ಮಗನ ವೈರಿ ಸಂಗೀತಾಗೆ ಮೈಖಲ್​ ತಾಯಿ ಕೊಟ್ಟರು ವಿಶೇಷ ಉಡುಗೊರೆ

Bigg Boss Kannada: ಬಿಗ್​ಬಾಸ್ ಮನೆಗೆ ಬಂದಿದ್ದ ಮೈಖಲ್​ರ ತಾಯಿ ವಿಜಿ, ಸಂಗೀತಾ ಹಾಗೂ ಮಗನ ನಡುವೆ ಸಂಧಾನ ಮಾಡಿದ್ದಾರೆ. ಸಂಗೀತಾಗೆ ವಿಶೇಷ ಉಡುಗೊರೆಯೊಂದನ್ನು ಸಹ ನೀಡಿದ್ದಾರೆ.

ಮಗನ ವೈರಿ ಸಂಗೀತಾಗೆ ಮೈಖಲ್​ ತಾಯಿ ಕೊಟ್ಟರು ವಿಶೇಷ ಉಡುಗೊರೆ
Follow us
|

Updated on:Dec 26, 2023 | 11:40 PM

ಮಂಗಳವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್ (Bigg Boss) ಮನೆಗೆ ಸ್ಪರ್ಧಿಗಳ ಕುಟುಂಬ ಸದಸ್ಯರು ಆಗಮಿಸಿದರು. ಮೊದಲಿಗೆ ಹಾಲಿ ಕ್ಯಾಪ್ಟನ್ ನಮ್ರತಾರ ತಾಯಿ ಆಗಮಿಸಿದರು. ತಾಯಿಯ ಆಗಮನದಿಂದ ಬಹಳ ಭಾವುಕಗೊಂಡರು ನಮ್ರತಾ, ಅಮ್ಮನನ್ನು ನೋಡಿದಂತೆ ಕಣ್ಣೀರು ಹಾಕಿದರು. ಹಲವು ಹೊತ್ತು ಪರಸ್ಪರ ಮಾತನಾಡಿದರು. ನಮ್ರತಾರ ತಾಯಿ ಮನೆಯ ಸದಸ್ಯರಿಗಾಗಿ ಇಡ್ಲಿ, ಹಿದಿಕಿದ ಬೇಳೆ ಸಾರು ಇನ್ನಿತರೆ ತಿಂಡಿಗಳನ್ನು ಮಾಡಿಕೊಂಡು ಬಂದಿದ್ದರು.

ಅದಾದ ಬಳಿಕ ವರ್ತೂರು ಸಂತು ಅವರ ತಾಯಿ ಬಂದರು. ಇದು ಎರಡನೇ ಬಾರಿ ವರ್ತೂರು ಅವರ ತಾಯಿ ಮನೆಗೆ ಬಂದಿದ್ದು, ಮಗನ ಜೊತೆಗೆ ಮನೆಯ ಸದಸ್ಯರಿಗೆಲ್ಲ ತಮ್ಮದೇ ಶೈಲಿಯಲ್ಲಿ ಬುದ್ಧಿವಾದ ಹೇಳಿದರು. ವಿನಯ್ ಅನ್ನು ವಿಲನ್ ಎಂದು ಸಹ ಕರೆದರು. ವರ್ತೂರು ಸಂತುಗೆ ತಲೆಗೆ ಎಣ್ಣೆ ಹಾಕಿ, ಹೊಸ ಬಟ್ಟೆ ಕೊಟ್ಟು ಹೋದರು.

ಆ ಬಳಿಕ ತುಕಾಲಿ ಸಂತು ಹೆಂಡತಿ ಮಾನಸ ಮನೆಗೆ ಬಂದು ಹಂಗಾಮ ಎಬ್ಬಿಸಿದರು. ತುಕಾಲಿಗೆ ಮನೆಯೆಲ್ಲ ಓಡಾಡಿಸಿಕೊಂಡು ಹೊಡೆದರು. ಪರಸ್ಪರ ಹಾಸ್ಯ ಮಾಡುತ್ತಾ ಮನೆಯ ಸದಸ್ಯರಿಗೆ ಒಳ್ಳೆ ಮನೊರಂಜನೆ ಒದಗಿಸಿದರು. ಜೊತೆಗೆ ತುಕಾಲಿ ಬಗ್ಗೆ ಕೆಲವು ಅಪರೂಪದ ಸಂಗತಿಗಳನ್ನು ಹೇಳಿ ಭಾವುಕರಾದರು. ಸಂತು ಸಹ ಪತ್ನಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು.

ಇದನ್ನೂ ಓದಿ:ವೈಲ್ಡ್​ ಕಾರ್ಡ್ ಎಂಟ್ರಿ ಮೂಲಕ ಬಿಗ್​ಬಾಸ್ ಮನೆಗೆ ಹೋಗಿದ್ದ ಅವಿ ಪಡೆದ ಸಂಭಾವನೆ ಎಷ್ಟು?

ಮಾನಸಾ ಮನೆಯಲ್ಲಿರುವಂತೆ ಮನೆಗೆ ಬಂದರು ಮೈಖಲ್​ರ ತಾಯಿ. ಕ್ರಿಸ್​ಮಸ್​ಗಾಗಿ ಮನೆಯ ಸದಸ್ಯರಿಗೆ ಚಾಲಕೇಟ್ ಇನ್ನಿತರೆ ಐಟಂಗಳನ್ನು ತಂದಿದ್ದರು. ಎಲ್ಲರನ್ನೂ ಬಹಳ ಪ್ರೀತಿಯಿಂದ ಮಾತನಾಡಿಸಿದರು. ಸಂಗೀತಾ ಜೊತೆ ಮಾತನಾಡುತ್ತಾ, ನಿಮ್ಮಿಬ್ಬರ ನಡುವೆ ಶಾಂತಿಧೂತೆಯಾಗಿ ನಾನು ಬಂದಿದ್ದೇನೆ, ನಿಮ್ಮಿಬ್ಬರ ನಡುವೆ ಸಂಧಾನ ಮಾಡಲೆಂದು ನಾನು ಪನ್ನೀರ್ ತಂದಿದ್ದೇನೆ. ಪನ್ನೀರ್​ಗಾಗಿ ಎಷ್ಟು ಅತ್ತಿದ್ದೆ ನೀನು ಎಂದು ಹೇಳಿ, ಪನ್ನೀರ್ ನೀಡಿದರು.

ಮೈಖಲ್​ಗೂ ಸಹ ಬುದ್ಧಿವಾದ ಹೇಳಿದ ಅವರ ತಾಯಿ, ಸಂಗೀತಾ ಜೊತೆ ಸ್ನೇಹ ಬೆಳೆಸಿಕೋ, ಕೋಪ ಪ್ರದರ್ಶಿಸಬೇಡ, ಬುದ್ಧಿಯಿಂದ ಆಡುವುದು ಬೇಡ ಹೃದಯದಿಂದ ಆಡು. ಮಹಿಳೆಯರ ಮೇಲೆ ಜಗಳ ಮಾಡಬೇಡ. ಯಾರ ಮೇಲೂ ಜಗಳ ಮಾಡಬೇಡ ಎಂದರು. ಹೋಗುವಾಗಲೂ ಸಹ ಮನೆಯ ಹುಡುಗರಿಗೆ ಮಹಿಳೆಯರ ಮೇಲೆ ಜಗಳ ಮಾಡಬೇಡಿ, ಅವರಿಗೆ ಬೈಯ್ಯಬೇಡಿ ಎಂದು ಬುದ್ಧಿವಾದ ಹೇಳಿ ಹೋದರು. ಮೈಖಲ್​ರ ತಾಯಿಯನ್ನು ಸಂಗೀತಾ ಅಪ್ಪಿಕೊಂಡು ಬೀಳ್ಕೊಟ್ಟರು. ಮಾನಸ, ತನಗೆ ಸಂಗೀತಾ ಕ್ಯಾಪ್ಟನ್ ಆಗಬೇಕು ಅಂದರೆ, ಮೈಖಲ್​ರ ತಾಯಿ, ತನಿಷಾ ಈ ಬಾರಿ ಕ್ಯಾಪ್ಟನ್ ಆಗಲಿ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:39 pm, Tue, 26 December 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ