ಕಿಚ್ಚ ಸುದೀಪ್ ಎಷ್ಟು ಸ್ವೀಟ್ ನೋಡಿ; ಅವರು ಇಷ್ಟ ಆಗೋದೇ ಈ ಕಾರಣಕ್ಕೆ..

ಈ ಮೊದಲು ನಡೆದ ಒಂದು ಸೀಸನ್​ನಲ್ಲಿ ಸ್ಪರ್ಧಿಯೊಬ್ಬರು ಅಕ್ಕಿನೇನಿ ನಾಗಾರ್ಜುನ ಬಳಿ ಅವರು ಧರಿಸಿದ್ದ ಜಾಕೆಟ್ ನೀಡುವಂತೆ ಕೋರಿದ್ದರು. ಇದಕ್ಕೆ ಉತ್ತರಿಸಿದ್ದ ಅಕ್ಕಿನೇನಿ ನಾಗಾರ್ಜುನ ಅವರು ‘ಸಾಕು ಕುಳಿತುಕೊಳ್ಳಿ’ ಎಂದು ಹೇಳಿದರು. ಈ ಮೂಲಕ ಜಾಕೆಟ್ ನೀಡುವುದಿಲ್ಲ ಎಂದು ಪರೋಕ್ಷವಾಗಿ ಉತ್ತರಿಸಿದ್ದರು. ಆದರೆ, ಸುದೀಪ್ ಆ ರೀತಿ ಅಲ್ಲ.

ಕಿಚ್ಚ ಸುದೀಪ್ ಎಷ್ಟು ಸ್ವೀಟ್ ನೋಡಿ; ಅವರು ಇಷ್ಟ ಆಗೋದೇ ಈ ಕಾರಣಕ್ಕೆ..
ಕಿಚ್ಚ ಸುದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Feb 04, 2024 | 12:27 PM

ಕಿಚ್ಚ ಸುದೀಪ್ (Kichcha Sudeep) ಅವರು ಕೇವಲ ನಟನಾಗಿ ಮಾತ್ರವಲ್ಲ ಓರ್ವ ವ್ಯಕ್ತಿಯಾಗಿಯೂ ಇಷ್ಟವಾಗುತ್ತಾರೆ. ನಟನೆಯಲ್ಲಿ ಅವರು ಟಾಪ್​ನಲ್ಲಿದ್ದಾರೆ. ಹೀರೋ, ವಿಲನ್ ಹೀಗೆ ಯಾವ ರೀತಿಯ ಪಾತ್ರ ಕೊಟ್ಟರೂ ಅದನ್ನು ಮಾಡಿ ತೋರಿಸುತ್ತಾರೆ. ಇದರ ಜೊತೆಗೆ ಬಿಗ್ ಬಾಸ್ (Bigg Boss Kannada) ನಿರೂಪಣೆಯ ಮೂಲಕವೂ ಅವರು ಗಮನ ಸೆಳೆದಿದ್ದಾರೆ. ಸುದೀಪ್ ಅವರು ಈ ವಿಚಾರದಲ್ಲಿ ಅನೇಕರಿಗೆ ಇಷ್ಟ ಆಗುತ್ತಾರೆ. ಪರ ಭಾಷೆಯಲ್ಲಿ ಸ್ಟಾರ್​ಗಳು ಯಾವ ರೀತಿಯಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಾರೆ, ಸುದೀಪ್ ಅವರು ಯಾವ ರೀತಿಯಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಾರೆ ಎನ್ನುವ ಕುರಿತು ವಿಡಿಯೋ ಒಂದು ವೈರಲ್ ಆಗಿದೆ.

ಕಿಚ್ಚ ಸುದೀಪ್ ಅವರು ಕಳೆದ ಹತ್ತು ಸೀಸನ್​ಗಳನ್ನು ಯಶಸ್ವಿ ಆಗಿ ನಡೆಸಿಕೊಟ್ಟಿದ್ದಾರೆ. ಅವರು ಪ್ರತಿ ಸೀಸನ್​​ನಲ್ಲೂ ಅನೇಕರ ಕಾರಣಗಳಿಗೆ ಪ್ರೇಕ್ಷಕರಿಗೆ ಇಷ್ಟ ಆಗಿದ್ದಾರೆ. ಉಳಿದ ಆ್ಯಂಕರ್​ಗೂ ಕಿಚ್ಚ ಸುದೀಪ್​ಗೂ ಸಾಕಷ್ಟು ವ್ಯತ್ಯಾಸ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಎಲ್ಲರೂ ಕಿಚ್ಚ ಸುದೀಪ್ ಅವರನ್ನು ಹೊಗಳುತ್ತಿದ್ದಾರೆ.

ಸಲ್ಮಾನ್ ಖಾನ್ ಅವರು ಹಿಂದಿಯಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಾರೆ. ಅವರು ಸ್ಪರ್ಧಿಗಳನ್ನು ಎಂದಿಗೂ ತಮ್ಮ ಮನೆಯವರಂತೆ ಕಂಡವರಲ್ಲ. ಅವರು ಸ್ಪರ್ಧಿಗಳಿಗೆ ಬಾಯಿಗೆ ಬಂದಂತೆ ಬೈದಿದ್ದಿದೆ. ತಮ್ಮ ವಸ್ತುಗಳನ್ನು ಅವರು ಎಂದಿಗೂ ಸ್ಪರ್ಧಿಗಳಿಗೆ ನೀಡಿಲ್ಲ. ಸಾಕಷ್ಟು ಬಾರಿ ಅವರು ಕಠಿಣವಾಗಿ ನಡೆದುಕೊಂಡಿದ್ದಾರೆ. ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಬಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ಸ್ಪರ್ಧಿಗಳ ಜೊತೆ ಆಪ್ತವಾಗಿ ಎಂದಿಗೂ ನಡೆದುಕೊಂಡಿಲ್ಲ.

ಇದನ್ನೂ ಓದಿ: ಬಾತ್​ರೂಂನಲ್ಲೂ ಇಡಲಾಗಿತ್ತು ಮೈಕ್ರೋಫೋನ್; ‘ಬಿಗ್ ಬಾಸ್’ ಮುಗಿದಮೇಲೆ ಗೊತ್ತಾಯ್ತು ವಿಚಾರ

ಈ ಮೊದಲು ನಡೆದ ಸೀಸನ್ ಒಂದರಲ್ಲಿ ಸ್ಪರ್ಧಿಯೊಬ್ಬರು ಅಕ್ಕಿನೇನಿ ನಾಗಾರ್ಜುನ ಬಳಿ ಅವರು ಧರಿಸಿದ್ದ ಜಾಕೆಟ್ ನೀಡುವಂತೆ ಕೋರಿದ್ದರು. ಇದಕ್ಕೆ ಉತ್ತರಿಸಿದ್ದ ಅಕ್ಕಿನೇನಿ ನಾಗಾರ್ಜುನ ಅವರು ‘ಸಾಕು ಕುಳಿತುಕೊಳ್ಳಿ’ ಎಂದು ಹೇಳಿದರು. ಈ ಮೂಲಕ ಜಾಕೆಟ್ ನೀಡುವುದಿಲ್ಲ ಎಂದು ಪರೋಕ್ಷವಾಗಿ ಉತ್ತರಿಸಿದ್ದರು. ಆದರೆ, ಸುದೀಪ್ ಆ ರೀತಿ ಅಲ್ಲ. ಸೀಸನ್ 7ರಲ್ಲಿ ಕಿಶನ್ ಅವರು ಸ್ಪರ್ಧಿಸಿದ್ದರು. ಎಲಿಮಿನೇಟ್ ಆದಾಗ ಅವರು ವೇದಿಕೆ ಏರಿದರು. ಸುದೀಪ್ ಜೊತೆ ಅವರು ಮಾತನಾಡುವಾಗ ಜಾಕೆಟ್ ಕೇಳಿದ್ದರು. ‘ನನಗೆ ಬಟ್ಟೆ ಅಂದ್ರೆ ಇಷ್ಟ. ನಿಮ್ಮ ಜಾಕೆಟ್ ನೀಡ್ತೀರಾ’ ಎಂದು ಸುದೀಪ್ ಬಳಿ ಕೇಳಿದರು ಅವರು. ‘ಈಗಲೇ ತೆಗೆದುಕೊಡಬೇಕಾ’ ಎಂದು ಕೇಳಿದರು ಸುದೀಪ್. ತೆಗೆದು ಕೊಟ್ಟರೆ ನಾನೇನು ಅಂದುಕೊಳ್ಳುವುದಿಲ್ಲ ಎಂದರು ಕಿಶನ್. ತಕ್ಷಣ ಸುದೀಪ್ ಅವರು ಜಾಕೆಟ್ ತೆಗೆದುಕೊಟ್ಟರು.

View this post on Instagram

A post shared by @homieeefx

ಈ ಸೀಸನ್​ನಲ್ಲೂ ಸುದೀಪ್ ಅವರು ತಾವು ಧರಿಸಿದ್ದ ಡ್ರೆಸ್​ಗಳನ್ನು ಸ್ಪರ್ಧಿಗಳಿಗೆ ನೀಡಿದ್ದರು. ಕಿಚ್ಚ ಸುದೀಪ್ ಅವರು ಈ ರೀತಿ ಅನೇಕ ಬಾರಿ ಮಾಡಿದ್ದಾರೆ. ಅವರು ಪ್ರತಿ ಬಾರಿ ಬಿಗ್ ಬಾಸ್​ಗೆ ಬರುವ ಸ್ಪರ್ಧಿಗಳನ್ನು ತಮ್ಮ ಕುಟುಂಬದವರಂತೆ ನೋಡುತ್ತಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ‘ಸುದೀಪ್ ಸಖತ್ ಸ್ವೀಟ್’ ಎಂದು ಅಭಿಮಾನಿಗಳು ಹೇಳಿದ್ದರು. ಸುದೀಪ್ ಅವರು ಸದ್ಯ ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿದೆ. ಇದಲ್ಲದೆ, ಸಿಸಿಎಲ್ 10ನೇ ಸೀಸನ್​ನಲ್ಲೂ ಅವರು ತೊಡಗಿಕೊಳ್ಳಲಿದ್ದಾರೆ. ಫೆಬ್ರವರಿ 23ರಿಂದ ಮ್ಯಾಚ್​ಗಳು ಆರಂಭ ಆಗಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ