Sign In

By signing in or creating an account, you agree with Associated Broadcasting Company's Terms & Conditions and Privacy Policy.

200 ಎಪಿಸೋಡ್​ ಪೂರ್ಣಗೊಳಿಸಿದ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ತಂಡಕ್ಕೆ ಖುಷಿಯೋ ಖುಷಿ

‘ಜೀ ಕನ್ನಡ’ ವಾಹಿನಿಯ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ಮಧ್ಯಮ ವರ್ಗದ ಜನರ ಬದುಕಿನ ಕಥೆ ಇದೆ. ಈ ಕಹಾನಿಯನ್ನು ಹೇಳುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಭಗವಂತನ ಪಾತ್ರದ ಮೂಲಕ ವೀಕ್ಷಕರಿಗೆ ತಿಳಿಸಲಾಗುತ್ತಿದೆ. ಈ ಎಲ್ಲ ವಿಶೇಷಗಳಿಂದಾಗಿ ಕಿರುತೆರೆ ವೀಕ್ಷಕರಿಗೆ ಈ ಸೀರಿಯಲ್​ ಇಷ್ಟ ಆಗಿದೆ.

200 ಎಪಿಸೋಡ್​ ಪೂರ್ಣಗೊಳಿಸಿದ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ತಂಡಕ್ಕೆ ಖುಷಿಯೋ ಖುಷಿ
ಭೂಮಿಗೆ ಬಂದ ಭಗವಂತ
Follow us
ಮದನ್​ ಕುಮಾರ್​
|

Updated on: Dec 26, 2023 | 6:24 PM

ಕನ್ನಡ ಕಿರುತೆರೆಯಲ್ಲಿ ಹಲವು ಡಿಫರೆಂಟ್​ ಸೀರಿಯಲ್​ಗಳು ಪ್ರಸಾರ ಆಗುತ್ತಿವೆ. ಪೈಪೋಟಿಯ ಮಧ್ಯೆ ನೂರಾರು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ಒಂದು ಸವಾಲು. ‘ಜೀ ಕನ್ನಡ’ (Zee Kannada) ವಾಹಿನಿಯಲ್ಲಿ ಬಿತ್ತರ ಆಗುತ್ತಿರುವ ‘ಭೂಮಿಗೆ ಬಂದ ಭಗವಂತ’ (Bhoomige Banda Bhagavantha) ಧಾರಾವಾಹಿ ಈಗ 200 ಎಪಿಸೋಡ್​ಗಳನ್ನು ಪೂರೈಸಿದೆ. ಬೇರೆ ಬೇರೆ ಕಾರಣಗಳಿಂದಾಗಿ ಪ್ರೇಕ್ಷಕರಿಗೆ ಈ ಸೀರಿಯಲ್​ ಇಷ್ಟ ಆಗಿದೆ. ನವೀನ್ ಕೃಷ್ಣ (Zee Kannada), ಕೃತಿಕಾ ರವೀಂದ್ರ ಮುಂತಾದವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಎಲ್ಲ ವಯೋಮಾನದ ವೀಕ್ಷಕರಿಗೂ ಈ ಧಾರಾವಾಹಿ ಇಷ್ಟ ಆಗಿದೆ ಎಂದು ತಂಡ ಹೇಳಿಕೊಂಡಿದೆ.

‘ಜೀ ಕನ್ನಡ’ ವಾಹಿನಿಯಲ್ಲಿ ರಿಯಾಲಿಟಿ ಶೋಗಳ ಜೊತೆಗೆ ಸೀರಿಯಲ್​ಗೂ ಹೆಚ್ಚು ಮಹತ್ವ ನೀಡಲಾಗುತ್ತದೆ. ಪ್ರೇಕ್ಷಕರಿಗೆ ಮಸ್ತ್​ ಮನರಂಜನೆ ನೀಡುವ ಹಲವು ಸೀರಿಯಲ್​ಗಳು ಪ್ರಸಾರ ಕಾಣುತ್ತಿವೆ. ಆ ಪೈಕಿ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಗೆ ಕೂಡ ಪ್ರೇಕ್ಷಕರು ಮನ ಸೋತಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಈ ಸೀರಿಯಲ್​ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: Dinesh Phadnis: ‘ಸಿಐಡಿ’ ಧಾರಾವಾಹಿ ನಟ ದಿನೇಶ್​ ಫಡ್ನಿಸ್​ ಇನ್ನಿಲ್ಲ; ಲಿವರ್​ ಸಮಸ್ಯೆಯಿಂದ ನಿಧನ

‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ಮಧ್ಯಮ ವರ್ಗದ ಜನರ ಬದುಕಿನ ಕಥೆ ಇದೆ. ಈ ಕಹಾನಿಯನ್ನು ಹೇಳುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಭಗವಂತನ ಪಾತ್ರದ ಮೂಲಕ ವೀಕ್ಷಕರಿಗೆ ತಿಳಿಸಲಾಗುತ್ತಿದೆ. ಈ ಎಲ್ಲ ವಿಶೇಷಗಳಿಂದಾಗಿ ಕಿರುತೆರೆ ವೀಕ್ಷಕರಿಗೆ ಈ ಸೀರಿಯಲ್​ ಇಷ್ಟ ಆಗಿದೆ. 200 ಸಂಚಿಕೆಗಳನ್ನು ಪೂರೈಸಿರುವ ಖುಷಿಯಲ್ಲಿ ಈ ತಂಡ ಮುನ್ನುಗ್ಗುತ್ತಿದೆ.

‘ತಾಂಡವ ಪ್ರೊಡಕ್ಷನ್’ ನಿರ್ಮಾಣ ಸಂಸ್ಥೆಯ ಮೂಲಕ ಮೂಡಿಬರುತ್ತಿರುವ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಗೆ ಆರೂರು ಜಗದೀಶ್ ಅವರು ಪ್ರಧಾನ ನಿರ್ದೇಶಕರಾಗಿದ್ದಾರೆ. ಸಂಚಿಕೆ ನಿರ್ದೇಶಕರಾಗಿ ಕುಮಾರ್ ಕೆರಗೋಡು ಕೆಲಸ ಮಾಡುತ್ತಿದ್ದಾರೆ. ನವೀನ್ ಕೃಷ್ಣ, ಕೃತಿಕಾ ರವೀಂದ್ರ ಜೊತೆ ಉಮೇಶ್ ಎಂ.ಎಸ್, ಕಾರ್ತಿಕ್ ಸಾಮಗ, ಅನುರಾಗ್, ಅಂಕಿತಾ ಜಯರಾಮ್, ಅಶ್ವಿನಿ, ಶೋಧನ್ ಬಸ್ರೂರ್ ಮುಂತಾದವರು ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು