‘ಡ್ರೋನ್​ ಪ್ರತಾಪ್​ ಒಳ್ಳೆಯ ಹುಡುಗ’: ಕೊನೇ ಕ್ಷಣದಲ್ಲಿ ಒಪ್ಪಿಕೊಂಡ ವಿನಯ್​ ಗೌಡ

‘ನಿನ್ನನ್ನು ನಾನು ಶತ್ರು ರೀತಿ ನೋಡಿಲ್ಲ. ನಿನ್ನ ಮೇಲೆ ನನಗೆ ದ್ವೇಷ ಇಲ್ಲ. ನಿನ್ನನ್ನು ಒಬ್ಬ ಚಿಕ್ಕ ಹುಡುಗನ ರೀತಿ ನೋಡಿದ್ದೇನೆ. ನಿನಗೆ ಮರ್ಯಾದೆ ಕೊಡಬಾರದು ಎಂಬ ಭಾವನೆ ದೇವರಾಣೆಗೂ ಇಲ್ಲ. ನೀನು ತುಂಬ ಒಳ್ಳೆಯ ಹುಡುಗ. ಕೋಪ ಬಂದಾಗ ಕಿರುಚಾಡಿದ್ದೇನೆ. ಆದರೂ ನನ್ನ ಮನಸ್ಸಿನಲ್ಲಿ ನಿನ್ನ ಬಗ್ಗೆ ಗೌರವ ಇದೆ’ ಎಂದು ವಿನಯ್​ ಗೌಡ ಹೇಳಿದರು.

‘ಡ್ರೋನ್​ ಪ್ರತಾಪ್​ ಒಳ್ಳೆಯ ಹುಡುಗ’: ಕೊನೇ ಕ್ಷಣದಲ್ಲಿ ಒಪ್ಪಿಕೊಂಡ ವಿನಯ್​ ಗೌಡ
ವಿನಯ್​ ಗೌಡ, ಡ್ರೋನ್​ ಪ್ರತಾಪ್​
Follow us
|

Updated on: Jan 26, 2024 | 7:19 PM

ಡ್ರೋನ್​ ಪ್ರತಾಪ್​ ಮತ್ತು ವಿನಯ್​ ಗೌಡ (Vinay Gowda) ಅವರ ನಡುವೆ ಆದ ಜಗಳಗಳು ಒಂದೆರಡಲ್ಲ. ಇಬ್ಬರೂ ಅನೇಕ ಬಾರಿ ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಆದರೆ ಈಗ ಡ್ರೋನ್​ ಪ್ರತಾಪ್​ ಅವರನ್ನು ವಿನಯ್​ ಗೌಡ ಹೊಗಳಿದ್ದಾರೆ. ಅದಕ್ಕೆ ಕಾರಣ ಆಗಿದ್ದು ಒಂದು ಘಟನೆ. ಇನ್ನೇನು ಡ್ರೋನ್​ ಪ್ರತಾಪ್​ (Drone Prathap) ಅವರು ಎಲಿಮಿನೇಟ್​ ಆಗುತ್ತಾರೆ ಎಂಬ ಸಂದರ್ಭ ಎದುರಾಯಿತು. ಆಗ ಅವರ ಬಗ್ಗೆ ವಿನಯ್​ ಗೌಡ ಅಭಿಪ್ರಾಯ ತಿಳಿಸಿದರು. ನಂತರ ಫೋಟೋಗಳು ತುಂಬಿರುವ ಬಿಗ್​ ಬಾಸ್​ (BBK 10) ಮನೆಯ ನೆನಪಿನ ಗೋಡೆಯನ್ನು ನೋಡಿಕೊಂಡು ಮನದ ಮಾತುಗಳನ್ನು ಹಂಚಿಕೊಳ್ಳುವಾಗಲೂ ಡ್ರೋನ್​ ಪ್ರತಾಪ್​ ಬಗ್ಗೆ ತಮಗೆ ಇರುವ ಭಾವನೆ ಎಂಥದ್ದು ಎಂಬುದನ್ನು ವಿನಯ್​ ಗೌಡ ತಿಳಿಸಿದರು.

ಇದೆಲ್ಲ ಶುರುವಾಗಿದ್ದು ಹೇಗೆ?

ಜನವರಿ 25ರ ಸಂಚಿಕೆಯಲ್ಲಿ ಮಿಡ್​ ವೀಕ್​ ಎಲಿಮಿನೇಷನ್​ ನಡೆಯುತ್ತದೆ ಎಂದು ಬಿಗ್​ ಬಾಸ್​ ಘೋಷಿಸಿದರು. ಮನೆಯಲ್ಲಿ ಇರುವ ಆರು ಮಂದಿಯ ಅಭಿಪ್ರಾಯದ ಆಧಾರದಲ್ಲಿ ಒಬ್ಬರನ್ನು ಹೊರಗೆ ಕಳಿಸಲಾಗುತ್ತದೆ ಎಂದು ಘೋಷಿಸಲಾಯಿತು. ಆಗ ಡ್ರೋನ್​ ಪ್ರತಾಪ್​ ಎಲಿಮಿನೇಟ್​ ಆಗಬೇಕು ಎಂದು ವಿನಯ್​ ಗೌಡ ತಿಳಿಸಿದರು. ‘ನನ್ನ ವೋಟ್​ ಪ್ರತಾಪ್​ಗೆ. ಅವನು ಒಬ್ಬ ಒಳ್ಳೆಯ ಹುಡುಗ. ಆದರೆ ಬಿಗ್​ ಬಾಸ್​ಗೆ ಬೇಕಾದ ಗೇಮ್​ ಅವನಲ್ಲಿ ಇಲ್ಲ. ನನ್ನ ಕಣ್ಣಿಗೆ ಅವನ ಆಟ ಕಾಣಿಸಿಲ್ಲ. ಆಗಾಗ ಕಳೆದುಹೋಗುತ್ತಿದ್ದ’ ಎಂದು ವಿನಯ್​ ಗೌಡ ಹೇಳಿದರು. ಆರು ವೋಟ್​ಗಳಲ್ಲಿ 3 ವೋಟ್​ ಪಡೆದ ಡ್ರೋನ್​ ಪ್ರತಾಪ್​ ಆಟ ಮುಕ್ತಾಯ ಆಯಿತು ಎಂದು ಬಿಗ್​ ಬಾಸ್​ ತಿಳಿಸಿದರು.

ಮೊದಲ ಬಾರಿ ಮೆಚ್ಚುಗೆ:

ಡ್ರೋನ್​ ಪ್ರತಾಪ್​ ಅವರು ಎಲ್ಲರಿಗೂ ವಿದಾಯ ಹೇಳುವ ಸಮಯ ಬಂತು. ಆಗ ಅವರನ್ನು ವಿನಯ್​ ಗೌಡ ಹೊಗಳಿದರು. ‘ನಿನ್ನ ಇಷ್ಟು ದಿನಗಳ ಆಟ ಚೆನ್ನಾಗಿತ್ತು. ನೀನೊಬ್ಬ ಒಳ್ಳೆಯ ಹುಡುಗ. ಇದೊಂದು ಪ್ರಕ್ರಿಯೆ. ಯಾರಾದರೂ ಒಬ್ಬರು ಹೋಗಲೇ ಬೇಕು. ಜೀವನದಲ್ಲಿ ನೀನು ತುಂಬ ಎತ್ತರಕ್ಕೆ ಬೆಳೆಯಬೇಕು ಅಂತ ಹೇಳುತ್ತೇನೆ. ನನ್ನ ಕಡೆಯಿಂದ ಆಲ್​ ದಿ ಬೆಸ್ಟ್​. ಇಷ್ಟು ದಿನ ನೀನು ಆಡಿದ ಆಟಕ್ಕೆ ನನ್ನ ಚಪ್ಪಾಳೆ’ ಎಂದರು ವಿನಯ್​ ಗೌಡ.

ಇದನ್ನೂ ಓದಿ: ‘ಡ್ರೋನ್​ ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂದ ವಿನಯ್​ ಗೌಡ; ಈ ಮಾತಿಗೆ ಕಾರಣ ಏನು?

ಪ್ರತಾಪ್​ಗೆ ಅಭಿನಂದನೆ:

ಇನ್ನೇನು ದೊಡ್ಮನೆಯಿಂದ ಹೊರಡಲು ಡ್ರೋನ್​ ಪ್ರತಾಪ್​ ಅವರು ಸಜ್ಜಾದರು. ಆದರೆ ಅದು ನಿಜವಾದ ಎಲಿಮಿನೇಷನ್​ ಪ್ರಕ್ರಿಯೆ ಅಲ್ಲ ಎಂದು ಬಿಗ್​ ಬಾಸ್​ ಸರ್ಪ್ರೈಸ್​ ನೀಡಿದರು! ಆಗ ಅವರನ್ನು ತಬ್ಬಿಕೊಂಡು ವಿನಯ್​ ಗೌಡ ಅಭಿನಂದನೆ ತಿಳಿಸಿದರು. ಬಳಿಕ ಇಷ್ಟು ದಿನಗಳ ನೆನಪುಗಳನ್ನು ಮೆಲುಕು ಹಾಕುವಾಗಲೂ ಪ್ರತಾಪ್​ ಬಗ್ಗೆ ವಿನಯ್​ ಒಳ್ಳೆಯ ಮಾತುಗಳನ್ನು ಹೇಳಿದರು.

ಇದನ್ನೂ ಓದಿ: ಪ್ರತಾಪ್​ ಎಲಿಮಿನೇಟ್​ ಆದ್ರೂ ಹೊರಗೆ ಹೋಗಲಿಲ್ಲ: ಸುದೀಪ್​ ಕಾರಣದಿಂದ ನಡೆಯಿತು ಅಚ್ಚರಿ

‘ನನಗೆ ಮತ್ತು ಪ್ರತಾಪ್​ಗೆ ಯಾವಾಗ ಘರ್ಷಣೆ ಶುರುವಾಯಿತೋ ಗೊತ್ತಿಲ್ಲ. ನಿನ್ನನ್ನು ನಾನು ಶತ್ರು ರೀತಿ ನೋಡಿಲ್ಲ. ನಿನ್ನ ಮೇಲೆ ನನಗೆ ದ್ವೇಷ ಇಲ್ಲ. ನಿನ್ನನ್ನು ಒಬ್ಬ ಚಿಕ್ಕ ಹುಡುಗನ ರೀತಿ ನೋಡಿದ್ದೇನೆ. ನನ್ನ ಮಗನನ್ನು ಹೋಗೋ ಬಾರೋ ಎನ್ನುವ ರೀತಿಯಲ್ಲಿ ನಾನು ನಿನ್ನ ಜೊತೆ ಮಾತಾಡ್ತೀನಿ. ನಿನಗೆ ಮರ್ಯಾದೆ ಕೊಡಬಾರದು ಎಂಬ ಭಾವನೆ ದೇವರಾಣೆಗೂ ಇಲ್ಲ. ನೀನು ತುಂಬ ಒಳ್ಳೆಯ ಹುಡುಗ. ಮಾತಿಗೆ ಮಾತು ಬರುತ್ತದೆ. ಕೋಪ ಬಂದಾಗ ಕಿರುಚಾಡಿದ್ದೇನೆ. ಆದರೂ ನನ್ನ ಮನಸ್ಸಿನಲ್ಲಿ ನಿನ್ನ ಬಗ್ಗೆ ಗೌರವ ಇದೆ’ ಎಂದು ವಿನಯ್​ ಗೌಡ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ