ಮನೆಯ ಕ್ಯಾಪ್ಟನ್ ಆಗಿದ್ಯಾರು? ಉತ್ತಮ-ಕಳಪೆ ಯಾರಿಗೆ?

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ಫಿನಾಲೆಗೆ ಹತ್ತಿರವಾಗಿದೆ. ಈ ಹಂತದಲ್ಲಿ ಈ ವಾರ ಮನೆಯ ಕ್ಯಾಪ್ಟನ್ ಯಾರಾದರು? ಉತ್ತಮ ಯಾರಿಗೆ ಸಿಕ್ಕಿತು? ಕಳಪೆ ಯಾರಾದರು?

ಮನೆಯ ಕ್ಯಾಪ್ಟನ್ ಆಗಿದ್ಯಾರು? ಉತ್ತಮ-ಕಳಪೆ ಯಾರಿಗೆ?
ಬಿಗ್​ಬಾಸ್ ಕನ್ನಡ
Follow us
ಮಂಜುನಾಥ ಸಿ.
|

Updated on: Jan 05, 2024 | 10:48 PM

ಫಿನಾಲೆಗೆ ಹತ್ತಿರ ಬರುತ್ತಿದ್ದಂತೆ ಕ್ಯಾಪ್ಟನ್ ಆಗಲು ಮನೆಯ ಸದಸ್ಯರಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಮುಂದಿನ ವಾರಕ್ಕೆ ಬಿಗ್​ಬಾಸ್ (BiggBoss) ಮನೆಯ ಕ್ಯಾಪ್ಟನ್ ಆಗಲು ಟಾಸ್ಕ್ ಗುರುವಾರದ ಎಪಿಸೋಡ್​ನಲ್ಲಿಯೇ ಆರಂಭವಾಗಿತ್ತು. ಮತದಾನದ ಮೂಲಕ ಟಾಸ್ಕ್ ಆರಂಭವಾಗಿ ವಿನಯ್, ಕಾರ್ತಿಕ್, ಸಂಗೀತಾ, ತುಕಾಲಿ ಸಂತೋಷ್ ಅವರಗಳು ಕ್ಯಾಪ್ಟೆನ್ಸಿ ರೇಸ್​ನಲ್ಲಿ ಉಳಿದಿದ್ದರು. ಬಳಿಕ ಬಿಗ್​ಬಾಸ್ ನೀಡಿದ ವಿಶೇಷ ಅಧಿಕಾರದಿಂದ ಕಾರ್ತಿಕ್ ಹಾಗೂ ವಿನಯ್ ಅವರನ್ನು ಸಂಗೀತಾ ಕ್ಯಾಪ್ಟೆನ್ಸಿ ರೇಸ್​ನಿಂದ ಹೊರಗೆ ಇಟ್ಟರು. ಅಂತಿಮವಾಗಿ ತುಕಾಲಿ ಸಂತು ಹಾಗೂ ಸಂಗೀತಾ ಅಷ್ಟೆ ಉಳಿದರು.

ಶುಕ್ರವಾರದ ಎಪಿಸೋಡ್​ನಲ್ಲಿ ಕ್ಯಾಪ್ಟೆನ್ಸಿಗಾಗಿ ಸಂಗೀತಾ ಹಾಗೂ ತುಕಾಲಿ ಸ್ಪರ್ಧೆ ಮಾಡಿದರು. ಮೊದಲಿಗೆ, ತಾವು ಕ್ಯಾಪ್ಟನ್ ಆದರೆ ಹಿಂದಿನ ಕ್ಯಾಪ್ಟನ್​ಗಳ ಯಾವ ಗುಣವನ್ನು ಅಳವಡಿಸಿಕೊಳ್ಳುತ್ತೇವೆ, ಯಾವ ಗುಣವನ್ನು ಅಳವಡಿಸಿಕೊಳ್ಳುವುದಿಲ್ಲ ಎಂದು ವಿವರಿಸಬೇಕಿತ್ತು, ಅಂತೆಯೇ ಇಬ್ಬರೂ ಸಹ ವಿವರ ನೀಡಿದರು. ಚೆಂಡನ್ನು ಹಲಗೆಯ ಮೇಲಿಟ್ಟು ಬ್ಯಾಲೆನ್ಸ್ ಮಾಡುವುದು ಆ ಬಳಿಕ ಅದೇ ಚೆಂಡನ್ನು ಗುರಿ ನೋಡಿ ರಂಧ್ರವೊಂದಕ್ಕೆ ಹಾಕುವ ಟಾಸ್ಕ್ ಅನ್ನು ಬಿಗ್​ಬಾಸ್ ನೀಡಿದರು. ವಿನಯ್ ಹಾಗೂ ಕಾರ್ತಿಕ್ ಅವರನ್ನು ಆಟಕ್ಕೆ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು.

ಆರಂಭದಲ್ಲಿ ಇಬ್ಬರೂ ಸಹ ಚೆಂಡನ್ನು ಬ್ಯಾಲೆನ್ಸ್ ಮಾಡಲು ಪರದಾಡಿದರು, ಬಳಿಕ ಸಂಗೀತಾ ತುಸು ವೇಗ ಪಡೆದುಕೊಂಡರು. ತುಕಾಲಿ ಸಂತು, ಸಂಗೀತಾ ಟಾಸ್ಕ್​ ಮುಗಿಸಿಬಿಟ್ಟರೆ ಎಂದು ಆತಂಕಕ್ಕೆ ಒಳಗಾಗುತ್ತಲೇ ಆಡಿದ ಪರಿಣಾಮ ತುಸು ನಿಧಾನವಾಗಿ ಟಾಸ್ಕ್ ಮುಗಿಸಿದರು. ಚೆನ್ನಾಗಿ ಆಡಿದ ಸಂಗೀತಾ ಟಾಸ್ಕ್ ಗೆದ್ದು ಮನೆಯ ಕ್ಯಾಪ್ಟನ್ ಆದರು. ಹದಿಮೂರು ವಾರಗಳಲ್ಲಿ ಇದೇ ಮೊದಲ ಬಾರಿಗೆ ಸಂಗೀತಾ ಮನೆಯ ಕ್ಯಾಪ್ಟನ್ ಆದಂತಾಯಿತು. ಆ ಮೂಲಕ ಮೂರನೇ ಬಾರಿಗೆ ಮಹಿಳಾ ಸ್ಪರ್ಧಿಯೇ ಕ್ಯಾಪ್ಟನ್ ಆದಂತಾಯ್ತು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಮಹಿಳೆಯರಿಗೆ ಅವಕಾಶವಿಲ್ಲವೇ? ಚರ್ಚೆ ಹುಟ್ಟುಹಾಕಿದ ಸಂಗೀತಾ

ಸಂಗೀತಾ ಕ್ಯಾಪ್ಟನ್ ಆದ ಬಳಿಕ ‘ಉತ್ತಮ-ಕಳಪೆ’ ನೀಡುವ ಪ್ರಕ್ರಿಯೆ ಆರಂಭವಾಯ್ತು. ಈ ವಾರ ಉತ್ತಮವಾಗಿ ಪ್ರದರ್ಶನ ನೀಡಿ, ಕಳೆದುಕೊಂಡಿದ್ದ ಬಹುಮಾನದ ಮೊತ್ತವನ್ನು ಒಟ್ಟು ಸೇರಿಸಲು ಸಹಾಯ ಮಾಡಿದ ಕಾರ್ತಿಕ್​ಗೆ ಬಹುತೇಕರು ಉತ್ತಮ ಬಿರುದು ನೀಡಿದರು. ಸಂಗೀತಾ ಸಹ ಕಾರ್ತಿಕ್​ಗೆ ಉತ್ತಮ ನೀಡಿದರು. ಈ ವಾರ ಕಳಪೆ ಪ್ರದರ್ಶನ ನೀಡಿದ್ದಲ್ಲದೆ, ನಿಯಮಗಳನ್ನು ಸರಿಯಾಗಿ ಪಾಲಿಸದ ಮೈಖಲ್​ಗೆ ಕಳಪೆ ನೀಡಲಾಯ್ತು. ಕಾರ್ತಿಕ್​ ಇಂದ ಅಂತರ ಕಾಯ್ದುಕೊಂಡಿರುವ ಸಂಗೀತಾ, ಕಾರ್ತಿಕ್ ಕೊರಳಿಗೆ ಮೆಡಲ್ ಹಾಕಿದರು.

ಕ್ಯಾಪ್ಟೆನ್ಸಿ ಭಾಷಣ ಮಾಡಿದ ಸಂಗೀತಾ, ಎಲ್ಲರೂ ಶಾಂತವಾಗಿ ಈ ವಾರ ಇರೋಣ, ನಾನು ಶಿಕ್ಷೆ ನೀಡುವುದಿಲ್ಲ, ಆದರೆ ಯಾರೂ ಗಂಭೀರವಾದ ನಿಯಮ ಉಲ್ಲಂಘನೆ ಮಾಡಬೇಡಿ ಎಂದು ಮನವಿ ಮಾಡಿದರು. ಈ ವಾರ ಸಂಗೀತಾ ಹೇಗೆ ಮನೆಯನ್ನು ನಿಭಾಯಿಸುತ್ತಾರೆಯೋ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು
ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು
ಶ್ರೀರಂಗಪಟ್ಟಣ ಜಾಮಿಯಾ ಮಸೀದಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಶ್ರೀರಂಗಪಟ್ಟಣ ಜಾಮಿಯಾ ಮಸೀದಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
IND vs AUS: ಅದ್ಭುತ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ
IND vs AUS: ಅದ್ಭುತ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ