ಕೊನೆ ಆಗಲಿದೆ ‘ಗಟ್ಟಿಮೇಳ’ ಧಾರಾವಾಹಿ; ವಾಹಿನಿ ಕೇಳಿದ ಈ ಪ್ರಶ್ನೆಗೆ ಉತ್ತರ ನೀಡಿ..
‘ಗಟ್ಟಿಮೇಳ’ ಧಾರಾವಾಹಿ ಕೊನೆ ಆಗಲಿದೆ ಅನ್ನೋ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಈಗ ಅದು ನಿಜ ಆಗುತ್ತಿದೆ. ಇಂದು ಧಾರಾವಾಹಿಯ ಕೊನೆಯ ಎಪಿಸೋಡ್ ಪ್ರಸಾರ ಕಾಣಲಿದೆ.
ರಕ್ಷ್ ಹಾಗೂ ನಿಶಾ ರವಿಕೃಷ್ಣನ್ ನಟನೆಯ ‘ಗಟ್ಟಿಮೇಳ’ ಧಾರಾವಾಹಿಯ (Gattimela Serial) ಕೊನೆಯ ಎಪಿಸೋಡ್ ಇಂದು (ಜನವರಿ 5) ಪ್ರಸಾರ ಕಾಣಲಿದೆ. ಜೀ ಕನ್ನಡದ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿಯನ್ನು ಪ್ರೇಕ್ಷಕರು ಹೆಚ್ಚು ಇಷ್ಟಪಟ್ಟಿದ್ದರು. ಈಗ ಧಾರಾವಾಹಿ ಕೊನೆ ಆಗುತ್ತಿರುವ ವಿಚಾರ ವೀಕ್ಷಕರಿಗೆ ಬೇಸರ ಮೂಡಿಸಿದೆ. ಕೊನೆಯ ಎಪಿಸೋಡ್ ಪ್ರಸಾರಕ್ಕೂ ಮೊದಲು ವಾಹಿನಿವರು ವೀಕ್ಷಕರ ಬಳಿ ಪ್ರಶ್ನೆ ಒಂದನ್ನು ಕೇಳಿದ್ದಾರೆ. ಇದಕ್ಕೆ ವೀಕ್ಷಕರ ಕಡೆಯಿಂದ ಬಗೆ ಬಗೆಯ ಉತ್ತರ ಬಂದಿದೆ.
ರಕ್ಷ್ ಅವರು ವೇದಾಂತ್ ಪಾತ್ರದಲ್ಲಿ, ನಿಶಾ ಅವರು ಅಮೂಲ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದೆ. ಈ ಧಾರಾವಾಹಿ ಕೊನೆ ಆಗಲಿದೆ ಅನ್ನೋ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಈಗ ಅದು ನಿಜ ಆಗುತ್ತಿದೆ. ಇಂದು ಧಾರಾವಾಹಿಯ ಕೊನೆಯ ಎಪಿಸೋಡ್ ಪ್ರಸಾರ ಕಾಣಲಿದೆ. ಈ ಸಂದರ್ಭದಲ್ಲಿ ವಾಹಿನಿಯವರು ಒಂದು ಪ್ರಶ್ನೆ ಕೇಳಿದ್ದಾರೆ.
‘ನಿಮ್ಮ ನೆಚ್ಚಿನ ಗಟ್ಟಿಮೇಳ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ನೀವು ಏನನ್ನು ಮಿಸ್ ಮಾಡಿಕೊಳ್ತೀರಿ’ ಎಂದು ಜೀ ಕನ್ನಡ ವಾಹಿನಿ ಪೋಸ್ಟ್ ಮಾಡಿದೆ. ಇದಕ್ಕೆ ವೀಕ್ಷಕರು ಉತ್ತರ ನೀಡಿದ್ದಾರೆ. ‘ಇಂಥದ್ದೇ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೇಳೋಕೆ ನಾವು ನಾರ್ಮಲ್ ಫ್ಯಾನ್ಸ್ ಅಲ್ಲ. ಒಂದು ಸೀರಿಯಲ್ ಮುಗಿಯುತ್ತಾ ಬಂತು ಎಂದು ತಕ್ಷಣ ಮತ್ತೊಂದು ಧಾರಾವಾಹಿಗೆ ಶಿಫ್ಟ್ ಆಗಲ್ಲ. ಏಕೆಂದರೆ ನಾವು ಗಟ್ಟಿಮೇಳ ಡೈಹಾರ್ಡ್ ಫ್ಯಾನ್ಸ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
‘ಧಾರಾವಾಹಿ, ತಂಡ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತೇವೆ. ಅಮೂಲ್ಯ ಹಾಗೂ ವೇದಾಂತ್ ಜೋಡಿಯನ್ನು ಮರೆಯೋಕೆ ಆಗಲ್ಲ. ಅವರದ್ದು ಬೆಸ್ಟ್ ಜೋಡಿ’ ಎಂದು ಕೆಲವರು ಖುಷಿಯಿಂದ ಕಮೆಂಟ್ ಮಾಡಿದ್ದಾರೆ. ‘ಒಂದು ಆರಂಭ ಅಂತ ಆದಮೇಲೆ ಕೊನೆಯಾಗಲೇಬೇಕು. ಮಿಸ್ ಯೂ ಗಟ್ಟಿಮೇಳ’ ಎಂದು ಕೆಲವರು ಬರೆದುಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ‘ಗಟ್ಟಿಮೇಳ’ ಧಾರಾವಾಹಿಯ ಅಂತಿಮ ಸಂಚಿಕೆಯ ಪ್ರಚಾರಕ್ಕೆ ಜೀ ಕನ್ನಡ ಸಿದ್ಧತೆ
‘ಗಟ್ಟಿಮೇಳ’ ಆರಂಭ ಆಗಿದ್ದು 2019ರ ಮಾರ್ಚ್ ತಿಂಗಳಲ್ಲಿ. ಈಗಾಗಲೇ ಧಾರಾವಾಹಿ 1200 ಎಪಿಸೋಡ್ಗಳನ್ನು ಪೂರ್ಣಗೊಳಿಸಿದೆ. ಈ ಧಾರಾವಾಹಿ ಈಗಲೂ ಒಳ್ಳೆಯ ಟಿಆರ್ಪಿ ಪಡೆದುಕೊಳ್ಳುತ್ತಿದೆ. ನಾಲ್ಕು ಮುಕ್ಕಾಲು ವರ್ಷ ಪ್ರಸಾರ ಕಂಡ ಈ ಧಾರಾವಾಹಿ ಈಗ ಹ್ಯಾಪಿ ಎಂಡಿಂಗ್ ಕಂಡಿದೆ. ಇನ್ನುಮುಂದೆ ನಿತ್ಯ ರಾತ್ರಿ 8 ಗಂಟೆಗೆ ಜೀ ಕನ್ನಡದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಧಾರಾವಾಹಿಯನ್ನು ವೀಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ