AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್​ಗೆ ತುಕಾಲಿ ಸಂತು ಕೊಟ್ಟರು ಒಂದು ಬ್ರಿಲಿಯಂಟ್ ಐಡಿಯಾ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ಫಿನಾಲೆ ವಾರ ತಲುಪಿದೆ. ಇನ್ನು ಎರಡು ದಿನದಲ್ಲಿ ವಿನ್ನರ್ ಘೋಷಣೆ ಆಗಲಿದೆ. ಇದೀಗ ತುಕಾಲಿ ಸಂತು, ಬಿಗ್​ಬಾಸ್​ಗೆ ಒಂದು ಒಳ್ಳೆಯ ಐಡಿಯಾ ನೀಡಿದ್ದಾರೆ.

ಬಿಗ್​ಬಾಸ್​ಗೆ ತುಕಾಲಿ ಸಂತು ಕೊಟ್ಟರು ಒಂದು ಬ್ರಿಲಿಯಂಟ್ ಐಡಿಯಾ
ತುಕಾಲಿ ಸಂತೋಷ್
ಮಂಜುನಾಥ ಸಿ.
|

Updated on: Jan 26, 2024 | 10:07 AM

Share

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಫಿನಾಲೆ ವಾರ ನಡೆಯುತ್ತಿದೆ. ಇನ್ನು ಎರಡು ದಿನದಲ್ಲಿ ಫಿನಾಲೆ ವಿನ್ನರ್ ಘೋಷಣೆ ಆಗಲಿದೆ. ಮನೆಯಲ್ಲಿ ಸದ್ಯಕ್ಕೆ ಆರು ಮಂದಿ ಇದ್ದಾರೆ. ಇದರಲ್ಲಿ ಒಬ್ಬರು ಮಾತ್ರವೇ ವಿಜೇತರಾಗಲಿದ್ದಾರೆ. ಗುರುವಾರ ನಡೆದ ಎಪಿಸೋಡ್​ನಲ್ಲಿ ಡ್ರೋನ್ ಪ್ರತಾಪ್ ಮಿಡ್ ವೀಕ್ ಎಲಿಮಿನೇಷನ್ ಆಗಿ ಹೊರಗೆ ಹೋಗಿದ್ದರು. ಆದರೆ ಸುದೀಪ್ ಅವರಿಂದಾಗಿ ಪ್ರತಾಪ್ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಅರ್ಹತೆ ಇರುವ ಆರೂ ಮಂದಿ ಫಿನಾಲೆ ವರೆಗೆ ಇರಬೇಕೆಂದು ಇದೇ ಮೊದಲನೇ ಬಾರಿಗೆ ಆರು ಮಂದಿಯನ್ನು ಫಿನಾಲೆಗೆ ಉಳಿಸಿಕೊಳ್ಳಲಾಗಿದೆ.

ಗುರುವಾರದ ಎಪಿಸೋಡ್​ನಲ್ಲಿ ಪ್ರತಾಪ್ ಇನ್ನೇನೆ ಎಲಿಮಿನೇಟ್ ಆಗಿ ಹೋಗುವುದರಲ್ಲಿದ್ದಾಗ ತುಕಾಲಿ ಸಂತು ಸೇರಿದಂತೆ ಮನೆಯ ಇತರೆ ಸದಸ್ಯರು ಬೇಸರದಿಂದ ಬೀಳ್ಕೊಟ್ಟರು. ಆದರೆ ಪ್ರತಾಪ್ ಸಹ ಫಿನಾಲೆಗೆ ಉಳಿದುಕೊಳ್ಳಲಿದ್ದಾರೆ ಎಂದು ಘೋಷಣೆಯಾಗಿ ಮನೆಯ ಸದಸ್ಯರು ನಿರಾಳವಾದರು. ಅದರ ಬಳಿಕ ತುಕಾಲಿ ಸಂತು ಬಿಗ್​ಬಾಸ್​ಗೆ ಒಂದು ಬ್ರಿಲಿಯಂಟ್ ಐಡಿಯಾ ಕೊಟ್ಟರು.

ತೂಗುಯ್ಯಾಲೆ ಮೇಲೆ ವರ್ತೂರು ಸಂತು ಜೊತೆಗೆ ಕೂತಿದ್ದ ತುಕಾಲಿ ಸಂತು, ಮಿಮಿಕ್ರಿ ಮಾಡುತ್ತಾ, ‘ಮನೆಯವರ ಎಲಿಮಿನೇಷನ್ ಪ್ರಕಾರ ಪ್ರತಾಪ್ ಮನೆಯಿಂದ ಹೊರಗೆ ಹೋಗುತ್ತಿದ್ದರು ಆದರೆ ಎಲ್ಲರಿಗೂ ಶಾಕ್ ನೀಡಿ ಟಾಪ್ 6 ಎಂದು ಆರೂ ಮಂದಿಯನ್ನು ಉಳಿಸಿಕೊಂಡರಲ್ಲ ಬಿಗ್​ಬಾಸ್, ನಿಮ್ಮನ್ನು ನೋಡಿದರೆ ಬಹಳ ಖುಷಿಯಾಗುತ್ತೆ. ಅದೇ ರೀತಿ, ಕಪ್ ಅನ್ನೂ ಸಹ ಆರೂ ಜನಕ್ಕೆ ಹಂಚಿ ಕೊಟ್ಟು ಕಳಿಸಿದರೆ ಎಲ್ಲರಿಗೂ ಖುಷಿಯಾಗುತ್ತೆ ಬಿಗ್​ಬಾಸ್. ಇದೊಂದು ಇತಿಹಾಸವನ್ನು ಸೃಷ್ಟಿಮಾಡಿಬಿಡಿ’ ಎಂದಿದ್ದಾರೆ.

ಇದನ್ನೂ ಓದಿ:ಆಸೆಗಳ ಬಿಚ್ಚಿಟ್ಟ ಮನೆ ಮಂದಿ, ಈಡೇರಿಸುತ್ತಾರಾ ಬಿಗ್​ಬಾಸ್? ಯಾರ ಆಸೆ ಏನು?

ಮುಂದುವರೆದು, ‘ಐವತ್ತು ಲಕ್ಷ ಹಣವನ್ನು ಒಬ್ಬೊಬ್ಬರಿಗೆ ಎಂಟೆಂಟು ಲಕ್ಷದಂತೆ ಹಂಚಿಬಿಡಿ, ಒಂದು ಕಪ್​ನ ಜೆರಾಕ್ಸ್ ಮಾಡಿ ಆರು ಕಪ್ ಗಳನ್ನಾಗಿ ಮಾಡಿ ಆರೂ ಜನಕ್ಕೆ ಹಂಚಿಬಿಡಿ. ಗೆದ್ದ ಒಬ್ಬರಿಗೆ ಒಂದು ಕಾರು ನೀಡುವ ಬದಲಿಗೆ ಆರು ಕಾರು ತರಿಸಿ, ಒಬ್ಬೊಬ್ಬರನ್ನು ಒಂದೊಂದರಲ್ಲಿ ಕೂರಿಸಿ ಕಳಿಸಿಬಿಡಿ. ಇದರಿಂದ ಯಾರಿಗೂ ಬೇಜಾರಾಗೊಲ್ಲ ಬಿಗ್​ಬಾಸ್’ ಎಂದಿದ್ದಾರೆ ತುಕಾಲಿ.

ಸದ್ಯಕ್ಕೆ ಸಂಗೀತಾ, ವಿನಯ್, ಡ್ರೋನ್ ಪ್ರತಾಪ್, ಕಾರ್ತಿಕ್, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರುಗಳು ಬಿಗ್​ಬಾಸ್ ಮನೆಯಲ್ಲಿದ್ದಾರೆ. ಈ ಆರೂ ಜನ ಫಿನಾಲೆಗೆ ತಲುಪಿದ್ದು, ಫಿನಾಲೆ ದಿನ ಇದರಲ್ಲಿ ನಾಲ್ವರು ಹೊರಗೆ ಹೋಗಲಿದ್ದಾರೆ. ಕೊನೆಗೆ ಉಳಿವ ಇಬ್ಬರಲ್ಲಿ ಒಬ್ಬರು ಟೈಟಲ್ ಗೆಲ್ಲಲಿದ್ದಾರೆ. ಗೆದ್ದವರಿಗೆ 50 ಲಕ್ಷ ಹಣದ ಜೊತೆಗೆ ಒಂದು ಕಾರು ಉಡುಗೊರೆಯಾಗಿ ಸಿಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ