Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್’ ಮನೆಯಲ್ಲಿ ಫೈಟ್​; ಕೆನ್ನೆಗೆ ಬಾರಿಸಿ ಎಲಿಮಿನೇಟ್ ಆದ ಸ್ಪರ್ಧಿ

ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳು ಫ್ರಸ್ಟ್ರೇಷನ್ ಅನುಭವಿಸುತ್ತಾ ಇರುತ್ತಾರೆ. ಸಣ್ಣ ಮಾತಿನಿಂದ ದೊಡ್ಡ ಫೈಟ್ ಆದ ಉದಾಹರಣೆ ಇದೆ. ಬಿಗ್ ಬಾಸ್ ಮನೆಯಲ್ಲಿ  ಅಭಿಷೇಕ್ ಅವರು ಸಿಟ್ಟಿನಿಂದ ಸಮರ್ಥ್​ಗೆ ಹೊಡೆದಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ಫೈಟ್​; ಕೆನ್ನೆಗೆ ಬಾರಿಸಿ ಎಲಿಮಿನೇಟ್ ಆದ ಸ್ಪರ್ಧಿ
ಬಿಗ್ ಬಾಸ್
Follow us
ರಾಜೇಶ್ ದುಗ್ಗುಮನೆ
|

Updated on:Jan 05, 2024 | 12:36 PM

‘ಬಿಗ್ ಬಾಸ್’ ಮನೆಯಲ್ಲಿ ಮ್ಯಾನ್ ಹ್ಯಾಂಡ್ಲಿಂಗ್ ಮಾಡುವಂತೆ ಇಲ್ಲ. ಹಾಗೆ ಮಾಡಿದರೆ ತಕ್ಷಣಕ್ಕೆ ಅವರನ್ನು ಎಲಿಮಿನೇಟ್ ಮಾಡಲಾಗುತ್ತದೆ. ‘ಬಿಗ್ ಬಾಸ್ ಹಿಂದಿ ಸೀಸನ್ 17’ನಲ್ಲಿ ಈ ರೀತಿಯ ಘಟನೆ ನಡೆದಿದೆ ಎಂದು ವರದಿ ಆಗಿದೆ. ಅಭಿಷೇಕ್ ಕುಮಾರ್ (Abhishek Kumar) ಹಾಗೂ ಸಮರ್ಥ್ ಜ್ಯುರೆಲ್ ಮಧ್ಯೆ ಫೈಟ್ ನಡೆದಿದೆ. ಅಭಿಷೇಕ್ ಅವರು ಸಮರ್ಥ್​​ಗೆ ಹೊಡೆದಿದ್ದಾರೆ. ಇದರಿಂದ ಅಭಿಷೇಕ್​ನ ಮನೆಯಿಂದ ಹೊರಕ್ಕೆ ಹಾಕಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳು ಫ್ರಸ್ಟ್ರೇಷನ್ ಅನುಭವಿಸುತ್ತಾ ಇರುತ್ತಾರೆ. ಸಣ್ಣ ಮಾತಿನಿಂದ ದೊಡ್ಡ ಫೈಟ್ ಆದ ಉದಾಹರಣೆ ಇದೆ. ಬಿಗ್ ಬಾಸ್ ಮನೆಯಲ್ಲಿ  ಅಭಿಷೇಕ್ ಅವರು ಸಿಟ್ಟಿನಿಂದ ಸಮರ್ಥ್​ಗೆ ಹೊಡೆದಿದ್ದಾರೆ. ಅಭಿಷೇಕ್ ಅವರನ್ನು ಮನೆಯಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎನ್ನುವ ನಿರ್ಧಾರವನ್ನು ಮನೆಯ ಕ್ಯಾಪ್ಟನ್ ಅಂಕಿತಾ ತೆಗೆದುಕೊಳ್ಳುವಂತೆ ಬಿಗ್ ಬಾಸ್ ಆದೇಶ ನೀಡಿದರು ಎನ್ನಲಾಗಿದೆ.

ಅಂಕಿತಾ ಅವರು ಅಭಿಷೇಕ್​ನ ಎಲಿಮಿನೇಟ್ ಮಾಡುವ ನಿರ್ಧಾರ ತೆಗೆದುಕೊಂಡರು. ಈ ಮೂಲಕ ಅವರನ್ನು ಬಿಗ್ ಬಾಸ್​ನಿಂದ ಹೊರಕ್ಕೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಟ್ವಿಟರ್​ನಲ್ಲಿ ಚರ್ಚೆ ಜೋರಾಗಿದೆ. ಅವರನ್ನು ಮನೆಯಿಂದ ಎಲಿಮಿನೇಟ್ ಮಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ಹೋಯ್ತು ಲಕ್ಷ ಲಕ್ಷ ಹಣ; ಬಿಗ್ ಬಾಸ್ ವಿನ್ನರ್​ಗೆ ಸಿಗೋ ಫೈನಲ್ ಅಮೌಂಟ್ ಎಷ್ಟು?

‘ಅಭಿಷೇಕ್ ಇರಬೇಕೋ ಅಥವಾ ಬೇಡವೋ ಎಂಬುದನ್ನು ಜನರು ನಿರ್ಧಾರ ಮಾಡಬೇಕು. ಅಂಕಿತಾಗೆ ಈ ಅಧಿಕಾರವನ್ನು ಏಕೆ ನೀಡಿದಿರಿ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ‘ಅಭಿಷೇಕ್ ಎಲಿಮಿನೇಟ್ ಆಗುತ್ತಾರೆ ಅನ್ನೋದು ಗೊತ್ತಿತ್ತು. ಆದರೆ, ಅಂಕಿತಾಗೆ ಈ ಅಧಿಕಾರ ನೀಡಿದ್ದೇಕೆ’ ಎಂದು ಕೆಲವರು ಕೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:26 pm, Fri, 5 January 24

ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ