AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್​ಗೆ ಕಾಡಿದೆ ಎಲಿಮಿನೇಷನ್ ಭಯ; ಶೈನ್​ ಶೆಟ್ಟಿ ಮಾತನ್ನು ಗಂಭೀರವಾಗಿ ಸ್ವೀಕರಿಸಿದ ಆನೆ

‘ಬಿಗ್ ಬಾಸ್​ನಲ್ಲಿ ಅಹಿತಕರ ಘಟನೆ ನಡೆದರೆ ಬಿಗ್ ಬಾಸ್ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ’ ಎಂದು ಶೈನ್ ಶೆಟ್ಟಿ ಹೇಳಿದ್ದರು. ಇದರಿಂದ ವಿನಯ್​​ಗೆ ಭಯ ಆಗಿದೆ.

ವಿನಯ್​ಗೆ ಕಾಡಿದೆ ಎಲಿಮಿನೇಷನ್ ಭಯ; ಶೈನ್​ ಶೆಟ್ಟಿ ಮಾತನ್ನು ಗಂಭೀರವಾಗಿ ಸ್ವೀಕರಿಸಿದ ಆನೆ
ವಿನಯ್
ರಾಜೇಶ್ ದುಗ್ಗುಮನೆ
|

Updated on: Dec 26, 2023 | 7:57 AM

Share

‘ಬಿಗ್ ಬಾಸ್’ ಮನೆಯಲ್ಲಿ ವಿನಯ್ ಗೌಡ (Vinay Gowda) ಅವರು ಫಿನಾಲೆ ತಲುಪಿ ಕಪ್ ಎತ್ತಬೇಕು ಎಂದು ಕನಸು ಇಟ್ಟುಕೊಂಡಿದ್ದಾರೆ. ಮೊದಲ ದಿನದಿಂದಲೂ ಈ ಪ್ರಯತ್ನದಲ್ಲಿ ಅವರಿದ್ದಾರೆ. ಆದರೆ, ಅವರು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಅವರು ಅಗ್ರೆಸ್ಸಿವ್ ಆಗಿ ಆಡಿದ್ದರಿಂದ ಸಾಕಷ್ಟು ಹಿನ್ನಡೆ ಆಯಿತು. ಅವರಿಗೆ ಹಾಗೂ ಎದುರಾಳಿ ತಂಡದವರಿಗೆ ಗಾಯಗಳಾಗಿತ್ತು. ಈ ವಿಚಾರದಲ್ಲಿ ಅವರಿಗೆ ಯಾವುದೇ ಬೇಸರ ಇರಲಿಲ್ಲ. ‘ನನ್ನ ಆಟವನ್ನು ನಾನು ಬದಲಿಸಿಕೊಳ್ಳಲ್ಲ’ ಎಂದು ವಿನಯ್ ಹೇಳುತ್ತಿದ್ದರು. ಆದರೆ, ಈಗ ಅವರು ನಿರ್ಧಾರ ಬದಲಿಸಿದ್ದಾರೆ. ಇದಕ್ಕೆ ಶೈನ್ ಶೆಟ್ಟಿ ಕೊಟ್ಟ ಎಚ್ಚರಿಕೆ ಕಾರಣ ಎಂದು ಕೆಲವರು ಊಹಿಸಿದ್ದಾರೆ.

ಕಳೆದ ವಾರದ ವೀಕೆಂಡ್ ಎಪಿಸೋಡ್​ಗೆ ಸುದೀಪ್ ಆಗಮಿಸಿರಲಿಲ್ಲ. ಹೀಗಾಗಿ, ಸುದೀಪ್ ಬದಲು ಮಾಜಿ ಸ್ಪರ್ಧಿಗಳು ದೊಡ್ಮನೆಗೆ ಅತಿಥಿಗಳಾಗಿ ಬಂದಿದ್ದರು. ಶೈನ್ ಶೆಟ್ಟಿ ಅವರು ಬಂದು ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದರು. ‘ಅಗ್ರೆಸ್ ಆಗಿ ಆಡಿದರೆ ಪರಿಣಾಮ ಸರಿ ಇರಲ್ಲ. ಎಚ್ಚರಿಕೆಯಿಂದ ಆಡಿ. ಒಂದೊಮ್ಮೆ ಬಿಗ್ ಬಾಸ್​ನಲ್ಲಿ ಅಹಿತಕರ ಘಟನೆ ನಡೆದರೆ ಬಿಗ್ ಬಾಸ್ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ’ ಎಂದು ಶೈನ್ ಶೆಟ್ಟಿ ಹೇಳಿದ್ದರು. ಇದರಿಂದ ವಿನಯ್​​ಗೆ ಭಯ ಆಗಿದೆ.

‘ಕಠಿಣ ಕ್ರಮ ಎಂದರೆ ಎಲಿಮಿನೇಷನ್ ಕೂಡ ಇರಬಹುದು ಅಥವಾ ಅದಕ್ಕೂ ಮೇಲೆ ಏನಾದರೂ ಮಾಡಬಹುದು’ ಎಂದು ಶೈನ್ ಶೆಟ್ಟಿ ಸೂಕ್ಷ್ಮವಾಗಿ ಹೇಳಿದ್ದರು. ಒಂದೊಮ್ಮೆ ಸಿಟ್ಟಲ್ಲಿ ಆಡಿ ಯಾರಿಗಾದರೂ ತೊಂದರೆ ಆದರೆ ದೊಡ್ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಬರಬಹುದು ಎಂದು ವಿನಯ್​ಗೆ ಅನಿಸಿದೆ. ಹೀಗಾಗಿ ಅವರು ಆಟದ ಶೈಲಿ ಬದಲಿಸಿದ್ದಾರೆ.

ಇದನ್ನೂ ಓದಿ: ನಾಮಿನೇಷನ್ ಅಧಿಕಾರವನ್ನು ಸಂಗೀತಾಗೆ ನೀಡಿದ ವಿನಯ್; ಬಿಗ್ ಬಾಸ್​ನಲ್ಲಿ ಅಚ್ಚರಿಯ ಬೆಳವಣಿಗೆ

ಬಿಗ್ ಬಾಸ್ ಇನ್ನು ಕೆಲವೇ ವಾರಗಳಲ್ಲಿ ಕೊನೆಗೊಳ್ಳಲಿದೆ. ಇದು ಕೂಡ ವಿನಯ್ ಅವರನ್ನು ಪ್ರಭಾವಿಸಿದೆ. ಅವರು ದೊಡ್ಮನೆಯಿಂದ ಹೊರ ಹೋಗುವ ಮೊದಲು ಎಲ್ಲರ ಜೊತೆಗೂ ಚೆನ್ನಾಗಿ ಇರಲು ನಿರ್ಧರಿಸಿದ್ದಾರೆ. ಹೀಗಾಗಿ, ಗಂಭೀರವಾಗಿ ಆರೋಪ ಮಾಡಿದರೂ ಅದನ್ನು ಹಾಸ್ಯದ ರೂಪದಲ್ಲಿ ಸ್ವೀಕರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ