AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡ್ರೋನ್​ ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂದ ವಿನಯ್​ ಗೌಡ; ಈ ಮಾತಿಗೆ ಕಾರಣ ಏನು?

ಬಿಗ್​ ಬಾಸ್​ ಜರ್ನಿಯ 109ನೇ ದಿನದಲ್ಲಿ ವಿನಯ್​ ಗೌಡ ಅವರಿಗೆ ಡ್ರೋನ್​ ಪ್ರತಾಪ್​ ಸಿಕ್ಕಾಪಟ್ಟೆ ತಿರುಗೇಟು ನೀಡಿದ್ದಾರೆ. ಪ್ರತಾಪ್​ ಅವರ ಖಡಕ್​ ಮಾತುಗಳನ್ನು ಕೇಳಿದ ಬಳಿಕ ವಿನಯ್​ ಅವರು ಕಾರ್ತಿಕ್​ ಎದುರು ತಮ್ಮ ಅನಿಸಿಕೆ ಹಂಚಿಕೊಂಡರು. ಆದರೆ, ‘ಪ್ರತಾಪ್​ ಗೆಲ್ಲುತ್ತಾನೆ ಅಂತ ತಮಾಷೆಗೂ ಹೇಳಬೇಡ’ ಎಂದಿದ್ದಾರೆ ಕಾರ್ತಿಕ್​ ಮಹೇಶ್​.

‘ಡ್ರೋನ್​ ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂದ ವಿನಯ್​ ಗೌಡ; ಈ ಮಾತಿಗೆ ಕಾರಣ ಏನು?
ಡ್ರೋನ್​ ಪ್ರತಾಪ್​, ವಿನಯ್​ ಗೌಡ
ಮದನ್​ ಕುಮಾರ್​
|

Updated on: Jan 25, 2024 | 5:30 PM

Share

ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಮತ್ತು ಡ್ರೋನ್​ ಪ್ರತಾಪ್ (Drone Prathap)​ ನಡುವೆ ಮೊದಲಿನಿಂದಲೂ ಕಿರಿಕ್​ ಆಗುತ್ತಲೇ ಇದೆ. ಕೊನೇ ವಾರದ ತನಕವೂ ಅದು ಮುಂದುವರಿದಿದೆ. ಡ್ರೋನ್​ ಪ್ರತಾಪ್​ ಅವರಿಗೆ ಜನರಿಂದ ಬೆಂಬಲ ಸಿಕ್ಕಿದೆ. ಹಾಗಾಗಿ ಅವರು ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. ಅಂತಿಮವಾಗಿ ಅವರೇ ಬಿಗ್​ ಬಾಸ್​ (Bigg Boss Kannada) ಟ್ರೋಫಿ ಗೆಲ್ಲಲಿ ಎಂದು ಅವರ ಬೆಂಬಲಿಗರು ಆಶಿಸುತ್ತಿದ್ದಾರೆ. ಆದರೆ ಡ್ರೋನ್​ ಪ್ರತಾಪ್​ ಬಗ್ಗೆ ವಿನಯ್​ ಗೌಡ (Vinay Gowda) ಅವರಿಗೆ ಸಾಕಷ್ಟು ಅಸಮಾಧಾನ ಇದೆ. ಹಾಗಿದ್ದರೂ ಕೂಡ ‘ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಇಲ್ಲಿದೆ ವಿವರಣೆ.

109ನೇ ದಿನದಲ್ಲಿ ವಿನಯ್​ ಗೌಡ ಅವರಿಗೆ ಡ್ರೋನ್​ ಪ್ರತಾಪ್​ ಸಿಕ್ಕಾಪಟ್ಟೆ ತಿರುಗೇಟು ನೀಡಿದ್ದಾರೆ. ‘ನೀವು ಬಾತ್​ರೂಮ್​ನಲ್ಲಿ ಅತ್ತರೆ ಅದು ಪ್ರೀತಿ. ನಾನು ಅತ್ತರೆ ಸಿಂಪತಿ ಎನ್ನುತ್ತೀರಿ. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಆದರೆ ಅದು ಸಹಜ. ಆದರೆ ನಾನು ಹಳ್ಳಿ ಭಾಷೆ ಮಾತನಾಡಿದರೆ ಲೈಮ್​ಲೈಟ್​ಗಾಗಿ ಮಾಡಿದ್ದು ಎನ್ನುತ್ತೀರಿ’ ಎಂದು ಡ್ರೋನ್​ ಪ್ರತಾಪ್​ ಅವರು ಖಡಕ್​ ಮಾತುಗಳ ಬಾಣವನ್ನು ವಿನಯ್​ ಕಡೆಗೆ ಎಸೆದಿದ್ದಾರೆ. ಈ ಮಾತುಗಳನ್ನು ಕೇಳಿದ ಬಳಿಕ ವಿನಯ್​ ಅವರು ಕಾರ್ತಿಕ್​ ಎದುರು ತಮ್ಮ ಅನಿಸಿಕೆ ಹಂಚಿಕೊಂಡರು.

ಇದನ್ನೂ ಓದಿ: ಡ್ರೋನ್​ ಪ್ರತಾಪ್​ ಮೇಲೆ ಇರುವ ಕೇಸ್​ ಒಂದಲ್ಲ, ಎರಡಲ್ಲ; ಎಲ್ಲವನ್ನೂ ವಿವರಿಸಿದ ಲಾಯರ್​

‘ಥರ್ಡ್​ ಕ್ಲಾಸ್​ ಥರ ಮಾತಾಡ್ತಾನೆ. ಬರೀ ನಾಟಕ ಆಡಿಕೊಂಡು ಇಲ್ಲಿಯ ತನಕ ಬಂದಿದ್ದಾನೆ. ಜನರು ಹಾಕಿರುವ ಭಿಕ್ಷೆ, ಅದನ್ನು ಒಪ್ಪಿಕೊಳ್ತೀನಿ ಅಂತ ಎಷ್ಟು ನಾಟಕ ಆಡ್ತಾನೋ. ಹೊರಗಡೆ ಜನರಿಗೆ ಈ ಥರ ನಾಟಕ ಕಾಣಿಸುತ್ತಿಲ್ಲ ಎಂದರೆ ನನಗೆ ತುಂಬ ನಿರಾಸೆ ಆಗತ್ತೆ. ನಾಟಕ ಆಡಿಕೊಂಡು ಗೆದ್ದರೂ ಗೆದ್ದು ಬಿಡುತ್ತಾನೆ’ ಎಂದು ವಿನಯ್​ ಗೌಡ ಅವರು ಹೇಳಿದರು. ‘ಏ.. ಹಾಗೆಲ್ಲ ಹೇಳಬೇಡ. ತಮಾಷೆಗೂ ಆ ಮಾತನ್ನು ಹೇಳಬೇಡ’ ಎಂದಿದ್ದಾರೆ ಕಾರ್ತಿಕ್​ ಮಹೇಶ್​.

ಇದನ್ನೂ ಓದಿ: ಡ್ರೋನ್​ ಪ್ರತಾಪ್​ಗೆ ಮನೆಮಂದಿ ಚುಚ್ಚುಮಾತು; ಎಲ್ಲವನ್ನೂ ಕೇಳಿಸಿಕೊಂಡು ಕಣ್ಣೀರು ಹಾಕಿದ ಸಂಗೀತಾ

‘ಜನರು ಎಲ್ಲವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಇರುತ್ತಾರೆ. ಡ್ರೋನ್​ ಪ್ರತಾಪ್​ ಇಲ್ಲಿ ನಾಟಕ ಆಡಿದರೆ ಬಿಗ್​ ಬಾಸ್​ ಮುಗಿದ ಮೇಲೂ ನಾಟಕ ಮುಂದುವರಿಸಬೇಕು’ ಎಂದಿದ್ದಾರೆ ವಿನಯ್​. ಆರಂಭದಲ್ಲಿ ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್​ ಅವರ ನಡುವೆ ಒಂದು ಅಂತರ ಇತ್ತು. ಆದರೆ ಇತ್ತೀಚಿನ ವಾರಗಳಲ್ಲಿ ಸಂಗೀತಾ ಮತ್ತು ಪ್ರತಾಪ್​ ಕ್ಲೋಸ್​ ಆಗಿದ್ದಾರೆ. ಇಬ್ಬರೂ ಸ್ಟ್ರಾಂಗ್​ ಸ್ಪರ್ಧಿಗಳಾಗಿದ್ದಾರೆ. ಬಿಗ್​ ಬಾಸ್​ ಶೋನಿಂದ ಪ್ರತಾಪ್​ ಅವರ ಜನಪ್ರಿಯತೆ ಹೆಚ್ಚಿದೆ. ಈ ಮೊದಲು ಇದ್ದ ಅವರ ಇಮೇಜ್​ ಬದಲಾವಣೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ