ಬಿಗ್ ಬಾಸ್ ಮನೆಗೆ ಬಂತು ಪ್ರತಾಪ್ನ ಡ್ರೋನ್; ಅಂದು ಚುಚ್ಚುಮಾತು, ಇಂದು ಮೆಚ್ಚುಗೆ ಮಾತು
ಡ್ರೋನ್ ವಿಚಾರವನ್ನೇ ಇಟ್ಟುಕೊಂಡು ಆರಂಭದಲ್ಲಿ ಪ್ರತಾಪ್ ಅವರನ್ನು ಎಲ್ಲರೂ ಗೇಲಿ ಮಾಡಿದ್ದರು. ಚುಚ್ಚುಮಾತುಗಳನ್ನು ಆಡಿದ್ದರು. ಆದರೆ ಬಿಗ್ ಬಾಸ್ ಶೋ ಮುಗಿಯುವಾಗ ಅದೇ ಡ್ರೋನ್ ವಿಚಾರದಲ್ಲಿ ಅವರಿಗೆ ಎಲ್ಲರೂ ಭೇಷ್ ಎಂದಿದ್ದಾರೆ. ಮೆಚ್ಚುಗೆಯ ಮಾತು ತಿಳಿಸಿದ್ದಾರೆ. ‘ನೀನು ಸಾಧನೆ ಮಾಡಿದ್ದೀಯ’ ಎಂದು ಹೊಗಳಿದ್ದಾರೆ.
ಕೆಲವೇ ದಿನಗಳ ಹಿಂದೆ ಬಿಗ್ ಬಾಸ್ (Bigg Boss Kannada) ಮನೆಯ ಸದಸ್ಯರು ಕೆಲವು ಆಸೆಗಳನ್ನು ತೋಡಿಕೊಂಡಿದ್ದರು. ಅದನ್ನು ಈಡೇರಿಸುವುದಾಗಿ ಬಿಗ್ ಬಾಸ್ ಕೂಡ ಭರವಸೆ ನೀಡಿದ್ದರು. 109ನೇ ದಿನದಲ್ಲಿ ಡ್ರೋನ್ ಪ್ರತಾಪ್ (Drone Prathap) ಅವರ ಒಂದು ಆಸೆಯನ್ನು ನೆರವೇರಿಸಲಾಗಿದೆ. ಬಿಗ್ ಬಾಸ್ ಮನೆಯೊಳಗೆ ಡ್ರೋನ್ ತರಿಸಬೇಕು ಎಂದು ಪ್ರತಾಪ್ ಕೇಳಿಕೊಂಡಿದ್ದರು. ಅದು ತಮ್ಮದೇ ಕಂಪನಿಯ ಡ್ರೋನ್. ಅವರ ಕೋರಿಕೆಯಂತೆ ದೊಡ್ಮನೆಯೊಳಗೆ ಡ್ರೋನ್ ತರಿಸಲಾಗಿದೆ. ಅದನ್ನು ನೋಡಿ ಪ್ರತಾಪ್ ತುಂಬಾ ಖುಷಿಪಟ್ಟಿದ್ದಾರೆ. ತಮ್ಮ ಕಂಪನಿಯ ಈ ಡ್ರೋನ್ (Drone) ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ಅವರ ಬಗ್ಗೆ ಇನ್ನುಳಿದ ಸದಸ್ಯರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
‘ಇದು ನನಗೆ ಸ್ಪೈಡರ್ ರೀತಿ ಕಾಣುತ್ತಿದೆ’ ಎಂದು ಸಂಗೀತಾ ಶೃಂಗೇರಿ ಹೇಳಿದರು.‘ಹೊಲಕ್ಕೆ ಔಷಧಿ ಸಿಂಪಡಿಲು ಈ ಡ್ರೋನ್ ಬಳಸಬಹುದು’ ಎಂದು ಹೇಳಿದ ಡ್ರೋನ್ ಪ್ರತಾಪ್ ಅವರು ‘ಇದು ನಮ್ಮಲ್ಲಿ ಇರುವ ಚಿಕ್ಕ ಡ್ರೋನ್. ಇನ್ನೂ ದೊಡ್ಡದು ಇವೆ’ ಎಂದು ಮಾಹಿತಿ ನೀಡಿದರು. ‘ಇದರ ಮೂಲಕ ಅಂಗಾಂಗ ಕೂಡ ಕಳಿಸಬಹುದು’ ಎಂದು ಪ್ರತಾಪ್ ಹೇಳಿದ್ದು ಕೇಳಿ ಎಲ್ಲರಿಗೂ ಅಚ್ಚರಿ ಆಯಿತು.
ಇದನ್ನೂ ಓದಿ: ‘ಡ್ರೋನ್ ಪ್ರತಾಪ್ ಒಳ್ಳೆಯ ಹುಡುಗ’: ಕೊನೇ ಕ್ಷಣದಲ್ಲಿ ಒಪ್ಪಿಕೊಂಡ ವಿನಯ್ ಗೌಡ
‘ಸಣ್ಣ ಇಳುವರಿ ಇರುವ ರೈತರು ಈ ಡ್ರೋನ್ ಬಳಸಬಹುದಾ’ ಎಂದು ತುಕಾಲಿ ಸಂತೋಷ್ ಪ್ರಶ್ನಿಸಿದರು. ‘ಹೌದು.. ನೀವು ಇಟ್ಟುಕೊಂಡು, ನಿಮ್ಮ ಕೆಲಸ ಮುಗಿದ ಬಳಿಕ ಬೇರೆಯವರಿಗೆ ಬಾಡಿಗೆ ನೀಡಬಹುದು’ ಎಂದು ಪ್ರತಾಪ್ ಉತ್ತರಿಸಿದರು. ‘ಇದು ರೈತರಿಗಾಗಿ ಮಾಡಿರುವ ಡ್ರೋನ್. ಇದನ್ನು ತೋರಿಸಲು ಬಿಗ್ ಬಾಸ್ ಈ ಅವಕಾಶ ಕೊಟ್ಟಿದ್ದಕ್ಕೆ ಋಣಿಯಾಗಿ ಇರುತ್ತೇನೆ’ ಎಂದು ಪ್ರತಾಪ್ ಖುಷಿ ಹಂಚಿಕೊಂಡರು.
ಇದನ್ನೂ ಓದಿ: ‘ಡ್ರೋನ್ ಪ್ರತಾಪ್ ಗೆದ್ದರೂ ಗೆಲ್ಲಬಹುದು’ ಎಂದ ವಿನಯ್ ಗೌಡ; ಈ ಮಾತಿಗೆ ಕಾರಣ ಏನು?
ಡ್ರೋನ್ ವಿಚಾರವನ್ನೇ ಇಟ್ಟುಕೊಂಡು ಆರಂಭದಲ್ಲಿ ಪ್ರತಾಪ್ ಅವರನ್ನು ಎಲ್ಲರೂ ಗೇಲಿ ಮಾಡಿದ್ದರು. ಚುಚ್ಚುಮಾತುಗಳನ್ನು ಆಡಿದ್ದರು. ಆದರೆ ಬಿಗ್ ಬಾಸ್ ಶೋ ಮುಗಿಯುವಾಗ ಅದೇ ಡ್ರೋನ್ ವಿಚಾರದಲ್ಲಿ ಅವರಿಗೆ ಎಲ್ಲರೂ ಭೇಷ್ ಎಂದಿದ್ದಾರೆ. ಮೆಚ್ಚುಗೆಯ ಮಾತು ತಿಳಿಸಿದ್ದಾರೆ. ‘ನೀನು ಸಾಧನೆ ಮಾಡಿದ್ದೀಯ. ಬಾರಿ ಖುಷಿ ಆಯಿತು. ಇದು ನಿನ್ನ ದೊಡ್ಡ ಆಸೆ. ಇದು ನಿನ್ನ ಬದುಕಿನ ಕ್ಯಾಪ್ಟನ್. ರೈತರಿಗೆ ನೀನು ಇದನ್ನು ತೋರಿಸಿದ್ದೀಯ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ’ ಎಂದು ತುಕಾಲಿ ಸಂತೋಷ್ ಅವರು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವವರ ಪ್ರೋತ್ಸಾಹದ ಮಾತುಗಳಿಂದ ಪ್ರತಾಪ್ಗೆ ಸಂತೋಷ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ