ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲು; ಈ ಘಟನೆಗಳು ನಡೆದೇ ಇರಲಿಲ್ಲ..
Bigg Boss 10: ಬಿಗ್ಬಾಸ್ ಕನ್ನಡ ಇತಿಹಾಸದಲ್ಲೇ ನಡೆಯದ ಕೆಲವು ಘಟನೆಗಳು ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ ನಡೆದಿವೆ. ಯಾವುವು ಆ ಐತಿಹಾಸಿಕ ಘಟನೆಗಳು?
‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada season 10) ಫಿನಾಲೆಗೆ ಉಳಿದಿರೋದು ಇನ್ನು ಎರಡು ದಿನಗಳು ಮಾತ್ರ. ಈಗಾಗಲೇ ಒಂಭತ್ತು ಸೀಸನ್ಗಳು ಯಶಸ್ವಿ ಆಗಿ ಪೂರ್ಣಗೊಂಡಿವೆ. 10ನೇ ಸೀಸನ್ ಒಳ್ಳೆಯ ಟಿಆರ್ಪಿ ಪಡೆದು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ಬಾರು ಆರು ಸ್ಪರ್ಧಿಗಳು ಫಿನಾಲೆ ತಲುಪಿದ್ದಾರೆ. ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಈ ಮೊದಲು ನಡೆಯದೇ ಇದ್ದ ಹಲವು ಘಟನೆಗಳು ನಡೆದಿವೆ. ಈ ಪಟ್ಟಿ ದೊಡ್ಡದಿದೆ. ಆ ಬಗ್ಗೆ ಇಲ್ಲಿದೆ ವಿವರ..
ವೋಟಿಂಗ್ ಮೂಲಕ ಎಂಟ್ರಿ..
ಸ್ಪರ್ಧಿಗಳನ್ನು ಆಯ್ಕೆ ಮಾಡಿ ನೇರವಾಗಿ ಬಿಗ್ ಬಾಸ್ ಮನೆ ಒಳಗೆ ಕಳುಹಿಸಲಾಗುತ್ತದೆ. ಆದರೆ, ಈ ಬಾರಿ ಹಾಗೆ ಇರಲಿಲ್ಲ. ಪ್ರೇಕ್ಷಕರ ವೋಟಿಂಗ್ ಆಧರಿಸಿ ಸ್ಪರ್ಧಿಗಳ ಆಯ್ಕೆ ಮಾಡಲಾಯಿತು. ಇದರಿಂದ ಸಮರ್ಥರು ಹಾಗೂ ಅಸಮರ್ಥರು ಎಂಬ ಎರಡು ಗುಂಪು ಕೂಡ ಆಯಿತು.
ಆರು ಮಂದಿ..
ಫಿನಾಲೆ ವೀಕ್ನಲ್ಲಿ ಆರು ಮಂದಿ ಇರುತ್ತಾರೆ. ಆ ವಾರ ಒಂದು ಎಲಿಮಿನೇಷನ್ ನಡೆಯುತ್ತದೆ. ಆ ಮೂಲಕ ಫಿನಾಲೆ ವೀಕ್ಗೆ ಐದು ಮಂದಿ ಇರುತ್ತಾರೆ. ಆದರೆ, ಈ ಸೀಸನ್ನಲ್ಲಿ ಆರು ಮಂದಿ ಇದ್ದಾರೆ. ತುಕಾಲಿ ಸಂತೋಷ್, ವರ್ತೂರು ಸಂತೋಷ್, ಸಂಗೀತಾ ಶೃಂಗೇರಿ, ವಿನಯ್ ಗೌಡ, ಡ್ರೋನ್ ಪ್ರತಾಪ್, ಕಾರ್ತಿಕ್ ಅವರು ಫಿನಾಲೆಯಲ್ಲಿದ್ದಾರೆ.
ಅತಿ ಹೆಚ್ಚು ಆಸ್ಪತ್ರೆ ಸೇರಿದರು..
ಪ್ರತಿ ಸೀಸನ್ನಲ್ಲಿ ಕೆಲವರು ಆಸ್ಪತ್ರೆ ಸೇರುತ್ತಾರೆ. ಆದರೆ, ಈ ಬಾರಿ ಅತಿ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದಾರೆ. ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಸೇರಿ ಅನೇಕರು ಆಸ್ಪತ್ರೆ ಬಾಗಿಲು ತಟ್ಟಿ ಬಂದಿದ್ದಾರೆ.
ನಿಜವಾದ ಜೈಲಿಗೆ ಹೋದ್ರು..
ಬಿಗ್ ಬಾಸ್ ಜೈಲಿಗೆ ಹಾಕೋದು ಪ್ರತಿ ವಾರ ನಡೆಯುವ ಪ್ರಕ್ರಿಯೆ. ಈ ಬಾರಿ ಸ್ಪರ್ಧಿ ನಿಜವಾದ ಜೈಲಿಗೆ ಹೋದರು. ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಗೆ ಬಂದರು. ಅವರು ಹಾಕಿದ್ದ ಹುಲಿ ಉಗುರಿನ ಲಾಕೆಟ್ ಸಾಕಷ್ಟು ಹೈಲೈಟ್ ಆಯಿತು. ಈ ಪ್ರಕರಣದಲ್ಲಿ ಅವರು ಬಂಧನಕ್ಕೆ ಒಳಗಾದರು. ನಂತರ ಮರಳಿ ದೊಡ್ಮನೆಗೆ ಬಂದರು. ಈಗ ಅವರು ಫಿನಾಲೆ ತಲುಪಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ರಾಜನಾದ ತುಕಾಲಿ, ಪ್ರತಾಪ್ ಖುಷಿಗೆ ಪಾರವೇ ಇಲ್ಲ
ವಸ್ತುವಿಗೆ ಚಪ್ಪಾಳೆ
ಸುದೀಪ್ ಅವರು ಉತ್ತಮ ಪರ್ಫಾರ್ಮೆನ್ಸ್ ನೀಡಿದವರಿಗೆ ‘ಕಿಚ್ಚನ ಚಪ್ಪಾಳೆ’ ಕೊಡುತ್ತಾರೆ. ಬಹುತೇಕ ವಾರಗಳಲ್ಲಿ ಇದು ನಡೆಯುತ್ತದೆ. ಈ ಬಾರಿ ಒಂದು ವಸ್ತುವಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಅದು ಬಳೆಗೆ. ಕಿಚ್ಚನ ಚಪ್ಪಾಳೆ ಪಡೆಯೋದು ಅಷ್ಟು ಸುಲಭದ ಮಾತಲ್ಲ. ಈ ರೀತಿಯ ಚಪ್ಪಾಳೆ ಬಳೆಗೆ ಸಿಕ್ಕಿತ್ತು ಅನ್ನೋದು ವಿಶೇಷ. ಮಹಿಳೆಯರು ಸ್ಟ್ರಾಂಗ್ ಅಲ್ಲ ಎನ್ನುವ ಅರ್ಥದಲ್ಲಿ ವಿನಯ್ ಗೌಡ ಮಾತನಾಡಿದ್ದರು. ಇದನ್ನು ಸಂಗೀತಾ ಪ್ರಶ್ನೆ ಮಾಡಿದ್ದರು. ಈ ವೇಳೆ ಬಳೆಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು. ವಸ್ತುವಿಗೆ ಚಪ್ಪಾಳೆ ಸಿಕ್ಕಿದ್ದು ಅದೇ ಮೊದಲು.
ಬದಲಾದ ಉತ್ತಮ
ಬಿಗ್ ಬಾಸ್ ಮನೆಯಲ್ಲಿ ನಡೆಯುವ ಉತ್ತಮ ಹಾಗೂ ಕಳಪೆ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಇದನ್ನು ಸರಿಯಾಗಿ ನೀಡುತ್ತಿಲ್ಲ ಎಂಬುದು ಅನೇಕರ ಆರೋಪ. ಇದನ್ನು ಸುದೀಪ್ ಸರಿ ಮಾಡಿದ್ದರು. ಒಂದು ವಾರ ವಿನಯ್ ಒಳ್ಳೆಯ ರೀತಿಯಲ್ಲಿ ಆಡಿರಲಿಲ್ಲ. ಆದಾಗ್ಯೂ ಅವರಿಗೆ ಉತ್ತಮ ಸಿಕ್ಕಿತ್ತು. ಇದನ್ನು ಸುದೀಪ್ ಪ್ರಶ್ನೆ ಮಾಡಿದರು. ಆ ಬಳಿಕ ವಿನಯ್ ಅವರಿಂದ ಉತ್ತಮ ಪಟ್ಟ ತೆಗೆದು ಸ್ನೇಹಿತ್ಗೆ ನೀಡಲಾಯಿತು. ಈ ರೀತಿ ಆಗಿದ್ದು ಇದೇ ಮೊದಲು.
ಜೈಲಿನಿಂದ ಎಸ್ಕೇಪ್
ಕಳಪೆ ಪಡೆದು ಜೈಲು ಸೇರಿದ ಬಳಿಕ ಅಲ್ಲಿಯೇ ಒಂದು ದಿನ ಇರಬೇಕು. ಕಳೆದ 9 ಸೀಸನ್ಗಳಲ್ಲಿ ಅನೇಕರು ದೊಡ್ಮನೆಯ ಜೈಲಿಗೆ ಹೋಗಿ ಬಂದಿದ್ದಾರೆ. ಯಾರು ಕೂಡ ಜೈಲಿನಿಂದ ಹೊರ ಹೋಗುವ ಪ್ರಯತ್ನ ಮಾಡಿರಲಿಲ್ಲ. ಬಿಗ್ ಬಾಸ್ ಜೈಲಿನಿಂದ ವರ್ತೂರು ಸಂತೋಷ್ ಅವರು ಹೊರ ಬಂದರು. ಅಗಲವಾದ ಜೈಲಿನ ಕಂಬಿಯಿಂದ ಸರಾಗವಾಗಿ ಅವರು ನುಸುಳಿ ಬಂದಿದ್ದರು.
ಇದನ್ನೂ ಓದಿ:ಬಿಗ್ಬಾಸ್ಗೆ ತುಕಾಲಿ ಸಂತು ಕೊಟ್ಟರು ಒಂದು ಬ್ರಿಲಿಯಂಟ್ ಐಡಿಯಾ
ಕ್ಯಾಪ್ಟನ್ ಔಟ್
ಕ್ಯಾಪ್ಟನ್ ಆದ ವಾರ ಯಾವ ಸ್ಪರ್ಧಿಗೂ ಇಮ್ಯೂನಿಟಿ ಸಿಗುವುದಿಲ್ಲ. ಅದು ದೊರಕೋದು ಮುಂದಿನ ವಾರಕ್ಕೆ. ಕ್ಯಾಪ್ಟನ್ ಆಗಿದ್ದಾರೆ ಎಂದರೆ ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ ಎಂದೇ ಅರ್ಥ. ನೀತು ಅವರು ಕ್ಯಾಪ್ಟನ್ ಆದ ವಾರವೇ ಔಟ್ ಆದರು. ಇದು ಅವರಿಗೆ ಶಾಕಿಂಗ್ ಎನಿಸಿತ್ತು.
ಎಲಿಮಿನೇಷನ್ ರದ್ದು
ಬಿಗ್ ಬಾಸ್ನಲ್ಲಿ ಅನೇಕ ಬಾರಿ ಎಲಿಮಿನೇಷನ್ ರದ್ದಾಗಿದೆ. ಇದಕ್ಕೆ ನಾನಾ ಕಾರಣ. ಆದರೆ, ಸೇವ್ ಆದ ಸ್ಪರ್ಧಿ ತಾವು ಮನೆಯಿಂದ ಹೊರ ಹೋಗುವುದಾಗಿ ಹಠ ಹಿಡಿದು ಕುಳಿತಿದ್ದರಿಂದ ಎಲಿಮಿನೇಷನ್ ರದ್ದಾಯಿತು. ಈ ರೀತಿ ಹಠ ಹಿಡಿದು ಕುಳಿತಿದ್ದು ವರ್ತೂರು ಸಂತೋಷ್. ಅವರನ್ನು ಸಮಾಧಾನ ಮಾಡೋಕೆ ತಾಯಿಯೇ ಬರಬೇಕಾಯಿತು.
ಸುದೀಪ್ ವಿಶೇಷ ಅಧಿಕಾರ..
ಎಲಿಮಿನೇಷನ್ ಸಂದರ್ಭದಲ್ಲಿ ಇಬ್ಬರು ಸ್ಪರ್ಧಿಗಳ ಪೈಕಿ ಔಟ್ ಆಗಲು ಇಬ್ಬರೂ ಅರ್ಹರು ಅಲ್ಲ ಎಂದರೆ ಸುದೀಪ್ ವಿಶೇಷ ಅಧಿಕಾರ ಬಳಸಿ ಇಬ್ಬರನ್ನೂ ಸೇವ್ ಮಾಡಬಹುದು. ಆದರೆ, ಸುದೀಪ್ ಅವರು ಈ ಅಧಿಕಾರವನ್ನು ಇಲ್ಲಿಯವರೆಗೆ ಬಳಕೆ ಮಾಡಿರಲಿಲ್ಲ. ಈ ಬಾರಿಯ ಬಿಗ್ ಬಾಸ್ನಲ್ಲಿ ಅವರು ಈ ಅಧಿಕಾರ ಬಳಸಿ ಅನೇಕರಿಗೆ ಅಚ್ಚರಿ ಮೂಡಿಸಿದರು. ಮೈಕಲ್ ಹಾಗೂ ಸ್ನೇಹಿತ್ ಎಲಿಮಿನೇಷನ್ ಲಿಸ್ಟ್ನಲ್ಲಿದ್ದರು. ಇಬ್ಬರನ್ನೂ ಅವರು ಸೇವ್ ಮಾಡಿದರು.
ಲಕ್ಷುರಿ ಬಜೆಟ್ ಮಿಸ್..
ಲಕ್ಷುರಿ ಬಜೆಟ್ ಕೆಲವೊಮ್ಮೆ ಮಿಸ್ ಆಗುತ್ತಿದ್ದವು. ತಪ್ಪನ್ನು ತಿದ್ದಿಕೊಂಡು ಸ್ಪರ್ಧಿಗಳು ಮುನ್ನಡೆಯುತ್ತಿದ್ದರು. ಆದರೆ, ಈ ಬಾರಿ ಕೊನೆಯವರೆಗೂ ಸ್ಪರ್ಧಿಗಳಿಗೆ ಅದನ್ನು ತಿದ್ದಿಕೊಳ್ಳೋಕೆ ಸಾಧ್ಯವೇ ಆಗಿಲ್ಲ. ಬೆರಳೆಣಿಕೆಯ ಲಕ್ಷುರಿ ಬಜೆಟ್ ಪಡೆದುಕೊಂಡಿದ್ದಾರೆ.
ಸ್ಪರ್ಧಿಗಳಿಗೆ ಬಯ್ಯುತ್ತಾ ಎಲಿಮಿನೇಷನ್
ತನಿಷಾ ಕುಪ್ಪಂಡ ಎಲಿಮಿನೇಷನ್ ಭಿನ್ನ ಎನಿಸಿಕೊಂಡಿದೆ. ಇದಕ್ಕೆ ಕಾರಣವೂ ಇದೆ. ಪ್ರತಿ ಬಾರಿ ಬಿಗ್ ಬಾಸ್ ಎಲಿಮಿನೇಷನ್ ನಡೆಯುವಾಗ ಸೈಲೆಂಟ್ ಆಗಿ ಹೊರ ಹೋಗುತ್ತಾರೆ. ಆದರೆ, ಈ ಬಾರಿ ಅವರು ಔಟ್ ಆಗುವಾಗ ಅವರು ಕೂಗಾಡುತ್ತಾ, ಶಪಿಸುತ್ತಾ ಔಟ್ ಆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ