ಡ್ರೋನ್ ಪ್ರತಾಪ್ ಮೇಲೆ ಇರುವ ಕೇಸ್ ಒಂದಲ್ಲ, ಎರಡಲ್ಲ; ಎಲ್ಲವನ್ನೂ ವಿವರಿಸಿದ ಲಾಯರ್
ಡ್ರೋನ್ ಪ್ರತಾಪ್ ಅವರ ಮೇಲೆ ಬೀಳಲಿರುವುದು ಒಂದು ಕೇಸ್ ಮಾತ್ರವಲ್ಲ. ಆ ಕುರಿತು ವಕೀಲರು ಹೇಳಿಕೆ ನೀಡಿದ್ದಾರೆ. ‘ಹಲವಾರು ಕೇಸ್ಗಳು ಬೀಳುತ್ತವೆ. ಪ್ರಯಾಗ್ ಅವರಿಂದಲೇ ಇನ್ನೂ ಎರಡು-ಮೂರು ಕೇಸ್ಗಳನ್ನು ಹಾಕಲಾಗುತ್ತದೆ. ಕಾನೂನಿನ ರೀತಿಯಲ್ಲಿ ನಡೆದುಕೊಂಡ ಅಧಿಕಾರಿ ಬಗ್ಗೆ ಪ್ರತಾಪ್ ಆರೋಪ ಮಾಡಿದ್ದಾರೆ’ ಎಂದು ವಕೀಲರು ಹೇಳಿದ್ದಾರೆ.
ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಡ್ರೋನ್ ಪ್ರತಾಪ್ (Drone Prathap) ಅವರು ಆಡಿದ ಕೆಲವು ಮಾತುಗಳು ವಿವಾದಕ್ಕೆ ಕಾರಣ ಆಗಿವೆ. ಅವರ ಹೇಳಿಕೆಯಿಂದ ಮಾನಹಾನಿ ಆಗಿದೆ ಎಂದು ಡಾಕ್ಟರ್ ಪ್ರಯಾಗ್ ಅವರು ಆರೋಪ ಮಾಡಿದ್ದಾರೆ. ಪ್ರತಾಪ್ ವಿರುದ್ಧ 49 ಲಕ್ಷ ರೂಪಾಯಿಯ ಮಾನನಷ್ಟ ಮೊಕದ್ದಮೆ (Defamation Case) ಹೂಡಲಾಗಿದೆ. ಈ ಬಗ್ಗೆ ವಕೀಲರು ಮಾಹಿತಿ ನೀಡಿದ್ದಾರೆ. ಅಂದಹಾಗೆ, ಪ್ರತಾಪ್ ಅವರ ಮೇಲೆ ಬೀಳಲಿರುವುದು ಒಂದು ಕೇಸ್ ಮಾತ್ರವಲ್ಲ. ಆ ಕುರಿತು ವಕೀಲ ಲೋಹಿತ್ ಹನುಮಾಪುರ ಹೇಳಿಕೆ ನೀಡಿದ್ದಾರೆ. ‘ಹಲವಾರು ಕೇಸ್ಗಳು ಬೀಳುತ್ತವೆ. ಪ್ರಯಾಗ್ ಅವರಿಂದಲೇ ಇನ್ನೂ ಎರಡು-ಮೂರು ಕೇಸ್ಗಳನ್ನು ಹಾಕಲಾಗುತ್ತದೆ. ಕಾನೂನಿನ ರೀತಿಯಲ್ಲಿ ನಡೆದುಕೊಂಡ ಅಧಿಕಾರಿ ಬಗ್ಗೆ ಪ್ರತಾಪ್ ಆರೋಪ ಮಾಡಿದ್ದಾರೆ. ಪ್ರತಾಪ್ ವಿರುದ್ಧ ಕಾನೂನಿನಲ್ಲಿ ಅವಕಾಶ ಇರುವ ಎಲ್ಲವನ್ನೂ ಫೈಲ್ ಮಾಡಲಾಗುತ್ತದೆ’ ಎಂದು ವಕೀಲರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos