‘ವಿನ್ನರ್ ಹೆಸರು ಅಂತಿಮ ಆಗಿರುತ್ತೆ, ಇಲ್ಲಿ ಯಾವುದೂ ನಿಜವಿಲ್ಲ’; ಎಲಿಮಿನೇಟ್ ಸ್ಪರ್ಧಿಯ ಶಾಕಿಂಗ್ ಹೇಳಿಕೆ

ಮೊದಲ ದಿನ ಅನುರಾಗ್ ಅವರು ಬಿಗ್ ಬಾಸ್​ಗೆ ಬಂದರು. ಅವರು ಈಗ ಎಲಿಮಿನೇಟ್ ಆಗಿದ್ದಾರೆ. ಮಾಧ್ಯಮಗಳಿಗೆ ಸಂದರ್ಶನ ನಿಡುತ್ತಿರುವ ಅವರು ಹಲವು ಶಾಕಿಂಗ್ ಹೇಳಿಕೆ ನೀಡಿದ್ದಾರೆ. 

‘ವಿನ್ನರ್ ಹೆಸರು ಅಂತಿಮ ಆಗಿರುತ್ತೆ, ಇಲ್ಲಿ ಯಾವುದೂ ನಿಜವಿಲ್ಲ’; ಎಲಿಮಿನೇಟ್ ಸ್ಪರ್ಧಿಯ ಶಾಕಿಂಗ್ ಹೇಳಿಕೆ
ಬಿಗ್ ಬಾಸ್
Follow us
ರಾಜೇಶ್ ದುಗ್ಗುಮನೆ
|

Updated on: Jan 05, 2024 | 10:25 AM

‘ಬಿಗ್ ಬಾಸ್​’ನಲ್ಲಿ ಯಾವ ಸ್ಪರ್ಧಿ ಉಳಿಯಬೇಕು, ಯಾರು ಎಲಿಮಿನೇಟ್ ಆಗಬೇಕು ಎಂಬುದನ್ನು ನಿರ್ಧರಿಸೋದು ವೀಕ್ಷಕರು. ವೋಟಿಂಗ್ ಆಧಾರದ ಮೇಲೆ ಪ್ರತಿ ವಾರದ ಎಲಿಮಿನೇಷನ್ ನಡೆಯುತ್ತದೆ. ಆದರೆ, ಅನೇಕರಿಗೆ ಈ ಪ್ರಕ್ರಿಯೆ ಮೇಲೆ ನಂಬಿಕೆ ಇಲ್ಲ. ಈ ಕಾರಣದಿಂದಲೇ ಬಿಗ್ ಬಾಸ್ (Bigg Boss)​ ಸ್ಕ್ರಿಪ್ಟೆಡ್, ಇದು ಫೇಕ್ ಶೋ ಎಂದೆಲ್ಲ ಆರೋಪ ಹೊರಿಸಿದ್ದಿದೆ. ‘ಬಿಗ್ ಬಾಸ್ ಹಿಂದಿ ಸೀಸನ್ 17’ ಎಲಿಮಿನೇಟ್ ಸ್ಪರ್ಧಿ ಅನುರಾಗ್  ಧೋಬಾಲ್ ಇದೇ ರೀತಿಯ ಆರೋಪ ಮಾಡಿದ್ದಾರೆ.

ಮೊದಲ ದಿನ ಅನುರಾಗ್ ಅವರು ಬಿಗ್ ಬಾಸ್​ಗೆ ಬಂದರು. ಅವರು ಈಗ ಎಲಿಮಿನೇಟ್ ಆಗಿದ್ದಾರೆ. ಮಾಧ್ಯಮಗಳಿಗೆ ಸಂದರ್ಶನ ನಿಡುತ್ತಿರುವ ಅವರು ಹಲವು ಶಾಕಿಂಗ್ ಹೇಳಿಕೆ ನೀಡಿದ್ದಾರೆ.  ‘ನಾನು ಮನೆಯಲ್ಲಿ ಖಿನ್ನತೆಗೆ ಒಳಗಾಗಿದ್ದೆ. ನಿರಂತರವಾಗಿ ಅಳುತ್ತಿದೆ. ನಾನು ಮೊದಲ ದಿನದಿಂದಲೂ ಮನೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ, ಏನು ಮಾಡಲೇ ಇಲ್ಲ ಎನ್ನುವ ಮಾತನ್ನು ಕೇಳಬೇಕಾಯಿತು’ ಎಂದು ಬೇಸರ ಹೊರಹಾಕಿದ್ದಾರೆ ಅನುರಾಗ್.

‘ಫಿನಾಲೆಯಲ್ಲಿ ಯಾರು ಗೆಲ್ಲಬೇಕು ಅನ್ನೋದು ಮೊದಲೇ ಫಿಕ್ಸ್ ಆಗಿರುತ್ತದೆ. ತಮಗೆ ಇಷ್ಟವಾದ ಸ್ಪರ್ಧಿಗಳನ್ನು ಅವರು ಗೆಲ್ಲಿಸುತ್ತಾರೆ. ಪ್ರೇಕ್ಷಕರ ವೋಟ್ ಮೇಲೆ ಎಲಿಮಿನೇಷನ್ ನಡೆಯುವುದಿಲ್ಲ ಅನ್ನೋದು ನನಗೆ ಗೊತ್ತಾಗಿದೆ’ ಎಂದು ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ಬಿಗ್ ಬಾಸ್​ನಲ್ಲಿ ಕಳಪೆ ಪಟ್ಟ ಪಡೆದ ಮೈಕಲ್

‘ಬಿಗ್ ಬಾಸ್ ಮನೆ ಒಳಗೆ ಹೋಗುವ ಸಂದರ್ಭದಲ್ಲಿ ಇದೊಂದು ರಿಯಾಲಿಟಿ ಶೋ ಎಂದುಕೊಂಡಿದ್ದೆ. ಆದರೆ, ಇದರಲ್ಲಿ ಯಾವುದೂ ನಿಜವಿಲ್ಲ’ ಎಂದಿದ್ದಾರೆ ಅವರು. ಈ ಮೊದಲು ಕೂಡ ಅನೇಕ ಸ್ಪರ್ಧಿಗಳು ಈ ರೀತಿಯ ಆರೋಪ ಮಾಡಿದ್ದಿದೆ. ಕನ್ನಡದಲ್ಲಿ ಒಟಿಟಿ ಹಾಗೂ ಟಿವಿ ಸೀಸನ್​ಗೆ ಬಂದಿದ್ದ ಆರ್ಯವರ್ಧನ್ ಗುರೂಜಿ ಕೂಡ ಇದೇ ರೀತಿಯ ಆರೋಪ ಮಾಡುತ್ತಾ ಬರುತ್ತಿದ್ದಾರೆ.

ಸದ್ಯ, ‘ಬಿಗ್ ಬಾಸ್ ಹಿಂದಿ ಸೀಸನ್ 17’ರಲ್ಲಿ ಮುನಾವರ್ ಫಾರೂಕಿ, ವಿಕ್ಕಿ ಜೈನ್, ಅಂಕಿತಾ ಲೋಖಂಡೆ ಮೊದಲಾದವರು ಸ್ಪರ್ಧೆಯಲ್ಲಿದ್ದಾರೆ. ಈ ತಿಂಗಳಾಂತ್ಯಕ್ಕೆ ಹಿಂದಿ ಬಿಗ್ ಬಾಸ್ ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ