು. ಯಾಕೆಂದರೆ, ಇರುವುದು ಒಂದು ವಾರ ಮಾತ್ರ ಅಂತ ನಾನು ಹೇಳಿದ್ದೆ. ಆದರೆ ಮರುದಿನ ತುಂಬ ಸಣ್ಣ ವಿಷಯಕ್ಕೆ ಮತ್ತೆ ಜಗಳ ಆಯಿತು. ಹಾಗಾಗಿ ಅದು ಹಂಗೆ ಇದ್ದರೇನೇ ಒಳ್ಳೆಯದು’ ಎಂದು ಕಾರ್ತಿಕ್​ ಮಹೇಶ್​ ಹೇಳಿದ್ದಾರೆ.

ಸಂಗೀತಾ ಜತೆ ಸ್ನೇಹ ಮುಂದುವರಿಯುತ್ತಾ? ನಿರ್ಧಾರ ತಿಳಿಸಿದ ಬಿಗ್​ ಬಾಸ್​ ವಿನ್ನರ್​ ಕಾರ್ತಿಕ್​
ಕಾರ್ತಿಕ್​ ಮಹೇಶ್​, ಸಂಗೀತಾ ಶೃಂಗೇರಿ
ಮದನ್​ ಕುಮಾರ್​
|

Updated on: Jan 29, 2024 | 6:30 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (BBK 10) ಶೋನಲ್ಲಿ ಅತಿ ಹೆಚ್ಚು ಚರ್ಚೆ ಆಗಿದ್ದು ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ (Karthik Mahesh) ಅವರ ವಿಷಯ. ಮೊದಲು ಸ್ನೇಹಿತರಾಗಿದ್ದ ಅವರು ನಂತರ ಬೇರೆ-ಬೇರೆ ಆದರು. ಹಲವು ಬಾರಿ ಈ ಸ್ನೇಹವನ್ನು ಮುಂದುವರಿಸಲು ಕಾರ್ತಿಕ್​ ಪ್ರಯತ್ನಿಸಿದರೂ ಕೂಡ ಅದಕ್ಕೆ ಸಂಗೀತಾ ಶೃಂಗೇರಿ (Sangeetha Sringeri) ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಲಿಲ್ಲ. ಈಗ ಬಿಗ್​ ಬಾಸ್​ ಆಟ ಅಂತ್ಯವಾಗಿದೆ. ಕಾರ್ತಿಕ್​ ಅವರು ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಸಂಗೀತಾ ಶೃಂಗೇರಿ ಅವರು ಎರಡನೇ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ಸಂಗೀತಾ ಜೊತೆ ಸ್ನೇಹ ಮುಂದುವರಿಸುವ ಕುರಿತು ತಮ್ಮ ನಿರ್ಧಾರ ಏನು ಎಂಬುದನ್ನು ಕಾರ್ತಿಕ್​ ಮಹೇಶ್​ ತಿಳಿಸಿದ್ದಾರೆ. ‘ಟಿವಿ9 ಕನ್ನಡ’ ನಡೆಸಿದ ಸಂದರ್ಶನದಲ್ಲಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್​ ಬಾಸ್​ ಗೆದ್ದ ಬಳಿಕ ಕಾರ್ತಿಕ್​ಗೆ ಸಂಗೀತಾ ಏನು ಹೇಳಿದರು ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇದೆ. ಆ ಪ್ರಶ್ನೆಗೆ ಕಾರ್ತಿಕ್​ ಮಹೇಶ್​ ಉತ್ತರಿಸಿದ್ದಾರೆ. ‘ಅವರು ಏನೂ ಹೇಳಲಿಲ್ಲ. ವಿಶ್​ ಮಾಡಿದರು ಅಷ್ಟೇ’ ಎಂದು ಕಾರ್ತಿಕ್​ ಹೇಳಿದ್ದಾರೆ. ‘ಸಂಗೀತಾ ಜೊತೆ ನಿಮ್ಮ ಸ್ನೇಹ ಮುಂದುವರಿಯುತ್ತಾ’ ಎಂದು ಕೇಳಿದ್ದಕ್ಕೆ ಕಾರ್ತಿಕ್​ ಅವರು ಮನದ ಮಾತನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಯಾರು ಗೆಲ್ಲಬೇಕು ಅನ್ನೋದು ಫಿಕ್ಸ್​ ಆಗಿತ್ತು’: ಬಿಗ್ ಬಾಸ್​ ಮೇಲೆ ದೊಡ್ಡ ಆರೋಪ

‘ನಾನು ಬಿಗ್​ ಬಾಸ್​ ಮನೆಯೊಳಗೆ ಇದ್ದಾಗಲೇ ಇದನ್ನು ಹೇಳಿದ್ದೆ. ಸ್ನೇಹಕ್ಕಾಗಿ ನಾನು ಈಗಲೂ ಸೋಲೋಕೆ ಸಿದ್ಧ ಎಂದು ಲೆಟರ್​ ಬರೆದು ಹೇಳಿದ್ದೆ. ನಿಮ್ಮ ಸ್ನೇಹವನ್ನು ಉಪಯೋಗಿಸಿಕೊಳ್ಳುವ ಉದ್ದೇಶ ನನಗೆ ಇಲ್ಲ. ಮುಖದಲ್ಲಿ ಒಂದು ನಗು ಮತ್ತು ನಾಲ್ಕು ಒಳ್ಳೆಯ ಮಾತು ಸಾಕು. ಯಾಕೆಂದರೆ, ಇರುವುದು ಒಂದು ವಾರ ಮಾತ್ರ ಅಂತ ನಾನು ಹೇಳಿದ್ದೆ. ಆದರೆ ಮರುದಿನ ತುಂಬ ಸಣ್ಣ ವಿಷಯಕ್ಕೆ ಮತ್ತೆ ಜಗಳ ಆಯಿತು. ಹಾಗಾಗಿ ಅದು ಹಂಗೆ ಇದ್ದರೇನೇ ಒಳ್ಳೆಯದು’ ಎಂದು ಕಾರ್ತಿಕ್​ ಮಹೇಶ್​ ಹೇಳಿದ್ದಾರೆ.

‘ನಾನು ಕಪ್​ ಹಿಡಿದುಕೊಂಡ ಬಂದಾಗ ಎಲ್ಲರೂ ಖುಷಿಪಟ್ಟರು. ವಿನಯ್​ ಔಟ್​ ಆಗಿದ್ದರೂ ಕೂಡ ಕಪ್​ ಹೊಡೆದುಕೊಂಡು ಬಾ ಅಂತ ನನಗೆ ಹೇಳಿದ್ದ. ಅದೆಲ್ಲ ಅವರ ಪ್ರೀತಿ. ತನಿಷಾ ಕೂಡ ಹೊರಗಡೆ ಹೋದ ನಂತರವೂ ಬೆಂಬಲ ನೀಡಿದರು. ಆಟಕ್ಕಾಗಿ ನಾನು ಅವಳನ್ನು ಬಿಟ್ಟುಕೊಟ್ಟರೂ ಅವಳು ನನ್ನನ್ನು ಬಿಟ್ಟುಕೊಡಲಿಲ್ಲ. ಅದಕ್ಕೆ ನಾನು ಅವಳಿಗೆ ಋಣಿ ಆಗಿರುತ್ತೇನೆ. ನನ್ನ ಗೆಲುವನ್ನು ಅವರ ಗೆಲುವು ಎಂಬ ರೀತಿಯಲ್ಲಿ ಖುಷಿಪಟ್ಟರು’ ಎಂದಿದ್ದಾರೆ ಕಾರ್ತಿಕ್​ ಮಹೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!