ಬಿಗ್​ಬಾಸ್ ಮನೆಯಲ್ಲಿ ತುಕಾಲಿ ಸಂತು ಬಿತ್ತು ಹೆಂಡತಿ ಕೈಲಿ ಏಟು

Tukali Santhosh: ಕುಟುಂಬ ಸದಸ್ಯರು ಮನೆಗೆ ಬರಲಿದ್ದಾರೆ ಎಂಬ ಸೂಚನೆ ಸಿಕ್ಕಾಗಿನಿಂದಲೂ ತುಕಾಲಿ ಸಂತೋಷ್​, ನನ್ನ ಹೆಂಡತಿಯನ್ನು ಮಾತ್ರ ಕಳಿಸಬೇಡಿ ಎನ್ನುತ್ತಿದ್ದರು. ಆದರೆ ಅವರ ಹೆಂಡತಿ ಮಾನಸ ಮನೆ ಒಳಗೆ ಬಂದಾಗಲೇ ಗೊತ್ತಾಗಿದ್ದು, ತುಕಾಲಿ ಹಾಗೆ ಏಕೆ ಹೇಳುತ್ತಿದ್ದರೆಂದು!

ಬಿಗ್​ಬಾಸ್ ಮನೆಯಲ್ಲಿ ತುಕಾಲಿ ಸಂತು ಬಿತ್ತು ಹೆಂಡತಿ ಕೈಲಿ ಏಟು
ಬಿಗ್​ಬಾಸ್ ಸಂತು
Follow us
ಮಂಜುನಾಥ ಸಿ.
|

Updated on:Dec 26, 2023 | 11:18 PM

ತುಕಾಲಿ ಸಂತೋಷ್ (Tukali Santhosh), ಬಿಗ್​ಬಾಸ್ (Bigg Boss)  ಮನೆಯಲ್ಲಿ ಎಲ್ಲರ ಬಗ್ಗೆಯೂ ಕಾಮಿಡಿ ಮಾಡುತ್ತಾ, ಎಲ್ಲರ ಕಾಲೆಳೆಯುತ್ತಾ ಬಿಂದಾಸ್ ಆಗಿದ್ದಾರೆ. ಬೇಕಾದ ಜಗಳವೂ ಆಡುತ್ತಾರೆ, ನಮ್ರತಾ, ತನಿಷಾ ಅವರೊಟ್ಟಿಗೆ ಫ್ಲರ್ಟ್ ಮಾಡುತ್ತಾ ಕಾಲಕಳೆಯುತ್ತಿದ್ದಾರೆ. ಆದರೆ ಮಂಗಳವಾರದ ಎಪಿಸೋಡ್​ನಲ್ಲಿ ಮನೆಯ ಸದಸ್ಯರ ಕುಟುಂಬದವರು ಒಬ್ಬೊಬ್ಬರಾಗಿ ಬಿಗ್​ಬಾಸ್ ಮನೆಯೊಳಗೆ ಬರುತ್ತಿದ್ದರು. ಕುಟುಂಬ ಸದಸ್ಯರು ಮನೆಗೆ ಬರುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ತುಕಾಲಿ ಸಂತು ‘ಬಿಗ್​ಬಾಸ್ ದಯವಿಟ್ಟು ನನ್ನ ಹೆಂಡತಿಯನ್ನು ಕಳಿಸಬೇಡಿ’ ಎಂದು ಕೇಳಿಕೊಳ್ಳುತ್ತಿದ್ದರು. ಅಂತಿಮವಾಗಿ ಅವರ ಹೆಂಡತಿ ಮಾನಸ ಒಳಗೆ ಬಂದ ಬಳಿಕ ಗೊತ್ತಾಯ್ತು ಅವರು ಯಾಕೆ ಹಾಗೆ ಹೇಳಿದರೆಂದರು.

ತುಕಾಲಿ ಸಂತು ಅವರ ಮಡದಿ, ಕೈಯಲ್ಲಿ ಕೋಲು ಹಿಡಿದುಕೊಂಡೇ ಮನೆಯ ಒಳಗೆ ಬಂದವರು. ಒಳಗೆ ಬಂದವರೇ ಪಾಸ್ ಆಗಿದ್ದ ತುಕಾಲಿಗೆ ಬಾರಿಸಲು ಆರಂಭಿಸಿದರು. ತುಕಾಲಿ ಮನೆಯ ಒಳಗೆಲ್ಲ ಓಡಾಡಿದರೂ ಬಿಡದೆ ಓಡಾಡಿಸಿಕೊಂಡು ಹೊಡೆದರು ಅವರ ಮಡದಿ.

ಇದನ್ನೂ ಓದಿ:ವೈಲ್ಡ್​ ಕಾರ್ಡ್ ಎಂಟ್ರಿ ಮೂಲಕ ಬಿಗ್​ಬಾಸ್ ಮನೆಗೆ ಹೋಗಿದ್ದ ಅವಿ ಪಡೆದ ಸಂಭಾವನೆ ಎಷ್ಟು?

ಅಷ್ಟಕ್ಕೆ ನಿಲ್ಲದ ತುಕಾಲಿ ಅವರ ಮಡದಿ ಮನೆಯ ಸದಸ್ಯರ ಎದುರು ತುಕಾಲಿಯ ಸಖತ್ ಕಾಲೆಳೆದರು. ಇಬ್ಬರು ಮಾತಿನಲ್ಲಿಯೇ ಪರಸ್ಪರರ ಕಾಲೆಳೆದು ಮನೆಯ ಸದಸ್ಯರಿಗೆ ಸಖತ್ ಮನೊರಂಜನೆ ಒದಗಿಸಿದರು. ಎಮ್ಮೆ ಮೇಯಿಸಿಕೊಂಡು ಬರುತ್ತಿದ್ದ ಎಂಬ ಡೈಲಾಗ್​ಗಂತೂ ಮನೆಯ ಸದಸ್ಯರು ಬಿದ್ದು-ಬಿದ್ದು ನಕ್ಕರು. ಮನೆಯ ಸ್ಪರ್ಧಿಗಳೊಟ್ಟಿಗೆ ಊಟ ಮಾಡಿದ ಮಾನಸ, ತುಕಾಲಿ ಹಾಗೂ ವರ್ತೂರು ಮನೆಯ ಸದಸ್ಯರ ಬಗ್ಗೆ ಆಡಿಕೊಂಡ ಕೆಲವು ಮಾತುಗಳನ್ನು ಹೇಳಿ, ಗುಟ್ಟು ರಟ್ಟು ಮಾಡಿದರು.

ತುಕಾಲಿ ಹಾಗೂ ಮಾನಸಾರ ಜೋಡಿಯ ಆಪ್ತತೆಯನ್ನು ಮೆಚ್ಚಿಕೊಂಡ ಬಿಗ್​ಬಾಸ್, ತುಕಾಲಿ ಬಗ್ಗೆ ಯಾರಿಗೂ ಗೊತ್ತಿರದ ವಿಷಯಗಳನ್ನು ಹೇಳಿರಿ ಎಂದು ಅವಕಾಶ ಮಾಡಿಕೊಟ್ಟರು. ಆಗ ತುಸು ಭಾವುಕವಾದ ಮಾನಸ, ‘‘ನನಗೆ ಏನೆಂದರೆ ಏನೂ ಗೊತ್ತಿರಲಿಲ್ಲ, ಟೀ ಮಾಡುವುದು ಸಹ ಗೊತ್ತಿರಲಿಲ್ಲ, ಬಹಳ ದಡ್ಡಿ ನಾನು ಆದರೆ ತುಕಾಲಿ ಎಲ್ಲವನ್ನೂ ಕಲಿಸಿದರು. ತುಕಾಲಿಗೆ ಅಪ್ಪ-ಅಮ್ಮ ಇಲ್ಲ, ಆದರೆ ನನ್ನ ತಂದೆ-ತಾಯಿಯನ್ನು ತನ್ನ ಪೋಷಕರು ಎಂಬಂತೆ ಸಾಕುತ್ತಿದ್ದಾರೆ. ಯಾವುದಕ್ಕೂ ಕಡಿಮೆ ಮಾಡಿಲ್ಲ. ಮನೆಯಲ್ಲಿ ನಾನು ಸ್ವಲ್ಪ ಜಗಳ ಹೆಚ್ಚು ಆದರೆ ಇಬ್ಬರೂ ಬಹಳ ಚೆನ್ನಾಗಿದ್ದೇವೆ, ಸಂತು ಬಹಳ ಚೆನ್ನಾಗಿ ಎಲ್ಲದಕ್ಕೂ ಹೊಂದಿಕೊಂಡು ಹೋಗುತ್ತಾರೆ. ಅವರು ನನಗೆ ಸಿಕ್ಕಿರುವುದು ಅದೃಷ್ಟ’’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:17 pm, Tue, 26 December 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ