ಬಾತ್​ರೂಂನಲ್ಲೂ ಇಡಲಾಗಿತ್ತು ಮೈಕ್ರೋಫೋನ್; ‘ಬಿಗ್ ಬಾಸ್’ ಮುಗಿದಮೇಲೆ ಗೊತ್ತಾಯ್ತು ವಿಚಾರ

‘ಬಿಗ್ ಬಾಸ್ ಹಿಂದಿ ಸೀಸನ್ 17’ ಫಿನಾಲೆಯಲ್ಲಿ ಮುನಾವರ್ ಫಾರೂಖಿ, ಅಭಿಷೇಕ್ ಕುಮಾರ್, ಅಂಕಿತಾ ಲೋಖಂಡೆ, ಮನ್ನಾರಾ ಚೋಪ್ರಾ, ಅರುಣ್ ಮಾಶೆಟ್ಟಿ ಇದ್ದರು. ಈ ಪೈಕಿ ಮುನಾವರ್ ಅವರು ಕಪ್ ಗೆದ್ದಿದ್ದಾರೆ. ಮುನಾವರ್ ಕಪ್ ಗೆದ್ದ ಬಗ್ಗೆ ಇಶಾ ಅವರಿಗೆ ಸಾಕಷ್ಟು ಖುಷಿ ಇದೆ.

ಬಾತ್​ರೂಂನಲ್ಲೂ ಇಡಲಾಗಿತ್ತು ಮೈಕ್ರೋಫೋನ್; ‘ಬಿಗ್ ಬಾಸ್’ ಮುಗಿದಮೇಲೆ ಗೊತ್ತಾಯ್ತು ವಿಚಾರ
ಬಿಗ್ ಬಾಸ್ ಬಾತ್​ರೂಂ
Follow us
ರಾಜೇಶ್ ದುಗ್ಗುಮನೆ
|

Updated on: Jan 31, 2024 | 2:55 PM

‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಮೈಕ್ ಬಳಸದೇ ಇರುವ ಜಾಗ ಎಂದರೆ ಅದು ಬಾತ್​ರೂಂ ಮಾತ್ರ. ಅಲ್ಲಿ ಮೈಕ್ ಧರಿಸಲೇಬೇಕು ಎಂಬ ನಿಯಮ ಇಲ್ಲ. ಹೀಗಾಗಿ, ಸ್ಪರ್ಧಿಗಳು ಕೆಲವೊಮ್ಮೆ ಅಲ್ಲಿ ಹೋಗಿ ಮಾತನಾಡಿದ್ದಿದೆ. ಅಕ್ಕ-ಪಕ್ಕದ ಬಾತ್​ರೂಂನಲ್ಲಿ ಕುಳಿತು ಚರ್ಚೆ ಮಾಡಿದ್ದಿದೆ. ಈ ವಿಚಾರವನ್ನು ಅರಿತ ಹಿಂದಿ ಬಿಗ್ ಬಾಸ್ ಮಂದಿ ಬಾತ್​ರೂಂನಲ್ಲೂ ಮೈಕ್ ಇಟ್ಟಿದ್ದರು. ಈ ವಿಚಾರವನ್ನು ‘ಬಿಗ್ ಬಾಸ್ ಹಿಂದಿ ಸೀಸನ್ 17’ ಸ್ಪರ್ಧಿ ಇಶಾ ಮಾಳವಿಯಾ (Isha Malaviya) ಹೇಳಿದ್ದಾರೆ. ಅವರು ಬಿಗ್ ಬಾಸ್ ಫಿನಾಲೆ ತಲುಪುವ ಮೊದಲೇ ಎಲಿಮಿನೇಟ್ ಆಗಿದ್ದರು.

ಭಾರ್ತಿ ಸಿಂಗ್ ಹಾಗೂ ಹರ್ಷ ಜೊತೆ ಇಶಾ ಮಾತನಾಡಿದ್ದಾರೆ. ಈ ವೇಳೆ ಅವರು ಹಲವು ವಿಚಾರ ಹಂಚಿಕೊಂಡಿದ್ದಾರೆ. ‘ವೀಕೆಂಡ್ ಕಾ ವಾರ್’ನಲ್ಲಿ ಸಲ್ಮಾನ್ ಖಾನ್ ಅವರು ಇಶಾಗೆ ಕ್ಲಾಸ್​ ತೆಗೆದುಕೊಂಡಿದ್ದರು. ಈ ವೇಳೆ ಅವರು ಹೋಗಿ ಬಾತ್​ರೂಂನಲ್ಲಿ ಅತ್ತಿದ್ದರು. ಬಾತ್​ರೂಂನಲ್ಲಿ ಮೈಕ್ರೋಫೋನ್ ಇತ್ತು ಅನ್ನೋ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ.

‘ಯಾರಾದರೂ ಬಾತ್​​ರೂಂಗೆ ಮೈಕ್ ಧರಿಸದೇ ಹೋದರೆ ಅದು ಹೆಚ್ಚು ವ್ಯತ್ಯಾಸ ಎನಿಸುವುದಿಲ್ಲ. ಏಕೆಂದರೆ ಬಾತ್​​ರೂಂನ ಛಾವಣಿಯಲ್ಲೇ ಮೈಕ್ರೋಫೋನ್​ಗಳನ್ನು ಇಡಲಾಗಿದೆ. ನೀವು ಬಾತ್​ರೂಂನಲ್ಲಿ ಮಾತನಾಡಿದರೆ ಅಥವಾ ಅತ್ತರೆ ಅದನ್ನು ಕ್ಯಾಪ್ಚರ್ ಮಾಡಲಾಗುತ್ತಿತ್ತು’ ಎಂದಿದ್ದಾರೆ ಇಶಾ. ಟಾಪ್​ ಐದರಲ್ಲಿ ತಮ್ಮ ಹೆಸರೂ ಇರಬಹುದು ಎಂದು ಇಶಾ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಇದು ಅವರಿಗೆ ಬೇಸರ ತರಿಸಿದೆ.

‘ಬಿಗ್ ಬಾಸ್ ಹಿಂದಿ ಸೀಸನ್ 17’ ಫಿನಾಲೆಯಲ್ಲಿ ಮುನಾವರ್ ಫಾರೂಖಿ, ಅಭಿಷೇಕ್ ಕುಮಾರ್, ಮನ್ನಾರಾ ಚೋಪ್ರಾ, ಅಂಕಿತಾ ಲೋಖಂಡೆ, ಅರುಣ್ ಮಾಶೆಟ್ಟಿ ಇದ್ದರು. ಈ ಪೈಕಿ ಮುನಾವರ್ ಅವರು ಕಪ್ ಗೆದ್ದಿದ್ದಾರೆ. ಮುನಾವರ್ ರಿಲೇಶನ್​ಶಿಪ್ ವಿಚಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಆದರೆ, ಈ ಬಗ್ಗೆ ಅಭಿಮಾನಿಗಳು ಹೆಚ್ಚು ಗಮನ ಹರಿಸಿಲ್ಲ. ಈ ಬಗ್ಗೆ ಇಶಾ ಮಾತನಾಡಿದ್ದಾರೆ.

ಇದನ್ನೂ ಓದಿ: ಟ್ರೋಫಿ ಗೆದ್ದ ಬಳಿಕ ಸಲ್ಮಾನ್ ಖಾನ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಮುನಾವರ್

‘ಮುನಾವರ್ ಅಭಿಮಾನಿಗಳು ಈ ವಿಚಾರಗಳಿಂದ ಬೇಸರ ಮಾಡಿಕೊಂಡಿಲ್ಲ. ಅವರು ಗೆದ್ದಿರುವುದೇ ಇದಕ್ಕೆ ಸಾಕ್ಷಿ. ಮುನಾವರ್ ಒಳ್ಳೆಯ ವ್ಯಕ್ತಿ. ಅದು ನಮಗೆ ಗೊತ್ತು’ ಎಂದಿದ್ದಾರೆ ಇಶಾ. ಮುನಾವರ್ ಕಪ್ ಗೆದ್ದ ಬಗ್ಗೆ ಅವರಿಗೆ ಸಾಕಷ್ಟು ಖುಷಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ