ಬಿಗ್ ಬಾಸ್ ಫಿನಾಲೆಗೆ ಕ್ಷಣಗಣನೆ: ಇಂದು ಎಷ್ಟು ಜನರ ಎಲಿಮಿನೇಷನ್?

Bigg Boss Kannada Finale: ಬಿಗ್ ಬಾಸ್ ಫಿನಾಲೆ ಸಾಮಾನ್ಯವಾಗಿ ಸಂಜೆ ಆರು ಗಂಟೆಗೆ ಆರಂಭ ಆಗುತ್ತಿತ್ತು. ಆದರೆ, ಈ ಬಾರಿ ವಾಹಿನಿಯವರು ನಿರ್ಧಾರ ಬದಲಿಸಿದ್ದಾರೆ ಎನ್ನಲಾಗಿದೆ. ರಾತ್ರಿ 7:30ಕ್ಕೆ ಫಿನಾಲೆ ಆರಂಭ ಆಗಲಿದೆ.

ಬಿಗ್ ಬಾಸ್ ಫಿನಾಲೆಗೆ ಕ್ಷಣಗಣನೆ: ಇಂದು ಎಷ್ಟು ಜನರ ಎಲಿಮಿನೇಷನ್?
Follow us
ರಾಜೇಶ್ ದುಗ್ಗುಮನೆ
|

Updated on:Jan 27, 2024 | 7:10 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಫಿನಾಲೆಗೆ ಕ್ಷಣಗಣನೆ ಆರಂಭ ಆಗಿದೆ. ಇಂದು (ಜನವರಿ 27) ಹಾಗೂ ನಾಳೆ (ಜನವರಿ 28) ರಾತ್ರಿ ಅದ್ದೂರಿಯಾಗಿ ಫಿನಾಲೆ ನಡೆಯಲಿದೆ. ಇದಕ್ಕೆ ಬೆಳಿಗ್ಗಿನಿಂದಲೇ ಶೂಟ್ ನಡೆಯಲಿದೆ. ಕೊನೆಯ ಭಾಗದ ಶೂಟ್​​ಗಳನ್ನು ಭಾನುವಾರ ನಡೆಸುವ ಸಾಧ್ಯತೆ ಇದೆ ಎಂದು ವರದಿ ಆಗಿದೆ. ಈ ಬಾರಿಯ ಸೀಸನ್ ಸಾಕಷ್ಟು ಟಿಆರ್​ಪಿ ತಂದುಕೊಂಟ್ಟಿದೆ. ಹೀಗಾಗಿ, ಗ್ರ್ಯಾಂಡ್ ಆಗಿ ಕಾರ್ಯಕ್ರಮ ನಡೆಸಿಕೊಡಲು ವಾಹಿನಿಯವರು ಮುಂದಾಗಿದ್ದಾರೆ.

ಎಷ್ಟು ಗಂಟೆಗೆ ಆರಂಭ?

ಸಾಮಾನ್ಯವಾಗಿ ಬಿಗ್ ಬಾಸ್ ಫಿನಾಲೆ ಸಂಜೆ ಆರು ಗಂಟೆಗೆ ಆರಂಭ ಆಗುತ್ತಿತ್ತು. ಆದರೆ, ಈ ಬಾರಿ ವಾಹಿನಿಯವರು ನಿರ್ಧಾರ ಬದಲಿಸಿದ್ದಾರೆ. ರಾತ್ರಿ 7:30ಕ್ಕೆ ಫಿನಾಲೆ ಆರಂಭ ಆಗಲಿದೆ. ವಾಹಿನಿಯವರ ಕಡೆಯಿಂದ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.

ಆರು ಮಂದಿ

ಪ್ರತಿ ಬಾರಿ ಐದು ಮಂದಿ ಮಾತ್ರ ಫಿನಾಲೆಯಲ್ಲಿ ಇರುತ್ತಿದ್ದರು. ಆದರೆ, ಈ ಬಾರಿ ಹಾಗಾಗಿಲ್ಲ. ಆರು ಮಂದಿ ಫಿನಾಲೆಯಲ್ಲಿ ಇದ್ದಾರೆ. ಈ ರೀತಿ ಆಗುತ್ತಿರುವುದು ಇದೇ ಮೊದಲು. ಕೆಲವು ವರದಿಗಳ ಪ್ರಕಾರ ಇಂದು ನಾಲ್ಕು ಮಂದಿಯನ್ನು ಹೊರಕ್ಕೆ ಕಳುಹಿಸಿ, ಕೊನೆಯಲ್ಲಿ ಇಬ್ಬರನ್ನು ಫಿನಾಲೆಗೆ ಕಳುಹಿಸುವ ಆಲೋಚನೆ ವಾಹಿನಿಗೆ ಇದೆ ಎನ್ನಲಾಗುತ್ತಿದೆ. ಮೂವರನ್ನು ಇಂದು ಹೊರಕ್ಕೆ ಕಳುಹಿಸಿ, ಉಳಿದ ಮೂವರನ್ನು ಹಾಗೆಯೇ ಉಳಿಸಿಕೊಳ್ಳುವ ಸಾಧ್ಯತೆಯೂ ಇದೆ.

ಏನೆಲ್ಲ ಇರಲಿದೆ?

ಈ ಸೀಸನ್​ನ ಕಿಚ್ಚ ಸುದೀಪ್ ಅವರು ಎಂದಿನ ಗತ್ತಿನಲ್ಲಿ ನಡೆಸಿಕೊಟ್ಟಿದ್ದಾರೆ. ಈ ಕಾರಣಕ್ಕೆ ಅವರಿಗೆ ಗ್ರ್ಯಾಂಡ್ ಎಂಟ್ರಿ ಇರಲಿದೆ. ಎಲಿಮಿನೇಟ್ ಆದ ಸ್ಪರ್ಧಿಗಳ ಜೊತೆ ಸುದೀಪ್ ಅವರು ಒಂದಷ್ಟು ಹೊತ್ತು ಮಾತುಕತೆ ನಡೆಸಲಿದ್ದಾರೆ. ಅದ್ದೂರಿ ವೇದಿಕೆಯ ಮೇಲೆ ಮಾಜಿ ಸ್ಪರ್ಧಿಗಳು ಡ್ಯಾನ್ಸ್ ಮಾಡಲಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಬಂತು ಪ್ರತಾಪ್​ನ ಡ್ರೋನ್​; ಅಂದು ಚುಚ್ಚುಮಾತು, ಇಂದು ಮೆಚ್ಚುಗೆ ಮಾತು

ಕಪ್ ಎತ್ತೋದು..

ಜನವರಿ 28ರಂದು ಕಪ್ ಎತ್ತೋದು ಯಾರು ಎನ್ನುವ ವಿಚಾರ ಗೊತ್ತಾಗಲಿದೆ. ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಮಧ್ಯೆ ಸದ್ಯ ಫೈಟ್ ನಡೆಯುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಗೆ ವೋಟಿಂಗ್ ಲೈನ್ ಬಂದ್ ಆಗಲಿದೆ. ಈ ಬಾರಿ ಕಪ್ ಗೆದ್ದು 50 ಲಕ್ಷ ರೂಪಾಯಿ ತೆಗೆದುಕೊಂಡು ಹೋಗುವವರು ಯಾರು ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:06 am, Sat, 27 January 24

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ