AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ಕ್ರಿಪ್ಟೆಡ್​ ಅಂತ ಜನ ಅಂದುಕೊಳ್ಳುವುದರಲ್ಲಿ ತಪ್ಪಿಲ್ಲ’: ಬಿಗ್​ ಬಾಸ್​ ಬಗ್ಗೆ ಸಂಗೀತಾ ಮಾತು

‘ಸ್ಕ್ರಿಪ್ಟೆಡ್​ ಅಂತ ಜನ ಅಂದುಕೊಳ್ಳುವುದರಲ್ಲಿ ತಪ್ಪಿಲ್ಲ’: ಬಿಗ್​ ಬಾಸ್​ ಬಗ್ಗೆ ಸಂಗೀತಾ ಮಾತು

ಮದನ್​ ಕುಮಾರ್​
|

Updated on: Jan 26, 2024 | 8:44 PM

Share

ಇಷ್ಟು ದಿನ ಬಿಗ್​ ಬಾಸ್​ ಮನೆಯಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ಕಾರ್ತಿಕ್​ ಮಹೇಶ್​ ಮೆಲುಕು ಹಾಕಿದ್ದಾರೆ. ‘ಜನರು ಸ್ಕ್ರಿಪ್ಟೆಡ್​ ಅಂತ ಅಂದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ. ‘ತುಂಬ ಕ್ಷಣಗಳು ಆ ರೀತಿ ಬಂದಿವೆ. ಇದೊಂದು ಬ್ಲಾಕ್​ ಬಸ್ಟರ್​ ಸಿನಿಮಾ ರೀತಿ ಇದೆ’ ಎಂದು ವಿನಯ್​ ಗೌಡ ಹೇಳಿದ್ದಾರೆ.

ನೂರಾರು ದಿನಗಳ ಕಾಲ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (BBK 10) ರಿಯಾಲಿಟಿ ಶೋ ಈಗ ಮುಕ್ತಾಯದ ಹಂತಕ್ಕೆ ಬಂದಿದೆ. ಜನವರಿ 27 ಮತ್ತು 28ರಂದು ಅದ್ದೂರಿಯಾಗಿ ಫಿನಾಲೆ ಕಾರ್ಯಕ್ರಮ ನಡೆಯಲಿದೆ. ಈಗ ಮನೆಯಲ್ಲಿ ಕಾರ್ತಿಕ್​ ಮಹೇಶ್​, ತುಕಾಲಿ ಸಂತೋಷ್​, ವರ್ತೂರು ಸಂತೋಷ್​, ಡ್ರೋನ್​ ಪ್ರತಾಪ್​, ವಿನಯ್​ ಗೌಡ ಹಾಗೂ ಸಂಗೀತಾ ಶೃಂಗೇರಿ ಫಿನಾಲೆ ತಲುಪಿದ್ದಾರೆ. ಕೊನೇ ದಿನ ದೊಡ್ಮನೆಯಲ್ಲಿ ಕುಳಿತು ಎಲ್ಲರೂ ನೆನಪಿನ ಪುಟ ತೆರೆದಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ಕಾರ್ತಿಕ್​ ಮಹೇಶ್​ (Karthik Mahesh) ಮೆಲುಕು ಹಾಕಿದ್ದಾರೆ. ‘ಜನರು ಸ್ಕ್ರಿಪ್ಟೆಡ್​ ಅಂತ ಅಂದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಹಾಗೆಯೇ ಬಂದಿದೆ ಈ ಶೋ’ ಎಂದು ಸಂಗೀತಾ ಶೃಂಗೇರಿ (Sangeetha Sringeri) ಹೇಳಿದ್ದಾರೆ. ‘ತುಂಬ ಕ್ಷಣಗಳು ಆ ರೀತಿ ಬಂದಿದೆ. ಇದೊಂದು ಬ್ಲಾಕ್​ ಬಸ್ಟರ್​ ಸಿನಿಮಾ ರೀತಿ ಇದೆ’ ಎಂದು ವಿನಯ್​ ಗೌಡ ಹೇಳಿದ್ದಾರೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಮತ್ತು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಬಿಗ್​ ಬಾಸ್​ ಶೋ ಪ್ರಸಾರ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More