‘ಇನ್ನು ಬಾಕಿ ಉಳಿದಿರೋದು ಒಂದು ಮಾತ್ರ’; ಟಾರ್ಗೆಟ್ ತಿಳಿಸಿದ ಮೈಕಲ್ ಅಜಯ್
ಮೈಕಲ್ ಅವರು ಈ ವಾರ ಆಲಸ್ಯ ತೋರಿದ್ದರು. ಎಲ್ಲಾ ಟಾಸ್ಕ್ ಆಡಿದ ಹೊರತಾಗಿಯೂ ಪರ್ಫಾರ್ಮೆನ್ಸ್ ನೀಡಿಲ್ಲ. ಇದರ ಜೊತೆ ಕ್ಯಾಪ್ಟನ್ಗೆ ಗೌರವ ನೀಡಿಲ್ಲ. ಈ ಎಲ್ಲಾ ಕಾರಣದಿಂದ ಮೈಕಲ್ ಅಜಯ್ ಅವರು ಕಳಪೆ ತೆಗೆದುಕೊಂಡರು.
ಮೈಕಲ್ ಅಜಯ್ (Michel Ajay) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ವಾರ ಅವರು ಕಳಪೆ ಪಟ್ಟ ಪಡೆದಿದ್ದಾರೆ. ಅವರು ಬಿಳಿ ಬಟ್ಟೆ ಪಡೆದು ಜೈಲಿಗೆ ಹೋಗುವಾಗ ತಮ್ಮ ಟಾರ್ಗೆಟ್ ಏನು ಎಂಬುದನ್ನು ನೇರವಾಗಿ ಹೇಳಿದ್ದಾರೆ. ಇದನ್ನು ಕೇಳಿ ಮನೆಯವರು ಅಚ್ಚರಿ ಹೊರ ಹಾಕಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ 13ನೇ ವಾರ ಪೂರ್ಣಗೊಳ್ಳುತ್ತಿದೆ. ಫಿನಾಲೆಗೆ ಇನ್ನು ಬೆರಳೆಣಿಕೆ ವಾರಗಳು ಮಾತ್ರ ಉಳಿದಿವೆ.
ಮೈಕಲ್ ಅವರು ಈ ವಾರ ಆಲಸ್ಯ ತೋರಿದ್ದರು. ಎಲ್ಲಾ ಟಾಸ್ಕ್ ಆಡಿದ ಹೊರತಾಗಿಯೂ ಪರ್ಫಾರ್ಮೆನ್ಸ್ ನೀಡಿಲ್ಲ. ಇದರ ಜೊತೆ ಕ್ಯಾಪ್ಟನ್ಗೆ ಗೌರವ ನೀಡಿಲ್ಲ. ಈ ಎಲ್ಲಾ ಕಾರಣದಿಂದ ಮೈಕಲ್ ಅಜಯ್ ಅವರು ಕಳಪೆ ತೆಗೆದುಕೊಂಡರು. ಜೈಲಿಗೆ ಹೋಗೋ ಸಂದರ್ಭದಲ್ಲಿ ಕ್ಯಾಪ್ಟನ್ ಸಂಗೀತಾ ಅವರು ಮೈಕಲ್ಗೆ ಬಿಳಿ ಬಟ್ಟೆ ನೀಡಿದರು. ‘ಆ ಜಾಗ ನಿಜಕ್ಕೂ ಸಖತ್ ಆಗಿದೆ, ನಿಮಗೆ ಇಷ್ಟ ಆಗುತ್ತದೆ’ ಎಂದರು.
‘ಬಿಗ್ ಬಾಸ್ಗೆ ಬಂದ ಮೇಲೆ ಎಲ್ಲವನ್ನೂ ಅನುಭವಿಸಬೇಕು. ಉತ್ತಮ ಪಡೆದಿದ್ದೇನೆ. ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಎರಡು ಬಾರಿ ಕ್ಯಾಪ್ಟನ್ ಆಗಿದ್ದೇನೆ. ಒಮ್ಮೆ ಹೊರಗೆ ಹೋಗಿ ಬಂದಿದ್ದೇನೆ. ಈಗ ಕಳಪೆ ಕೂಡ ಅನುಭವಿಸುತ್ತಿದ್ದೇನೆ. ಇನ್ನು ಬಾಕಿ ಇರೋದು ಒಂದೇ’ ಎಂದರು ಮೈಕಲ್. ಈ ಮೂಲಕ ಕಪ್ ಗೆಲ್ಲುವುದು ಮಾತ್ರ ಉಳಿದುಕೊಂಡಿದೆ ಎಂದು ಪರೋಕ್ಷವಾಗಿ ಹೇಳಿದರು.
ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಫೈಟ್; ಕೆನ್ನೆಗೆ ಬಾರಿಸಿ ಎಲಿಮಿನೇಟ್ ಆದ ಸ್ಪರ್ಧಿ
‘ಬಿಗ್ ಬಾಸ್’ ಫಿನಾಲೆಗೆ ಇನ್ನು ಮೂರು ವಾರಗಳು ಮಾತ್ರ ಉಳಿದುಕೊಂಡಿವೆ. ‘ಬಿಗ್ ಬಾಸ್’ ಫಿನಾಲೆಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ವಾರ ಐವರು ನಾಮಿನೇಟ್ ಆಗಿದ್ದು, ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಸದ್ಯ ಪ್ರತಾಪ್ ಅವರು ಅನಾರೋಗ್ಯ ಕಾರಣದಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ