AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಟಿಗೆ ಮುತ್ತಿಟ್ಟ ಸಂತೋಷ್; ವಾಕರಿಕೆ ಮಾಡಿಕೊಂಡ ಕಾರ್ತಿಕ್

ಬಿಗ್ ಬಾಸ್ ಮನೆಯಲ್ಲಿ ಹೊಸ ಚಟುವಟಿಕೆ ನೀಡಲಾಯಿತು. ಅದುವೇ ಪೌಸ್ ಹಾಗೂ ಪ್ಲೇ. ಪೌಸ್ ಎಂದಾಗ ಎಲ್ಲರೂ ಹೇಗಿದ್ದಾರೋ ಹಾಗೆಯೇ ನಿಲ್ಲಬೇಕು. ಆಗ ತುಕಾಲಿ ಸಂತೋಷ್​ ಅವರು ಕಾರ್ತಿಕ್​ಗೆ ಮುತ್ತು ಕೊಟ್ಟರು.

ತುಟಿಗೆ ಮುತ್ತಿಟ್ಟ ಸಂತೋಷ್; ವಾಕರಿಕೆ ಮಾಡಿಕೊಂಡ ಕಾರ್ತಿಕ್
ತುಕಾಲಿ-ಕಾರ್ತಿಕ್
ರಾಜೇಶ್ ದುಗ್ಗುಮನೆ
|

Updated on: Dec 27, 2023 | 7:41 AM

Share

ತುಕಾಲಿ ಸಂತೋಷ್ (Tukali Santosh) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ನಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಸೇರಿದರಂತೂ ಕಾಂಬಿನೇಷನ್ ಭರ್ಜರಿಯಾಗಿ ಇರುತ್ತದೆ. ಈಗ ಕಾರ್ತಿಕ್ ಅವರ ತುಟಿಗೆ ಮುತ್ತಿಡುವ ಪ್ರಯತ್ನ ಮಾಡಿದ್ದಾರೆ ತುಕಾಲಿ ಸಂತೋಷ್. ಇದನ್ನು ನೋಡಿ ಕಾರ್ತಿಕ್ ಅವರು ವಾಕರಿಕೆ ಮಾಡಿಕೊಂಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಡಿಸೆಂಬರ್ 26ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.

ಬಿಗ್ ಬಾಸ್ ಮನೆಯಲ್ಲಿ ಹೊಸ ಚಟುವಟಿಕೆ ನೀಡಲಾಯಿತು. ಅದುವೇ ಪೌಸ್ ಹಾಗೂ ಪ್ಲೇ. ಪೌಸ್ ಎಂದಾಗ ಎಲ್ಲರೂ ಹೇಗಿದ್ದಾರೋ ಹಾಗೆಯೇ ನಿಲ್ಲಬೇಕು. ಪ್ಲೇ ಎಂದಾಗ ಮುಂದುವರಿಯಬೇಕು. ಕಾರ್ತಿಕ್​ಗೆ ಪೌಸ್ ಎಂದರು ಬಿಗ್ ಬಾಸ್. ಕಾರ್ತಿಕ್ ಅವರು ಸ್ಟ್ಯಾಚ್ಯೂ ತರ ನಿಂತರು. ಅಲ್ಲಿಯೇ ಇದ್ದ ತುಕಾಲಿ ಸಂತೋಷ್ ಅವರು ಮಹಿಳಾ ಸ್ಪರ್ಧಿಯಿಂದ ಲಿಪ್​ಸ್ಟಿಕ್ ತೆಗೆದುಕೊಂಡು ಬಂದಿದ್ದಾರೆ.

ತುಟಿಗೆ ಲಿಪ್​ಸ್ಟಿಕ್ ಹಚ್ಚಿಕೊಂಡು ಕಾರ್ತಿಕ್ ತುಟಿಗೆ ಮುತ್ತಿಡಲು ಹೋಗಿದ್ದಾರೆ. ಆ ಮುತ್ತು ತುಟಿಯ ಬದಲು ಕೆನ್ನೆಗೆ ಬಿದ್ದಿದೆ. ಸ್ವಲ್ಪ ತುಟಿಗೂ ತಾಗಿದೆ. ‘ತುಟಿಗೆ ಮುತ್ತು ಕೊಟ್ಟಿಲ್ಲ ನೀವು’ ಎಂದು ನಮ್ರತಾ ಹೇಳಿದರು. ಆ ಬಳಿಕ ತುಕಾಲಿ ಸಂತೋಷ್ ಅವರಿಗೂ ಪೌಸ್ ಎಂದು ಹೇಳಲಾಯಿತು. ಆಗ ಕೆಲವರು ತುಕಾಲಿ ಸಂತೋಷ್ ಅವರ ಶರ್ಟ್ ಒಳಗೆ ಐಸ್ ಹಾಕಿದರು.

ಇದನ್ನೂ ಓದಿ:‘ಸಂಗೀತಾ ಕಳಪೆ, ವಿನಯ್​ ಉತ್ತಮ’: ಮುಖಕ್ಕೆ ಹೊಡೆದಂತೆ ಹೇಳಿದ ಕಾರ್ತಿಕ್​ ಮಹೇಶ್​

ಕೊನೆಗೆ ಕಾರ್ತಿಕ್​ಗೆ ಪ್ಲೇ ಎಂದರು. ತುಕಾಲಿ ಸಂತೋಷ್ ಕಿಸ್ ಕೊಟ್ಟಿದ್ದನ್ನು ನೆನಪಿಸಿಕೊಂಡು ಅವರಿಗೆ ವಾಕರಿಕೆ ಬಂತು. ಹೀಗಾಗಿ ಅವರು ಸಿಂಕ್ ಬಳಿ ಹೋಗಿ ಬಾಯಿ ತೊಳೆದುಕೊಂಡರು. ಅಲ್ಲದೆ, ‘ಥೂ.. ಥೂ..’ ಎಂದು ಉಗಿದುಕೊಂಡರು. ಬಿಗ್ ಬಾಸ್ ಮನೆಯಲ್ಲಿ ಈ ವಾರ ಅಭಿಮಾನಿಗಳಿಗೆ ಸಖತ್ ಸರ್​ಪ್ರೈಸಿಂಗ್ ಆಗಿತ್ತು. ಕುಟುಂಬದವರು ದೊಡ್ಮನೆಗೆ ಬಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್