ಈ ಬಾರಿ ಯಾರಿಗೆ ಇದೆ ಬಿಗ್ ಬಾಸ್ ಗೆಲ್ಲೋ ಚಾನ್ಸ್? ಇಲ್ಲಿದೆ ನೋಡಿ ಲೆಕ್ಕಾಚಾರ..
ಕಳೆದ ಸೀಸನ್ಗಳಿಗೆ ಹೋಲಿಸಿದರೆ ಈ ಸೀಸನ್ ಸಖತ್ ಟಫ್ ಆಗಿತ್ತು. ಕಳೆದ ಸೀಸನ್ಗಳಿಗಿಂತ ಈ ಸೀಸನ್ನಲ್ಲಿ ಫೈಟ್ ಜೋರಾಗಿತ್ತು. ಈ ಕಾರಣದಿಂದಲೇ ಈ ಸೀಸನ್ ಹೆಚ್ಚು ಹೈಲೈಟ್ ಆಗಿದೆ. ಟಿಆರ್ಪಿ ಕೂಡ ಉತ್ತಮವಾಗಿಯೇ ಬಂದಿದೆ. ಹಾಗಾದರೆ ಯಾರಿಗೆ ಬಿಗ್ ಬಾಸ್ ಗೆಲ್ಲೋ ಚಾನ್ಸ್ ಇದೆ ಅನ್ನೋ ಬಗ್ಗೆ ಇಲ್ಲಿದೆ ಲೆಕ್ಕಾಚಾರ.
‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಫಿನಾಲೆಗೆ ಉಳಿದಿರೋದು ಇನ್ನು ಕೆಲವೇ ದಿನಗಳು ಮಾತ್ರ. ಭಾನುವಾರ (ಜನವರಿ 28) ರಾತ್ರಿ 11 ಗಂಟೆ ಸುಮಾರಿಗೆ ಕಪ್ ಯಾರು ಎತ್ತಲಿದ್ದಾರೆ ಅನ್ನೋ ವಿಚಾರ ಗೊತ್ತಾಗಲಿದೆ. ಅದಕ್ಕೂ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಲೆಕ್ಕಾಚಾರ ನಡೆಯುತ್ತಿದೆ. ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆರಂಭಿಸಿದ್ದಾರೆ. ಸಂಗೀತಾ ಶೃಂಗೇರಿ, ವಿನಯ್ ಗೌಡ (Vinay Gowda), ಡ್ರೋನ್ ಪ್ರತಾಪ್, ಕಾರ್ತಿಕ್ ಮಹೇಶ್ (Karthik Mahesh), ತುಕಾಲಿ ಸಂತೋಷ್, ವರ್ತೂರು ಸಂತೋಷ್ ಪೈಕಿ ಒಬ್ಬರು ಟ್ರೋಫಿ ಗೆಲ್ಲಲಿದ್ದಾರೆ.
ಕಳೆದ ಸೀಸನ್ಗಳಿಗೆ ಹೋಲಿಸಿದರೆ ಈ ಸೀಸನ್ ಸಖತ್ ಟಫ್ ಆಗಿತ್ತು. ಕಳೆದ ಸೀಸನ್ಗಳಿಗಿಂತ ಈ ಸೀಸನ್ನಲ್ಲಿ ಫೈಟ್ ಜೋರಾಗಿತ್ತು. ಈ ಕಾರಣದಿಂದಲೇ ಈ ಸೀಸನ್ ಹೆಚ್ಚು ಹೈಲೈಟ್ ಆಗಿದೆ. ಟಿಆರ್ಪಿ ಕೂಡ ಉತ್ತಮವಾಗಿಯೇ ಬಂದಿದೆ. ಹಾಗಾದರೆ ಯಾರಿಗೆ ಬಿಗ್ ಬಾಸ್ ಗೆಲ್ಲೋ ಚಾನ್ಸ್ ಇದೆ ಅನ್ನೋ ಬಗ್ಗೆ ಇಲ್ಲಿದೆ ಲೆಕ್ಕಾಚಾರ.
ಸಂಗೀತಾ ಶೃಂಗೇರಿ:
ಬಿಗ್ ಬಾಸ್ ಮನೆಗೆ ಅಸಮರ್ಥರಾಗಿ ಬಂದರು ಸಂಗೀತಾ ಶೃಂಗೇರಿ. ಸಿನಿಮಾದಲ್ಲಿ ನೋಡಿದ ಸಂಗೀತಾಗೂ ಇಲ್ಲಿ ನೋಡಿದ ಸಂಗೀತಾಗೂ ಸಾಕಷ್ಟು ವ್ಯತ್ಯಾಸ ಇದೆ. ಸಂಗೀತಾ ಶೃಂಗೇರಿ ಮೊದಲಿನಿಂದಲೂ ಫೈಟ್ ಮಾಡುತ್ತಲೇ ಬರುತ್ತಿದ್ದಾರೆ. ಅವರು ಸ್ಟ್ರಾಂಗ್ ಲೇಡಿ ಆಗಿ ಕಾಣಿಸಿಕೊಂಡಿದ್ದಾರೆ. ಹಲವು ಕಷ್ಟಗಳನ್ನು ಎದುರಿಸಿದ್ದಾರೆ. ಟಾಸ್ಕ್ಗಳನ್ನು ನೀರು ಕುಡಿದಂತೆ ಮಾಡಿ ತೋರಿಸಿದ್ದಾರೆ. ಈ ಸೀಸನ್ನಲ್ಲಿ ಅನೇಕ ಮಹಿಳಾ ಸ್ಪರ್ಧಿಗಳು ಬಂದಿದ್ದರು. ಈ ಪೈಕಿ ಸಂಗೀತಾ ಶೃಂಗೇರಿ ಹೊರತುಪಡಿಸಿ ಎಲ್ಲರೂ ಔಟ್ ಆಗಿದ್ದಾರೆ. ಅವರು ಏಕಾಂಗಿಯಾಗಿ ಹೋರಾಡಿ ಗಮನ ಸೆಳೆದಿದ್ದಾರೆ. ಇವರು ಕಪ್ ಗೆಲ್ಲೋ ಚಾನ್ಸ್ ಹೆಚ್ಚಿದೆ.
ಇದನ್ನೂ ಓದಿ: ‘ಡ್ರೋನ್ ಪ್ರತಾಪ್ ಗೆದ್ದರೂ ಗೆಲ್ಲಬಹುದು’ ಎಂದ ವಿನಯ್ ಗೌಡ; ಈ ಮಾತಿಗೆ ಕಾರಣ ಏನು?
ವಿನಯ್ ಗೌಡ:
ವಿನಯ್ ಗೌಡ ಅವರು ವಿಲನ್ ಶೇಡ್ನಲ್ಲಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದಲೇ ಅವರು ಅನೇಕರಿಗೆ ಇಷ್ಟ ಆಗಿದ್ದಿದೆ. ಇವರು ಕಪ್ ಗೆಲ್ಲೋ ರೇಸ್ನಲ್ಲಿ ಟಾಪ್ನಲ್ಲಿದ್ದಾರೆ. ಇವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇವರು ಈ ಬಾರಿ ಕಪ್ ಎತ್ತಿದರೂ ಅಚ್ಚರಿ ಏನಿಲ್ಲ. ಅಗ್ರೆಸ್ ಆಗಿ ನಡೆದುಕೊಳ್ಳುತ್ತಾರೆ, ಮಾತಿನ ಬಗ್ಗೆ ಹಿಡಿತ ಇಲ್ಲ ಎನ್ನುವ ಕಾರಣಕ್ಕೆ ಅನೇಕರಿಂದ ಅವರು ಟೀಕೆಗೆ ಒಳಗಾಗಿದ್ದು ಇದೆ. ಆದಾಗ್ಯೂ ಅವರ ಅಭಿಮಾನಿ ಬಳಗ ಹಿರಿದಾಗುತ್ತಲೇ ಇದೆ. ಅನೇಕ ಸೆಲೆಬ್ರಿಟಿಗಳ ಬೆಂಬಲ ಇವರಿಗೆ ಸಿಗುತ್ತಿದೆ.
ಕಾರ್ತಿಕ್ ಮಹೇಶ್:
ಕಾರ್ತಿಕ್ ಮಹೇಶ್ ಅವರಿಗೂ ಬಿಗ್ ಬಾಸ್ ಗೆಲ್ಲೋ ಚಾನ್ಸ್ ಇದೆ. ಅವರ ಅಭಿಮಾನಿ ಬಳಗ ಸಾಕಷ್ಟು ದೊಡ್ಡದಾಗಿದೆ. ಟಾಸ್ಕ್ಗಳನ್ನು ಉತ್ತಮವಾಗಿ ಆಡುತ್ತಾ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವೋಟ್ ಮಾಡೋಕೆ ಕೋರುತ್ತಿದ್ದಾರೆ. ಅವರು ಟಾಸ್ಕ್ ಹಾಗೂ ಎಂಟರ್ಟೇನ್ಮೆಂಟ್ ವಿಚಾರದಲ್ಲಿ ಎಂದಿಗೂ ಹಿಂದೇಟು ಹಾಕಿಲ್ಲ. ಫ್ಲರ್ಟ್ ಮಾಡುತ್ತಾ ಅವರು ಕೆಲವೊಮ್ಮೆ ಟೀಕೆಗೆ ಒಳಗಾಗಿದ್ದು ಇದೆ.
ಇದನ್ನೂ ಓದಿ: ಪ್ರತಾಪ್ ಎಲಿಮಿನೇಟ್ ಆದ್ರೂ ಹೊರಗೆ ಹೋಗಲಿಲ್ಲ: ಸುದೀಪ್ ಕಾರಣದಿಂದ ನಡೆಯಿತು ಅಚ್ಚರಿ
ಡ್ರೋನ್ ಪ್ರತಾಪ್:
ಬಹುಶಃ ಹೊರಗಿರುವ ಅಭಿಪ್ರಾಯವೇ ಬಿಗ್ ಬಾಸ್ ಮನೆಯಲ್ಲೂ ಮುಂದುವರಿದಿದ್ದರೆ ಡ್ರೋನ್ ಪ್ರತಾಪ್ ಎಲಿಮಿನೇಟ್ ಆಗಿ ಅದೆಷ್ಟು ವಾರಗಳು ಕಳೆದಿರುತ್ತಿದ್ದವೇನೋ. ತಾವು ಮಾಡಿದ ಅಷ್ಟೂ ತಪ್ಪುಗಳನ್ನು ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಒಪ್ಪಿಕೊಂಡರು. ಅವರಲ್ಲಿ ಕಂಡ ಒಂದು ಮುಗ್ಧತನ ಎಲ್ಲರಿಗೂ ಇಷ್ಟವಾಯಿತು. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆದರು. ಎಂದಿಗೂ ಸ್ಥಿಮಿತ ಕಳೆದುಕೊಂಡು ವರ್ತಿಸಿಲ್ಲ. ಯಾರ ಬಗ್ಗೆಯೂ ಅವರು ಕೆಟ್ಟ ಪದ ಬಳಕೆ ಮಾಡಿಲ್ಲ. ಎಲ್ಲರೂ ಸಂತೋಷ್ಗೆ ತುಕಾಲಿ ಎಂದೇ ಕರೆಯುತ್ತಾರೆ. ಆದರೆ, ಪ್ರತಾಪ್ ಮಾತ್ರ ಎಂದಿಗೂ ತುಕಾಲಿ ಶಬ್ದ ಬಳಕೆ ಮಾಡಿಲ್ಲ. ಅವರು ಯಾವಾಗಲೂ ಹೇಳೋದು ಕಾಮಿಡಿ ಸಂತೋಷ್ ಎಂದು. ಈ ರೀತಿಯ ಹಲವು ಕಾರಣಕ್ಕೆ ಅವರು ಇಷ್ಟ ಆಗುತ್ತಾರೆ. ಸ್ಟ್ರಾಟಜಿಯಿಂದಲೂ ಗಮನ ಸೆಳೆದಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಿದ್ದು, ಅವರಿಗೂ ಗೆಲ್ಲೋ ಚಾನ್ಸ್ ಇದೆ.
ಉಳಿದವರ ಕಥೆ ಏನು?
ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಕಪ್ ಗೆಲ್ಲೋ ಸಾಧ್ಯತೆ ತುಂಬಾನೇ ಕಡಿಮೆ. ಉಳಿದವರಿಗೆ ಹೋಲಿಕೆ ಮಾಡಿದರೆ ಇವರ ಪರ್ಫಾರ್ಮೆನ್ಸ್ ಹಾಗೂ ಅಭಿಮಾನಿ ವರ್ಗ ಸಣ್ಣದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ