ಪ್ರತಾಪ್​ಗೆ ಸಂಕಷ್ಟ; 49 ಲಕ್ಷ ರೂ. ಮಾನನಷ್ಟ ಕೇಸ್ ಹಾಕಲು ಮುಂದಾದ ಅಧಿಕಾರಿ

ಇತ್ತೀಚೆಗೆ ತಮ್ಮ ಜೀವನದಲ್ಲಿ ನಡೆದ ಕಷ್ಟಗಳನ್ನು ಹೇಳಿಕೊಳ್ಳಲು ಬಿಗ್ ಬಾಸ್ ಅವಕಾಶ ನೀಡಿದ್ದರು. ಆಗ ಪ್ರತಾಪ್ ಅವರು ಒಂದು ಘಟನೆ ಬಗ್ಗೆ ಮಾತನಾಡಿದ್ದರು. ಈ ಕುರಿತು ಕೇಸ್ ಹಾಕಲಾಗುತ್ತಿದೆ.

ಪ್ರತಾಪ್​ಗೆ ಸಂಕಷ್ಟ; 49 ಲಕ್ಷ ರೂ. ಮಾನನಷ್ಟ ಕೇಸ್ ಹಾಕಲು ಮುಂದಾದ ಅಧಿಕಾರಿ
ಡ್ರೋನ್ ಪ್ರತಾಪ್
Follow us
Mangala RR
| Updated By: ರಾಜೇಶ್ ದುಗ್ಗುಮನೆ

Updated on:Jan 18, 2024 | 1:29 PM

ಬಿಗ್ ಬಾಸ್ ಮನೆಯಲ್ಲಿರುವ ಡ್ರೋನ್ ಪ್ರತಾಪ್​ಗೆ (Drone Prathap) ಸಂಕಷ್ಟ ಎದುರಾಗಿದೆ. ಮಾನನಷ್ಟ ಪರಿಹಾರ ಕೋರಿ ಬಿಬಿಎಂಪಿ ನೋಡಲ್ ಅಧಿಕಾರಿ ಪ್ರಯಾಗ್ ಅವರು ಪ್ರತಾಪ್ ವಿರುದ್ಧ ಇಂದು (ಜನವರಿ 18) ದಾವೆ ಹೂಡಲಿದ್ದಾರೆ. 49 ಲಕ್ಷ ರೂಪಾಯಿ ಪರಿಹಾರ ಬೇಕು ಎಂದು ಅವರು ಕೇಸ್ ಹಾಕಲಿದ್ದಾರೆ. ಈ ಹಿಂದೆ ಅವರು ವಕೀಲರ ಮೂಲಕ ಲೀಗಲ್ ನೋಟಿಸ್ ಜಾರಿಗೊಳಿಸಿದ್ದರು. ಇದೀಗ ಪರಿಹಾರ ಕೋರಿ ಮಾನಹಾನಿ ಕೇಸ್ ಹಾಕುತ್ತಿದ್ದಾರೆ.

ಪ್ರತಾಪ್ ಅವರು ಡ್ರೋನ್ ತಯಾರಿಕೆ ವಿಚಾರದಲ್ಲಿ ಸಾಕಷ್ಟು ಸುಳ್ಳು ಹೇಳಿದ್ದಾರೆ ಎಂದು ಅವರ ವಿರುದ್ಧ ಆರೋಪಗಳು ಬಂದವು. ಆದರೆ, ಬಿಗ್ ಬಾಸ್​ಗೆ ತೆರಳಿದ ಬಳಿಕ ಅವರ ಬಗ್ಗೆ ಇದ್ದ ಅಭಿಪ್ರಾಯ ಬದಲಾಯಿತು. ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಸಾಕಷ್ಟು ಫ್ಯಾನ್​ಪೇಜ್​ಗಳು ಸೃಷ್ಟಿ ಆದವು. ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಇತ್ತೀಚೆಗೆ ತಮ್ಮ ಜೀವನದಲ್ಲಿ ನಡೆದ ಕಷ್ಟಗಳನ್ನು ಹೇಳಿಕೊಳ್ಳಲು ಬಿಗ್ ಬಾಸ್ ಅವಕಾಶ ನೀಡಿದ್ದರು. ಆಗ ಪ್ರತಾಪ್ ಅವರು ಒಂದು ಘಟನೆ ಬಗ್ಗೆ ಮಾತನಾಡಿದ್ದರು.

‘ಕೊವಿಡ್ ಸಮಯದಲ್ಲಿ ನಾನು ಸಾಕಷ್ಟು ಚಿತ್ರ ಹಿಂಸೆ ಅನುಭವಿಸಿದ್ದೆ. ಕ್ವಾರಂಟೈನ್ ಟೈಮ್​ನಲ್ಲಿ ಅಧಿಕಾರಿಗಳು ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ದರು. ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಒತ್ತಾಯಪೂರ್ವಕವಾಗಿ ಸಹಿ ಮಾಡುವಂತೆ ಹೇಳಿದ್ದರು’ ಎಂಬಿತ್ಯಾದಿ ಆರೋಪಗಳನ್ನು ಮಾಡಿ ಕಣ್ಣೀರು ಹಾಕಿದ್ದರು. ಈ ಕಾರಣಕ್ಕೆ ಅವರ ಮೇಲೆ ಕೇಸ್ ಹಾಕಲು ಸಿದ್ಧತೆ ನಡೆದಿದೆ.

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಫೈಟ್​; ಕೆನ್ನೆಗೆ ಬಾರಿಸಿ ಎಲಿಮಿನೇಟ್ ಆದ ಸ್ಪರ್ಧಿ

ಬಿಗ್ ಬಾಸ್ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಜನವರಿ 27 ಹಾಗೂ 28ರಂದು ಫಿನಾಲೆ ನಡೆಯಲಿದೆ. ಈಗಿರುವ ಏಳು ಸ್ಪರ್ಧಿಗಳ ಪೈಕಿ ಪ್ರತಾಪ್ ಕೂಡ ರೇಸ್​ನಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:29 pm, Thu, 18 January 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ