ನಮಗಿಂತ ಆ ನಟಿಯನ್ನು ರಕ್ಷಿತ್ ಶೆಟ್ಟಿ ಕಾಳಜಿ ಮಾಡಿದ: ಯೋಗಿ-ದಿಗಂತ್ ಅಳಲು, ಯಾರು ಆ ನಟಿ?

Rakshit Shetty: ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ನಿರ್ಮಾಪಕ ರಕ್ಷಿತ್ ಶೆಟ್ಟಿ, ತಮ್ಮಿಬ್ಬರಿಗಿಂತಲೂ ಆ ನಟಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದ ಎಂದು ಯೋಗಿ-ದಿಗಂತ್ ಅಳಲು ತೋಡಿಕೊಂಡಿದ್ದಾರೆ. ಯಾರು ಆ ನಟಿ?

ನಮಗಿಂತ ಆ ನಟಿಯನ್ನು ರಕ್ಷಿತ್ ಶೆಟ್ಟಿ ಕಾಳಜಿ ಮಾಡಿದ: ಯೋಗಿ-ದಿಗಂತ್ ಅಳಲು, ಯಾರು ಆ ನಟಿ?
Follow us
ಮಂಜುನಾಥ ಸಿ.
|

Updated on:Jan 18, 2024 | 12:01 AM

ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಾಣ ಮಾಡಿದ ದಿಗಂತ್ ಹಾಗೂ ಯೋಗಿ ಒಟ್ಟಿಗೆ ನಟಿಸಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಜನವರಿ 26ಕ್ಕೆ ತೆರೆಗೆ ಬರಲಿದೆ. ಯೋಗಿ ಹಾಗೂ ದಿಗಂತ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ಮಾಪಕರು ಸೆಟ್​ಗೆ ಬರ್ತಿದ್ದರಾ? ಎಂಬ ಪ್ರಶ್ನೆಗೆ ಯೋಗಿ, ಶೂಟಿಂಗ್​ ಸಮಯದಲ್ಲಿ ಸೆಟ್​ನಲ್ಲಿ ಒಂದು ಭಾರಿ ಮಾತ್ರ ನಾನು ರಕ್ಷಿತ್ ಅನ್ನು ಭೇಟಿ ಮಾಡಿದೆ ಎಂದರು. ಅದಕ್ಕೆ ದಿಗಂತ್ ಅಂದು ಆ ನಟಿ ಸೆಟ್​ಗೆ ಬಂದಿದ್ದರು ಅದಕ್ಕೆ ಬಂದಿದ್ದ ಎಂದರು. ಅದಕ್ಕೆ ಯೋಗಿ ಅಯ್ಯೋ ಹೌದು, ನೋಡಿ ಬಹುಷಃ ಆ ನಟಿ ಸೆಟ್​ಗೆ ಬಂದಿದ್ದರು ಎಂಬ ಕಾರಣಕ್ಕೆ ರಕ್ಷಿತ್ ಶೆಟ್ಟಿ ಸೆಟ್​ಗೆ ಬಂದಿದ್ದ ಅನ್ನಿಸುತ್ತದೆ ಎಂದರು. ಅಂದಹಾಗೆ ಆ ಹುಡುಗಿ ಯಾರು?

‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಸಿನಿಮಾ ನಟರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ ಹಲವರನ್ನು ಬಳಸಿಕೊಳ್ಳಲಾಗಿದೆ. ಕನ್ನಡದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಒಬ್ಬ ಅಂತರಾಷ್ಟ್ರೀಯ ಯೂಟ್ಯೂಬರ್ ಸಹ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ನಟಿಸಿದ್ದಾರೆ ಅವರೇ ಅಚಾರಾ ಕರ್ಕ್.

ಬಾಯ್​ಫ್ರೆಂಡ್ ಜೊತೆ ಸೇರಿಕೊಂಡು ರಿಯಾಕ್ಷನ್ ವಿಡಿಯೋಗಳನ್ನು ಮಾಡುತ್ತಾ ಬಹಳ ಜನಪ್ರಿಯತೆ ಗಳಿಸಿರುವ ಅಚಾರಾ ಕರ್ಕ್ ಅವರು ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಭಾರತಕ್ಕೆ ಬಂದು ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಯೋಗಿ ತಮಾಷೆಯಾಗಿ ಹೇಳಿದ್ದು ಇದೇ ನಟಿಯ ಬಗ್ಗೆ.

ಅಚಾರಾ ಕರ್ಕ್ ಹಾಗೂ ಜಾಬಿ ಕೇ ಒಟ್ಟಿಗೆ ಭಾರತೀಯ ಸಿನಿಮಾ, ಟ್ರೈಲರ್, ಭಾರತದ ವೈರಲ್ ಕಂಟೆಂಟ್​ ಗಳ ಬಗ್ಗೆ ರಿಯಾಕ್ಷನ್ ವಿಡಿಯೋಗಳನ್ನು ಕೆಲವು ವರ್ಷಗಳಿಂದ ಮಾಡುತ್ತಿದ್ದಾರೆ. ಭಾರತದ ಕೆಲವು ಯೂಟ್ಯೂಬರ್​ಗಳು, ಸಿನಿಮಾ ಕರ್ಮಿಗಳ ಜೊತೆಗೆ ಬಾಂಧವ್ಯವನ್ನೂ ಹೊಂದಿದ್ದಾರೆ. ಭಾರತದ ಕೆಲವು ಸಿನಿಮಾಗಳ ಪ್ರೀಮಿಯರ್ ಶೋಗೂ ಅವರಿಗೆ ಆಹ್ವಾನ ಹೋಗುತ್ತದೆ. ಅವರೂ ಸಹ ಆಸಕ್ತಿಯಿಂದ ಭಾಗವಹಿಸುತ್ತಾರೆ. ಈ ಇಬ್ಬರಿಗೂ ಭಾರತದ ಕಂಟೆಂಟ್ ಬಗ್ಗೆ ಸಿನಿಮಾ ರಂಗಗಳ ಬಗ್ಗೆ ಅತೀವ ಆಸಕ್ತಿ ಹಾಗೂ ಗೌರವಗಳಿವೆ. ಇದೇ ಕಾರಣಕ್ಕೆ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಪಾತ್ರವೊಂದಕ್ಕೆ ಅಚಾರ ಕರ್ಕ್ ಅನ್ನು ಪರಮವಃ ಆಯ್ಕೆ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:57 pm, Wed, 17 January 24

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ