ಡ್ರೋನ್ ಪ್ರತಾಪ್ಗೆ ಮನೆಮಂದಿ ಚುಚ್ಚುಮಾತು; ಎಲ್ಲವನ್ನೂ ಕೇಳಿಸಿಕೊಂಡು ಕಣ್ಣೀರು ಹಾಕಿದ ಸಂಗೀತಾ
ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಡ್ರೋನ್ ಪ್ರತಾಪ್ ವಿರುದ್ಧ ಚುಚ್ಚು ಮಾತುಗಳನ್ನು ಆಡಿದ್ದಾರೆ. ಕಾರ್ತಿಕ್ ಮಹೇಶ್ ಕೂಡ ಖಾರವಾಗಿ ಮಾತಾಡಿದ್ದಾರೆ. ಅವರ ಮಾತುಗಳನ್ನು ಕೇಳಿಸಿಕೊಂಡು ಸಂಗೀತಾಗೆ ತುಂಬ ನೋವಾಗಿದೆ. ಅವರು ಕಣ್ಣೀರು ಹಾಕಿದ್ದಾರೆ. ಪ್ರತಾಪ್ ಸಹ ಅಳುತ್ತಲೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಸೀಸನ್ನ ಕೊನೆಯ ಕಳಪೆ ಪಟ್ಟ ಅವರಿಗೆ ಸಿಕ್ಕಿದೆ.
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ಸೀಸನ್ನ ಕೊನೆಯ ಕಳಪೆ ಪಟ್ಟ ಡ್ರೋನ್ ಪ್ರತಾಪ್ಗೆ ನೀಡಲಾಗಿದೆ. ಕಳಪೆ ನೀಡುವಾಗ ಎಲ್ಲರೂ ಡ್ರೋನ್ ಪ್ರತಾಪ್ (Drone Prathap) ವಿರುದ್ಧ ಚುಚ್ಚು ಮಾತುಗಳನ್ನು ಆಡಿದ್ದಾರೆ. 15 ವಾರದ ಜರ್ನಿಯನ್ನು ಪರಿಗಣಿಸಿ ವಿನಯ್ ಅವರು ಪ್ರತಾಪ್ನ ಕಳಪೆ ಎಂದಿದ್ದಾರೆ. ಕಾರ್ತಿಕ್ ಮಹೇಶ್ ಕೂಡ ಪ್ರತಾಪ್ ವಿರುದ್ಧ ಖಾರವಾಗಿ ಮಾತಾಡಿದ್ದಾರೆ. ಅವರ ಮಾತುಗಳನ್ನು ಕೇಳಿಸಿಕೊಂಡು ಸಂಗೀತಾ ಶೃಂಗೇರಿಗೆ ತುಂಬ ನೋವಾಗಿದೆ. ಅವರು ಕಣ್ಣೀರು ಹಾಕಿದ್ದಾರೆ. ‘ಇಷ್ಟು ವಾರಗಳ ಕಾಲ ಸಂಗೀತಾ ಅವರು ನನ್ನ ಪರವಾಗಿ ನಿಂತಿದ್ದರು. ಅದಕ್ಕೆ ನಾನು ಋಣಿಯಾಗಿದ್ದೇನೆ’ ಎಂದು ಪ್ರತಾಪ್ ಕೂಡ ಕಣ್ಣೀರು ಸುರಿಸಿದ್ದಾರೆ. ಅವರನ್ನು ಜೈಲಿಗೆ ಕಳಿಸುವಾಗ ಸಂಗೀತಾ (Sangeetha Sringeri) ಸಮಾಧಾನ ಮಾಡಿದ್ದಾರೆ. ಈ ಸಂಚಿಕೆ ಜ.19ರಂದು ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ಚಾನೆಲ್ ಹಾಗೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಬಿತ್ತರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ