ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಸುಳಿವಿಲ್ಲ, ಸ್ಪರ್ಧಿಗಳಿಗೆ ಬಿಗ್​ಬಾಸ್ ಕೊಟ್ಟ ಮಾಹಿತಿ ಏನು?

Bigg Boss Kannada: ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ವದಂತಿ ಹರಿದಾಡಿತ್ತು. ಅವರಿಗೆ ಫುಡ್ ಪಾಯ್ಸನ್ ಆಗಿದೆಯೆಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಆದರೂ ಎರಡು ದಿನದಿಂದ ಡ್ರೋನ್ ಪ್ರತಾಪ್ ಬಿಗ್​ಬಾಸ್​ ಮನೆಯಲ್ಲಿ ಕಾಣಿಸಿಕೊಂಡಿಲ್ಲ.

ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಸುಳಿವಿಲ್ಲ, ಸ್ಪರ್ಧಿಗಳಿಗೆ ಬಿಗ್​ಬಾಸ್ ಕೊಟ್ಟ ಮಾಹಿತಿ ಏನು?
ಡ್ರೋನ್ ಪ್ರತಾಪ್
Follow us
ಮಂಜುನಾಥ ಸಿ.
|

Updated on: Jan 05, 2024 | 11:09 PM

ಬಿಗ್​ಬಾಸ್ (BiggBoss) ಸ್ಪರ್ಧಿ ಡ್ರೋನ್ ಪ್ರತಾಪ್ (Drone Prathap) ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಹರಡಿತ್ತು, ಬಳಿಕ ಪ್ರತಾಪ್​ಗೆ ಚಿಕಿತ್ಸೆ ನೀಡಿದ ವೈದ್ಯರು, ಪ್ರತಾಪ್​ಗೆ ಫುಡ್ ಪಾಯ್ಸನ್ ಆಗಿದೆಯೆಂದು ಸ್ಪಷ್ಟನೆ ನೀಡಿದರು. ಪ್ರತಾಪ್​ಗೆ ಮಾಡಲಾಗಿರುವ ವಿವಿಧ ರೀತಿಯ ಪರೀಕ್ಷೆಗಳ ವರದಿಗಳು ಸಹ ಬಹಿರಂಗಗೊಂಡವು. ಕೆಲವು ಸುದ್ದಿಗಳ ಪ್ರಕಾರ ಚಿಕಿತ್ಸೆಯ ಬಳಿಕ ಪ್ರತಾಪ್ ಅವರನ್ನು ಮತ್ತೆ ಬಿಗ್​ಬಾಸ್ ಮನೆಗೆ ಕಳಿಸಲಾಗಿದೆ ಎನ್ನಲಾಗಿತ್ತು. ಆದರೆ ಪ್ರತಾಪ್ ಬಿಗ್​ಬಾಸ್ ಮನೆಗೆ ಬಂದಿಲ್ಲ.

ಗುರುವಾರದ ಎಪಿಸೋಡ್​ನಲ್ಲಿ ಕೆಲ ಹೊತ್ತು ಮಾತ್ರವೇ ಪ್ರತಾಪ್ ಕಾಣಿಸಿಕೊಂಡರು (ಬುಧವಾರ ರಾತ್ರಿ) ಸ್ಪರ್ಧಿಗಳು ಗುರುವಾರ ಎದ್ದಾಗ ಡ್ರೋನ್ ಪ್ರತಾಪ್ ಮನೆಯಲ್ಲಿರಲಿಲ್ಲ. ಮನೆಯ ಸದಸ್ಯರು ಸಹ ಪ್ರತಾಪ್ ಬಗ್ಗೆ ಚರ್ಚೆ ಮಾಡಿದ್ದಾಗಿ ಎಪಿಸೋಡ್​ನಲ್ಲಿ ತೋರಿಸಲಿಲ್ಲ. ಇಂದಿನ (ಶುಕ್ರವಾರ)ದ ಎಪಿಸೋಡ್​ನಲ್ಲಿ ಸಹ ಪ್ರತಾಪ್ ಮನೆಯಲ್ಲಿ ಕಂಡು ಬರಲಿಲ್ಲ.

ಶುಕ್ರವಾರದ ಎಪಿಸೋಡ್​ನಲ್ಲಿ ಸಂಗೀತಾ ಮನೆಯ ಹೊಸ ಕ್ಯಾಪ್ಟನ್ ಆದ ಬಳಿಕ ಉತ್ತಮ-ಕಳಪೆ ಪ್ರಕ್ರಿಯೆ ನಡೆಸಲಾಯ್ತು. ಆ ವೇಳೆ ಬಿಗ್​ಬಾಸ್ ಕಡೆಯಿಂದ ಸ್ಪರ್ಧಿಗಳಿಗೆ ಪತ್ರವೊಂದು ಬಂತು. ಅದರಲ್ಲಿ ಡ್ರೋನ್ ಪ್ರತಾಪ್​ ಬಗ್ಗೆ ಮಾಹಿತಿ ಇತ್ತು. ಡ್ರೋನ್ ಪ್ರತಾಪ್ ಎರಡು ಮೂರು ದಿನದಿಂದ ಸರಿಯಾಗಿ ಊಟ ಮಾಡದೆ ದುರ್ಬಲರಾಗಿದ್ದಾರೆ. ಪ್ರತಾಪ್ ಅವರಿಗೆ ಫುಡ್ ಪಾಯ್ಸನ್ ಆಗಿದೆ ಎಂದು ವೈದ್ಯರು ಸ್ಪಷ್ಟೀಕರಣ ನೀಡಿದ್ದಾರೆ. ಹಾಗಾಗಿ ಮನೆಯ ಸ್ಪರ್ಧಿಗಳು ಪ್ರತಾಪ್ ಅನ್ನು ಹೊರತುಪಡಿಸಿ ಉತ್ತಮ ಮತ್ತು ಕಳಪೆ ಪ್ರಕ್ರಿಯೆ ನಡೆಸಬೇಕು ಎಂದು ಪತ್ರದಲ್ಲಿ ಬರೆದಿದ್ದನ್ನು ನಮ್ರತಾ ಓದಿದರು.

ಇದನ್ನೂ ಓದಿ:ಮಧ್ಯರಾತ್ರಿ ಆಸ್ಪತ್ರೆಗೆ ಬಂದಾಗ ಹೇಗಿತ್ತು ಡ್ರೋನ್ ಪ್ರತಾಪ್ ಸ್ಥಿತಿ: ವೈದ್ಯರು ಕೊಟ್ಟ ಮಾಹಿತಿ

ಅದಾದ ಬಳಿಕ ಮೈಖಲ್ ಕಳಪೆ ಎಂದಾಗಿ ಅವರನ್ನು ಜೈಲಿಗೆ ಕಳಿಸಲಾಯ್ತು. ಮೈಖಲ್ ಜೊತೆ ಮಾತನಾಡುತ್ತಿದ್ದ ವಿನಯ್, ಪ್ರತಾಪ್​ಗೆ ಬಹಳ ಫುಡ್ ಪಾಯ್ಸನ್ ಆದಂತಿದೆ. ಅವನು ಸರಿಯಾಗಿ ಊಟವೇ ಮಾಡುತ್ತಿರಲಿಲ್ಲ, ಈಗ ಮಾಡುತ್ತೇನೆ ಆಗ ಮಾಡುತ್ತೇನೆ ಎನ್ನುತ್ತಲೇ ಇದ್ದ. ಊಟ ಮಾಡುವಾಗ ಸಹ ಹಲವು ಬಾರಿ ಊಟವನ್ನು ವೇಸ್ಟ್ ಮಾಡಿ ಬಿಸಾಡುತ್ತಿದ್ದ. ಮೊನ್ನೆ ಕೊಟ್ಟಿದ್ದ ಕ್ಯಾಬೇಜ್, ಗೀ ರೈಸ್ ಎಲ್ಲವನ್ನೂ ಪೂರ್ತಿಯಾಗಿ ತಿನ್ನದೆ ಬುಟ್ಟಿಗೆ ಎಸೆದಿದ್ದ ಎಂದರು.

ಪ್ರತಾಪ್ ಗೆ ಫುಡ್ ಪಾಯ್ಸನ್ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಈಗ ಪ್ರತಾಪ್ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಪ್ರತಾಪ್ ಮತ್ತೆ ಬಿಗ್​ಬಾಸ್ ಮನೆಗೆ ಬರುತ್ತಾರೆಯೇ ಇಲ್ಲವೋ ಎಂಬ ಅನುಮಾನವೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ